ಕಿನ್ನಾಳ :( ಜುಲೈ 07 ರಂದು) ತಾಲೂಕಿನ ಕಿನ್ನಾಳ ಗ್ರಾಮದಲ್ಲಿ ಶ್ರೀ ಸ್ವಾಮಿ ವಿವೇಕಾನಂದ ಸೇವಾ ಸಂಸ್ಥೆ ವತಿಯಿಂದ 2ನೇ ಹಂತದ ಸಸಿ ನೆಡುವ ಕಾರ್ಯವನ್ನು ಬಸ್ ನಿಲ್ದಾಣದಲ್ಲಿನೆರವೇರಿಸಲಾಯಿತು.ಈ ಕಾರ್ಯಕ್ರಮದಲ್ಲಿ ಸರಕಾರಿ ಪದವಿ ಪೂರ್ವ ಕಾಲೇಜಿನ ಎಲ್ಲಾ ವಿದ್ಯಾರ್ಥಿಗಳು ಸ್ವಯಂಪ್ರೇರಿತರಾಗಿ ಪಾಲ್ಗೊಂಡು ಬಬೊಬ್ಬ ವಿದ್ಯಾರ್ಥಿಗಳು ಒಂದೊಂದು ಸಸಿಗಳನ್ನು ನೆಟ್ಟು ಕಾರ್ಯವನ್ನು ಯಶಸ್ವಿಗೊಳಿಸಿದರು. ಸಂಸ್ಥೆಯ ಜಂಟಿ ಕಾರ್ಯದರ್ಶಿ ರಾಘವೇಂದ್ರ ಉಪ್ಪಾರ ಮಾತನಾಡಿ ಸಸಿ ನೆಡುವ ಕಾರ್ಯಕ್ರಮವು ಕೇವಲ ಕಾರ್ಯಕ್ರಮವಾಗದೇ ಪ್ರತಿಯೊಬ್ಬರು ಇದೇ ಆಸಕ್ತಿಯನ್ನು ಮುಂದುವರಿಸಿಕೊಂಡು ತಾವು ನೆಟ್ಟಿರುವ ಸಸಿಗಳ ಪಾಲನೆ. ಪೋಷಣೆ ಮಾಡಿದಾಗ ಮಾತ್ರ ಈ ಕಾರ್ಯಕ್ರಮಕ್ಕೆ ಅರ್ಥ ಬರುತ್ತದೆ. ಯುವಜನತೆ ಪರಿಸರ ಸಂರಕ್ಷಣೆಗೆ ಮುಂದಾಗಬೇಕು ಎಂದರು. ಸಂಸ್ಥೆ ಅಧ್ಯಕ್ಷರು ಮೌನೇಶ ಕಮ್ಮಾರ ಉಪಾಧ್ಯಕ್ಷ ಲಿಂಗರಾಜ ಶಿರಗೇರಿ. ಕಾರ್ಯದರ್ಶಿ ಮೈಲಾರಪ್ಪ ಕುಣಿ , ಅಶ್ವತ್ ನಾರಾಯಣ ಸಾಗರ, ರವಿಕಿರಣ್ ಶ್ಯಾವಿ,ನಾರಾಯಣ ಕಡ್ಲಿಬಾಳ, ಮಂಜುನಾಥ ಮ್ಯಾಗೇರಿ, ಸರಸ್ವತಿ ಗಡಗಿ,ಮಮತಾ ಹಳಪೇಟೆ , ಉಮಾ ಬಡಗೇರಿ,ಶಿಲ್ಪಾ ಗಡಗಿ, ಸುಮಾ ಹಂಚಿನಾಳ, ಸೇರಿದಂತೆ ಊರಿನ ಗ್ರಾಮಸ್ಥರು ಹಾಗೂ ಸಂಸ್ಥೆಯ ಎಲ್ಲಾ ಸದಸ್ಯರು ಉಪಸ್ಥಿತಿಯಲ್ಲಿ ಇದ್ದರು.