Saturday, March 25, 2017

ಕಿನ್ನಾಳದಲ್ಲಿ ಬಲಿದಾನ ದಿವಸ್ ದೇಶ ಪ್ರೇಮಿಗಳಿಗೆ ನುಡಿನಮನ

ಕೊಪ್ಪಳ : ತಾಲೂಕಿನ ಕಿನ್ನಾಳ ಗ್ರಾಮದಲ್ಲಿ ಸ್ವಾಮಿ ವಿವೇಕಾನಂದ ಸೇವಾ ಸಂಸ್ಥೆ ಕಿನ್ನಾಳ ವತಿಯಿಂದ ಮಾರ್ಚ 23 ರಂದು ಗ್ರಾಮದ ಕನಕದಾಸ ವೃತ್ತದಲ್ಲಿ ಬಲಿದಾನ ದಿವಸ ಕಾರ್ಯಕ್ರಮವನ್ನು ಭಗತ್ ಸಿಂಗ್ ಹಮಾಲರ ಸಂಘದ ಕಾರ್ಮಿಕರಿಗೆ ಸನ್ಮಾನ ಮಾಡುವುದರ ಮೂಲಕ ದೇಶ ಪ್ರೇಮಿಗಳಾದ ರಾಜ್‍ಗುರು ಸುಖದೇವ ಭಗತ್ ಸಿಂಗ್ ಅವರಿಗೆ ಗೌರವ ನಮನಗಳನ್ನು ಸಲ್ಲಿಸಲಾಯಿತು.
ಸಂಸ್ಥೆಯ ಪದಾಧಿಕಾರಿ ಮೈಲಾರಪ್ಪ ಕುಣಿ ಮಾತನಾಡಿ ಭಗತ್‍ಸಿಂಗ್, ರಾಜ್‍ಗುರ್, ಸುಖದೇವ ಅವರ ಬಲಿಧಾನ ದಿನವಾದ ಇಂದು ನಾವೆಲ್ಲರೂ ದೇಶಕ್ಕಾಗಿ ನಮ್ಮನ್ನು ನಾವು ತೊಡಗಿಸಿಕೊಳ್ಳತ್ತೇವೆಂದು ಶಪಥ ಮಾಡಬೇಕಾಗಿದೆ. ಸ್ವಾತಂತ್ರ್ಯ ಎನ್ನುವುದು ನಮಗೆ ಪುಕ್ಕಟೆಯಾಗಿ ಸಿಕ್ಕಿದ್ದಲ್ಲ ಸುಮಾರು ಆರೂವರೆ ಲಕ್ಷ ಬಲಿಧಾನಿಗಳ ತ್ಯಾಗದ ಫವಾಗಿದೆ. ಆದರೆ ಇವತ್ತಿನ ದಿನ ನಮಗೆ ಕ್ರೀಕೆಟರ್ ಮಹೇಂದ್ರ ಸಿಂಗ್ ಗೊತ್ತು ಆದರೆ ಭಗತ್ ಸಿಂಗ್ ಗೊತ್ತಿಲ್ಲಾ, ಕಪಿಲ್‍ದೇವ ಗೊತ್ತು ಸುಖದೇವ ಗೊತ್ತಿಲ್ಲಾ, ಅಪ್ಜಲ್‍ಗುರು ಗೊತ್ತು ರಾಜ್‍ಗುರು ಗೊತ್ತಿಲ್ಲಾ ಹೀಗೆಯೇ ಮುಂದೊರೆದರೆ ಮತ್ತೆ ನಾವುಗಳು ಇನ್ಯಾರದ್ದೊ ಕಪಿಮುಷ್ಟಿಗೆ ಸಿಲುಕಿದರು ಅನುಮಾನವಿಲ್ಲ. ನಮ್ಮ ಮಕ್ಕಳನ್ನು ಕ್ರಾಂತಿಕಾರಿಗಳನ್ನಾಗಿ ಮಾಡದಿದ್ದರು ಚಿಂತೆಯಿಲ್ಲ  ದೇಶಕ್ಕಾಗಿ ಅವರ ಮನ ಮಿಡಿಯುವಂತೆ ತಯಾರು ಮಾಡಬೇಕಾಗಿರುವದು ಪ್ರತಿಯೊಬ್ಬ ಪಾಲಕರ ಆದ್ಯ ಕರ್ತವ್ಯವಾಗಿದೆ ಎಂದರು. ಹಾಗೂ ಹಿರಿಯರಾದ ಭಾಷುಸಾಬ ಹಿರೇಮನಿ ಮಾತನಾಡಿ ಭಗತ್‍ಸಿಂಗ್ ರಾಜ್‍ಗುರು ಸುಖದೇವ್ ಈ ದೇಶದ ಆಸ್ತಿ ಅವರ ಆದರ್ಶಗಳನ್ನು ಇವತ್ತಿನ ಯುವ ಜನತೆ ಪಾಲಿಸುವದರ ಜೋತೆಗೆ ಅವರನ್ನು ಸ್ಮರಿಸುವದು ನಮ್ಮೇಲ್ಲರ ಕರ್ತವ್ಯವಾಗಿದೆ ಎಂದರು.
ನಂತರ ಸನ್ಮಾನ ಸ್ವೀಕರಿಸಿದ ಹಮಾಲರ ಸಂಘದ ಕಾರ್ಮಿಕರಲ್ಲಿ ಒಬ್ಬರಾದ ನಾಗಪ್ಪ ಲ್ಯಾವಕ್ಕಿ ಮಾತನಾಡಿ ಗೌರವ ಸನ್ಮಾನ ಎನ್ನುವದು ಬರಿ ದುಡ್ಡಿರುವವರಿಗೆ, ರಾಜಕಾರಣಿಗಳಿಗೆ ಮಾತ್ರ ಅಂದುಕೊಂಡ್ಡಿದ್ದವು  ಆದರೆ ನಮ್ಮನ್ನು ಗೌರವಿಸಿ ಸನ್ಮಾನ ಮಾಡುವವರು ಇದ್ದಾರೆ ಎನ್ನುವದು ತುಂಬ ಸಂತೋಷವನ್ನು ಉಂಟುಮಾಡಿದೆ ಸ್ವಾಮಿ ವಿವೇಕಾನಂದ ಸೇವಾ ಸಂಸ್ಥೆ ಕಿನ್ನಾಳ ಇನ್ನೂ ಹೆಚ್ಚು ಹೆಚ್ಚು ಇಂತಹ ಕಾರ್ಯಕ್ರಮಗಳನ್ನು ಮಾಡಲು ಆ ದೇವರು ಶಕ್ತಿ ನೀಡಲಿ ಎಂದರು.
ಈ ಕಾರ್ಯಕ್ರಮದಲ್ಲಿ ಗ್ರಾಮದ ಹಿರಿಯರಾದ ಮಂಜುನಾಥ ಸಿರಿಗೇರಿ, ಉದಯ ಚಿತ್ರಗಾರ, ರಾಘವೇಂದ್ರ ಉಪ್ಪಾರ, ಶಿವುಕುಮಾರ ಕಾಕಿ, ನಾಗರಾಜ ಭಾಂಗಡಿ, ನವಿನ ಬಲೂಚಿಗಿ, ವಿನಾಯಕ್ ಪೂಜಾರ, ನಾಗರಾಜ ಚುಟ್ಟಾ, ರವಿಕಿರಣ ಶಾವಿ, ಶಿವುಕುಮಾರ ಪಾಗಿ, ಮಂಜುನಾಥ ಗ್ವಾಡೆಕೇರ, ಬಸವರಾಜ ವಾಲ್ಮಿಕಿ, ಜಗದಿಶ ಜಾಲಿಹಾಳ, ರಂಜಿತ್ ಕಳ್ಳಿಮನಿ, ಅಶ್ವತ್ ನಾರಯಣ ಸಾಗರ, ಮೌನೇಶ ಕಮ್ಮಾರ, ಹಾಗೂ ಸಂಸ್ಥೆಯ ಎಲ್ಲಾ ಪದಾಧಿಕಾರಿಗಳು, ಹಮಾಲರ ಸಂಘದ ಕಾರ್ಮಿಕರು ಹಾಗೂ ಗ್ರಾಮದ ಸಾರ್ವಜನಿಕರು ಉಪಸ್ಥಿತರಿದ್ದರು. ಕೊನೆಯದಾಗಿ ಲಿಂಗರಾಜ್ ಸಿರಿಗೇರಿ ನಿರೂಪಿಸಿ ವಂದಿಸಿದರು.