ಕೊಪ್ಪಳ ತಾಲೂಕಿನ ಕಿನ್ನಾಳ ಗ್ರಾಮದಲ್ಲಿ ಶ್ರೀ ಸ್ವಾಮಿ ವಿವೇಕಾನಂದ ಸೇವಾ ಸಂಸ್ಥೇ (ರಿ) ಕಿನ್ನಾಳ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಜನಾರೋಗ್ಯ ಕೇಂದ್ರ ಎಪಿಡೀಮಿಯಾಲಜಿ ವಿಭಾಗ ನಿಮ್ಯಾನ್ಸ್ ಬೆಂಗಳೂರು, ಯುವ ಸ್ಪಂದನಾ ಜೀವನ ಕೌಶಲ್ಯ ತರಬೇತಿ ಶಿಬಿರ ಹಾಗೂ ನೆಹರು ಯುವ ಕೆಂದ್ರ ಕೊಪ್ಪಳ ಇವರ ಸಹಯೋಗದಲ್ಲಿ ಶ್ರೀ ಸ್ವಾಮಿ ವಿವೇಕಾನಂದರ 125ನೇ ಚಿಕ್ಯಾಗೋ ಭಾಷಣ ವರ್ಷಾಚರಣೆಯ ಅಂಗವಾಗಿ ಸರಕಾರಿ ಸಂಯುಕ್ತ ಪದವಿ ಪೂರ್ವ ಕಾಲೇಜ್ ಕಿನ್ನಾಳದಲ್ಲಿ ಉಪನ್ಯಾಸ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಈ ಕಾರ್ಯಕ್ರಮದ ಅದ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯರಾದ ಶ್ರೀಮತಿ ಸರೊಜಾ ಅವರು ವಹಿಸಿದ್ದರು ಮುಖ್ಯ ವಕ್ತರರಾದ ಹೊಸಪೇಟೆಯ ಕೇಶವ ಕೆ.ಎಸ್ ಮಾತನಾಡಿ ಸ್ವಾಮಿ ವಿವೇಕಾನಂದರ ಶಕ್ತಿ ಬಹು ಅಗಾಧವಾದದ್ದು. ಜಗತ್ತಿಗೆ ಭಾರತ ಎಂದರೇನು ಭಾರತದ ಶಕ್ತಿ ಏನು ಎಂಬುದನ್ನು ತಮ್ಮ 12 ನಿಮಿಷ ಚಿಕ್ಯಾಗೋ ಬಾಷಣದಲ್ಲಿ ತೆರೆದಿಟ್ಟರು ಅವರ ಬಾಷಣಕ್ಕೆ ಜಗತ್ತಿನ ಎಲ್ಲಾ ಧರ್ಮಗಳು, ದೇಶಗಳು ತಲೆದೂಗಿದವು, ಸರ್ವವೂ ನಿನ್ನಲ್ಲೆ ಅಡಗಿದೆ. ಸದೃಡ ಯುವಕರಿಂದ ಮಾತ್ರ ದೇಶದಲ್ಲಿ ಬದಲಾವಣೆ ಸಾದ್ಯ ಎಂಬುದರ ಕುರಿತು ಸ್ವಾಮಿ ವಿವೇಕಾನಂದರ ವಿಚಾರಗಳನ್ನು ಮತ್ತು ದೇಶ ಮೋದಲು ಎನ್ನುವ ಅವರ ಪರಿಕಲ್ಪನೆಯನ್ನು ಕಾರ್ಯಕ್ರಮದಲ್ಲಿ ವಿಸ್ತುøತವಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಕಾಲೇಜು ಅಭಿವೃದ್ದಿ ಸಮಿತಿಯ ಸದಸ್ಯರಾದ ಮಂಜುನಾಥ ಶಿರಗೇರಿ, ನೆಹರು ಯುವ ಕೆಂದ್ರದ ಲೆಕ್ಕಾದಿಕಾರಿಗಳಾದ ಮಂಜುಳಾ ಮೂಲಿಮನಿ, ಯುವ ಕಾರ್ಯಕರ್ತರಾದ ವಿರೇಶ ಹಾಲಗುಂಡಿ, ಸ್ವಾಮಿ ವಿವೇಕಾನಂದ ಸಂಸ್ಥೆಯ ಸದಸ್ಯರಾದ ರವಿಗೌಡ ವಾಲ್ಮಕಿ, ಪ್ರದಿಪ್ ಶಿರಗೇರಿ, ಖಾಜಾವಲಿ ಬೆಣಕಲ್, ಶಿವಾನಂದ ವಾಲ್ಮಿಕಿ, ರಾಮು ಕಿನ್ನಾಳ, ಪ್ರಶಾಂತ ಕಿನ್ನಾಳ, ಆಶ್ವತ್ ನಾರಾಯಣ ಸಾಗರ, ನವೀನ ಬಲೂಚಗಿ, ಮೈಲಾರಪ್ಪ ಕುಣಿ, ಬಸವರಾಜ ನಾಯಕ, ಸೇರಿದಂತೆ ಕಾಲೇಜ್ ಉಪನ್ಯಾಸಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಸ್ವಾಮಿ ವಿವೇಕಾನಂದ ಸಂಸ್ಥೆಯ ಅದ್ದಕ್ಷ ಮೌನೇಶ ಕಿನ್ನಾಳ ನಿರೂಪಿಸಿದರು ಸಂತೋಷ ಕಠಾರೆ ವಂದಿಸಿದರು