ನಮ್ಮ ಬಗ್ಗೆ


ಜಗತ್ತಿನ ರಾಷ್ಟ್ರಗಳೆಲ್ಲಾ ಅಂಬೆಗಾಲನ್ನಿಡುತ್ತಿದ್ದ ಸಮಯದಲ್ಲಿ ಜಗತ್ತಿಗೆ ವೇದ ಉಪನಿಷತ್ತುಗಳ ಗ್ರಂಥ ಬಂಡಾರಗಳನ್ನು ಕೊಡುಗೆ ನೀಡಿದ ದೇಶ ನನ್ನದು.
"ಯತ್ರ ನಾರೇಸ್ತು ಪೂಜ್ಯಂತೆ ರಮಂಥೇ ತತ್ರ ದೇವತಾಃ” ಎಲ್ಲಿ ನಾರಿಯರನ್ನು ಗೌರವಿಸಲ್ಪಡುತ್ತಾರೋ ಅಲ್ಲಿ ದೇವತೆಗಳು ನೆಲೆಸಿರುತ್ತಾರೆ ಎನ್ನುವ ಸಂಸ್ಕ್ರತಿ ನಮ್ಮದು.
ಕಾಯಕ ನಮ್ಮ ನಾಯಕ, ಕಾಯಕ ನಮ್ಮ ಆರಾಧಕ, ಕಾಯಕ ನನಗೆ ಪೂರಕ ಪೋಷಕ, ಕಾಯಕವಿಲ್ಲದ ಬದುಕು ಅದು ಬದುಕಲ್ಲ: ಬಾಳಲ್ಲ ನೋಡಾ! ಕಾಯಕವೇ ಉಸಿರಾಗಬೇಕು ಕಾಯಕವಿಲ್ಲದವನ ಬಾಳು ಬಲು ನರಕ ಕಾಣಾ ಪ್ರಭುವೇ, ಎಲ್ಲರೂ ಕಾಯಕ ಯೋಗಿಗಳಾಗುವಂತೆ ಮಾಡಾ ಪ್ರಭುವೇ, ಎನ್ನುವ ಮನಸ್ಥಿತಿಯವರು ನಾವು.
ಪ್ರತಿಯೊಬ್ಬರು ವಿದ್ಯಾವಂತರಾಗಬೇಕು, ನಮ್ಮ ತನವನ್ನು ಉಳಿಸಿ ಬೆಳೆಸಬೇಕು, ಕಾಯಕ ಯೋಗಿಗಳಾಗಬೇಕು ಎನ್ನುವ ನಿಟ್ಟಿನಲ್ಲಿ ಶ್ರೀ ಸ್ವಾಮಿ ವಿವೇಕಾನಂದರ ಮಾತಿನಂತೆ "ಸದೃಡ ಭಾರತಕ್ಕಾಗಿ ಸದೃಡ ಯುವ ಜನತೆಯ ನಿರ್ಮಾಣಕ್ಕಾಗಿ" ಶ್ರೀ ಸ್ವಾಮಿ ವಿವೇಕಾನಂದ ಸೇವಾ ಸಂಸ್ಥೆ ಕಿನ್ನಾಳ ಮುಂದೆ ಅಡಿಯಿಡುತ್ತಿದೆ ತಮ್ಮೆಲ್ಲರ ಸಹಾಯ, ಸಹಕಾರ ಈ ಸಂಸ್ಥೆಯ ಜೊತೆಗಿರಲಿ ಎಂದು ವಿನಂತಿಸಿಕೊಳ್ಳುತ್ತೇವೆ
  
       ನಮ್ಮ ಸಂಸ್ಥೆಯ ಆಶಯಗಳು
  • ಬಡ ಮತ್ತು ಪ್ರತಿಭಾನ್ವಿತ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಸದಾ ಸಂಸ್ಥೆ ಜೊತೆಗಿರುವುದು
  • ಸ್ವಾಸ್ಥ್ಯ ಹಾಗೂ ಸದೃಡ ಸಮಾಜದ ನಿರ್ಮಾಣ ಕಾರ್ಯಕ್ಕೆ ಕೈ ಜೋಡಿಸುವುದು.
  • ನಮಗಾಗಿ ದೇಶ, ದೇಶಕ್ಕಾಗಿ ನಾವು ಎನ್ನುವ ಪರಿಕಲ್ಪನೆ ಮೂಡಿಸುವುದು.
  • ಸ್ತ್ರಿ ಸಬಲೀಕರಣ ಮತ್ತು ಸಮಾನತೆ.
  • "ಉದ್ಯಮಿಯಾಗು ಉದ್ಯೋಗ ನೀಡು” ಎಂದು ಯುವ ಜನತೆಗೆ ಕರೆ ನಿಡುವುದು.
  • "ಸ್ವಂತಕ್ಕೆ ಸ್ವಲ್ಪ ಸಮಾಜಕ್ಕೆ ಸರ್ವಸ್ವ” ಎನ್ನುವ ಮನೋಭಾವ ಮೂಡಿಸುವುದು.
ಶಿಕ್ಷಣ, ಸಂಸೃತಿ, ಸ್ವಾವಲಂಬನೆ ಎನ್ನುವ ತಲೆಬರಹದೊಂದಿಗೆ ನಿಮ್ಮ ಮುಂದಿರುವ ಈ ಸಣ್ಣ ಪ್ರಯತ್ನಕ್ಕೆ ಸಮಾಜದ ಶಕ್ತಿಬಿಂದುಗಳಾಗಿ ನೀವಿರುತ್ತಿರೆಂದು ಭಾವಿಸುತ್ತೆವೆ.