ಕಿನ್ನಾಳ ಗ್ರಾಮದಲ್ಲಿ ಶ್ರೀ ಸ್ವಾಮಿ ವಿವೇಕಾನಂದ ಸೇವಾ ಸಂಸ್ಥೆ ಯಿಂದ ನರೇಂದ್ರ ಮೋದಿಯವರ ೫೦೦, ೧೦೦೦ ರೂ ನೋಟುಗಳ ನಿಷೇಧವನ್ನು ಬೆಂಬಲಿಸಿ ಬಸವೇಶ್ವರ ವೃತ್ತದಲ್ಲಿ ಜನ ಜಾಗೃತಿ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.
ಸ್ವಾಮಿ ವಿವೇಕಾನಂದರ ಸೇವಾ ಟ್ರಸ್ಟ್‌ನ ಅಧ್ಯಕ್ಷರಾದ ಮೌನೇಶ ಕಿನ್ನಾಳ ರವರು ನರೇಂದ್ರ ಮೋದಿಯವರ ಭಾವಚಿತ್ರಕ್ಕೆ ಕ್ಷೀರಾಭಿಷೇಕ ಮತ್ತು ಪುಷ್ಪಾರ್ಪಣೆ ಮಾಡುವುದರ ಮೂಲಕ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡುತ್ತಾ ದೇಶ ಅಂತ ಬಂದಾಗ ಪಕ್ಷ ಯಾವುದೇ ಆಗಿರಲಿ, ಪದವಿ ಯಾವುದೇ ಇರಲಿ ನಾವೆಲ್ಲರು ಒಂದಾಗಬೇಕು. ಇಂದು ಎಡ ಪಕ್ಷಗಳು ಕರೆ ನೀಡಿರುವ ಭಾರತ ಬಂದ್‌ಗೆ ನಮ್ಮ ವಿರೋಧವಿದೆ. ಬದುಕಿದರೂ ಭಾರತಕ್ಕಾಗಿ, ಸತ್ತರೂ ಭಾರತಕ್ಕಾಗಿ ಎನ್ನುತ್ತಿರುವ ದೇಶದ ಪ್ರಧಾನಿಗೆ ನಮ್ಮ ಬೆಂಬಲ ಸದಾ ಇರಬೇಕು. ಜನರೂ ಯಾವುದೇ ಕಾರಣಕ್ಕೂ ಬಂದ್‌ಗೆ ಬೆಂಬಲ ನೀಡಬಾರದು. ದೇಶದ ಹೊರಗಿರುವ ಭಯೋತ್ಪಾದಕರನ್ನು ನಿಗ್ರಹಿಸಲು ಗಡಿಯಲ್ಲಿ ಸೈನಿಕರಿದ್ದಂತೆ ದೆಶದ ಒಳಗಿರುವ ಭಯೋತ್ಪಾದಕರು, ಭ್ರಷ್ಟಾಚಾರಿಗಳನ್ನು ನಿಗ್ರಹಿಸಲೆಂದೆ ಅವತರಿಸಿರುವ ಮೋದಿಜಿಯವರಿಗೆ ನಮ್ಮ ಬೆಂಬಲ ಎಂದರು.
ಈ ಸಂದರ್ಭದಲ್ಲಿ ಸ್ವಾಮಿ ವಿವೇಕಾನಂದರ ಸೇವಾ ಟ್ರಸ್ಟನ ಪದಾಧಿಕಾರಿಗಳಾದ ಲಿಂಗರಾಜ ಸಿರಗೇರಿ, ಬಸವರಾಜ ಪರಗಿ, ರಂಜಿತ್ ಕಳ್ಳಿಮನಿ, ರವಿಕಿರಣ ಶ್ಯಾವಿ, ಮಂಜುನಾಥ ಮಳ್ಳಿ, ಮೈಲಾರಪ್ಪ ಕುಣಿ, ನಾರಾಯಣ ಕಡ್ಲಿಬಾಳ, ಮಂಜುನಾಥ ಬಂಡಾ, ಮಹೇಶ ಗಾಳಿ, ಮಂಜುನಾಥ ಹುಲಿ, ರಾಘವೇಂದ್ರ ಉಪ್ಪಾರ, ಕನಕಪ್ಪ ವಾಲ್ಮೀಕಿ, ಗ್ರಾಮದ ಹಿರಿಯರು, ಸಾರ್ವಜನಿಕರು, ಮಹಿಳೆಯರು, ಮಕ್ಕಳು ಪಾಲ್ಗೊಂಡಿದ್ದರು.