Friday, July 20, 2018

ಸ್ವಚ್ಚತೆ ಕುರಿತು ಜಾಗೃತಿ ಜಾಥ


ಕೊಪ್ಪಳ : ತಾಲೂಕಿನ ಕಿನ್ನಾಳ ಗ್ರಾಮದಲ್ಲಿ ಶ್ರೀ ಸ್ವಾಮಿ ವಿವೇಕಾನಂದ ಸೇವಾ ಸಂಸ್ಥೆ(ರಿ) ಹಾಗೂ ನೆಹರೂ ಯುವ ಕೇಂದ್ರ ಕೊಪ್ಪಳ, ಯುವ ಕಾರ್ಯ ಹಾಗೂ ಕ್ರೀಡಾ ಸಚಿವಾಲಯ ಇವರುಗಳ ಸಂಯುಕ್ತಾಶ್ರಯದಲ್ಲಿ ಸ್ವಚ್ಚ ಭಾರತ ಸಮ್ಮರ್ ಇಂಟನ್ರ್ಸಿಫ್-100 ತಾಸು ಶ್ರಮಧಾನ ಕಾರ್ಯಕ್ರಮಕ್ಕೆ ಗ್ರಾಮದ ಸ.ಹಿ.ಪ್ರಾ. ಶಾಲೆ ಕೌಲಪೇಟೆ ಕಿನ್ನಾಳದಲ್ಲಿ ಶ್ರಮಧಾನ ಮಾಡಿ ಚಾಲನೆ ನೀಡುವುದರ ಮೂಲಕ ಗ್ರಾಮದ ಬೀದಿಗಳಲ್ಲಿ ಜಾಗೃತಿ ಜಾಥವನ್ನು ಹಮ್ಮಿಕೊಳ್ಳಲಾಗಿತ್ತು.
ನಂತರ ಸಂಸ್ಥೆಯ ಜಂಟಿ ಕಾರ್ಯದರ್ಶಿ ರಾಘವೇಂದ್ರ ಕಿನ್ನಾಳ ಸ್ವಚ್ಚ ಭಾರತದ ಪ್ರತಿಜ್ಞೆಯನ್ನು ಮಾಡಿಸುವ ಮೂಲಕ ನಾನು ಭಾರತ ಸ್ವಚ್ಚತೆಯನ್ನು ಕಾಪಾಡುವಲ್ಲಿ ನನ್ನ ಸಮಯವನ್ನು ಮೀಸಲಿಟ್ಟು ಸಹಕರಿಸುತ್ತೇನೆ ಹಾಗೂ ಸ್ವಯಂ ಸ್ಪೂರ್ತಿಯಿಂದ ಭಾರತದ ಸ್ಚಚ್ಚತೆಯನ್ನು ಕಾಪಾಡುವಲ್ಲಿ ವಾರದಲ್ಲಿ ಎರಡು ಗಂಟೆಗಳನ್ನು ಮೀಸಲಿಡುತ್ತೇನೆ. ಕಸವನ್ನು ಎಲ್ಲಿ ಅಂದರೆ ಅಲ್ಲಿ ಎಸೆಯುವುದಿಲ್ಲ ಮತ್ತು ಬೇರೆಯವರು ಎಸೆಯಲು ಬೀಡುವುದಿಲ್ಲ.
ಸ್ಚಚ್ಚತೆಗಾಗಿ ನಾನು, ನನ್ನ ಕುಟುಂಬ, ನನ್ನ ಸುತ್ತಮುತ್ತಲಿನ ಜನರನ್ನು ಭಾರತದ ಸ್ಚಚ್ಚತಾ ಅಭಿಯಾನಕ್ಕೆ ಪ್ರೋತ್ಸಾಹಿಸುತ್ತೇನೆ ಎಂದು ಪ್ರಮಾಣ ಮಾಡಿಸಲಾಯಿತು.
ಶಾಲೆಯ ಶಿಕ್ಷಕರಾದ ಶ್ರೀಮತಿ ಗಂಗುಭಾಯಿ ಜೋಷಿ ಮಾತನಾಡಿ ಮನುಷ್ಯ ಹೇಗೆ ತನ್ನ ಹಕ್ಕುಗಳನ್ನು ಚಲಾಯಿಸುತ್ತಾನೋ ಹಾಗೇಯೆ ನಮ್ಮ ಕರ್ತವ್ಯಗಳನ್ನು ಕೂಡಾ ನಿಭಾಯಿಸಬೇಕು ಇದರಲ್ಲಿ ನಮ್ಮ ಮನೆ, ನಮ್ಮ ಶಾಲೆ, ನಮ್ಮ ಊರು, ಜಿಲ್ಲೆ, ರಾಜ್ಯ ಮತ್ತು ದೇಶವನ್ನು ಸ್ಚಚ್ಚವಾಗಿಸುವುದು ನಮ್ಮ ಕತ್ರ್ಯವ್ಯಗಳಲ್ಲಿ ಬಹುಮುಖ್ಯವಾಗಿದೆ ಎಂದರು.
ಸಂಸ್ಥೆಯ ಕಾರ್ಯದರ್ಶಿಯಾದ ಮೈಲಾರಪ್ಪ ಕುಣಿ ಮಾತನಾಡಿ ಪ್ರತಿಯೊಬ್ಬರು ಸ್ವಚ್ಚತೆಗೆ ಆಧ್ಯತೆಯನ್ನು ನೀಡುವ ಮೂಲಕ ಒಂದು ಹೆಜ್ಜೆ ಸ್ಚಚ್ಚತೆಯ ಕಡೆಗೆ ಎನ್ನುವ ಮಾತನ್ನು ಗಮನದಲ್ಲಿ ಇಟ್ಟುಕೊಂಡು ನನ್ನ ಮೊದಲನೆ ಹೆಜ್ಜೆ ಸ್ಚಚ್ಚತೆಯ ಕಡೆಗೆ ಎನ್ನುವುದನ್ನು ಪಾಲಿಸಬೇಕಾಗಿದೆ ಹಾಗೂ ನೀವು ಕಸವನ್ನು ಶೆಖಕರಿಸಿ ಒಣ ಮತ್ಯು ಹಸಿ ತ್ಯಾಜವನ್ನು ಬೇರೆ ಬೇರೆಯಾಗಿಸಿ ಪರಿಸರ ಸಂರಕ್ಷಣೆಯನ್ನು ಮಾಡಬೇಕು ಕಡ್ಡಾಯವಾಗಿ ಪ್ರತಿ ಮನೆಯಲ್ಲೂ ಶೌಚಾಲಯವನ್ನು ಉಪಯೋಗಿಸುವಂತೆ ಮನವೊಲಿಸಬೇಕೆ ಎಂದರು.
ಈ ಸಂದರ್ಭದಲ್ಲಿ ಶಾಲೆಯ ಶಿಕ್ಷಕರಾದ ಗಣೇಶ ಬಣ್ಣದ, ಶೇಖರಪ್ಪ ಮುಧೂಳು, ರೇಣುಕಾ ನಾಗಾವಿ, ಜಲಜಾಕ್ಷಿ ಕೆ. ಚಂದ್ರಕಾಂತ ಕಮ್ಮಾರ, ವಿಜಯಲಕ್ಷ್ಮೀ ಬಿಜ್ಜಳ, ನಾಗಪ್ಪ ಎಳಂಬಿ ಹಾಗೂ ಸಂಸ್ಥೆಯ ಪದಾಧಿಕಾರಿಗಳಾದ ರಂಜಿತ್ ಕಳ್ಳಿಮನಿ, ರಮೇಶ ಪೊಸ್ಟ, ಸಂತೋಷ ಕಠಾರೆ, ಮಂಜುನಾಥ, ಪ್ರವೀಣ ಇಂಡಿ, ಸಂತೋಷ ಬಿಸರಳ್ಳಿ, ಲಿಂಗರಾಜ ಶಿರಗೇರಿ ಸೇರಿದಂತೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.