Thursday, February 28, 2019

ಕಿನ್ನಾಳ ಎಸ್.ವಿ.ಎಸ್ ಸಂಸ್ಥೆಗೆ ಪ್ರಥಮ ಬಹುಮಾನ

ಕೊಪ್ಪಳ: ನಗರದ ಹಿಂದಿ ಪ್ರಚಾರ ಸಭಾ ಕಾನೂನು ಮಹಾವಿದ್ಯಾಲಯದಲ್ಲಿ ನೆಹರು ಯುವಕೇಂದ್ರ ಕೊಪ್ಪಳ ಯುವ ಸಮಾವೇಶ ಹಾಗೂ ಪ್ರಶಸ್ತಿ ಪ್ರಧಾನ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಈ ಸಂದರ್ಭದಲ್ಲಿ ನೆಹರು  ಯುವ ಕೇಂದ್ರ ಕೊಪ್ಪಳ, ಯುವ ಕಾರ್ಯ ಹಾಗೂ ಕ್ರೀಡಾ ಸಚಿವಾಲಯ ನೀಡುವ ಜಿಲ್ಲಾ ಮಟ್ಟದ ಅತ್ಯುತ್ತಮ ಸ್ವಚ್ಛ ಭಾರತ ಪ್ರಶಸ್ತಿಯನ್ನು ಕಿನ್ನಾಳ ಶ್ರೀ ಸ್ವಾಮಿ ವಿವೇಕಾನಂದ ಸೇವಾ ಸಂಸ್ಥೆಯು ಜಿಲ್ಲಾ ಮಟ್ಟದಲ್ಲಿ ಸ್ವಚ್ಚ ಭಾರತ ಸಮ್ಮರ್ ಇಂಟನ್ರ್ಸಿಫ್-100 ತಾಸು ಶ್ರಮಧಾನ ಕಾರ್ಯಕ್ರಮಕ್ಕೆ ಪ್ರಥಮ ಸ್ಥಾನ ಪಡೆದಿದ್ದು ಸಂಸ್ಥೆಯ ಅಧ್ಯಕ್ಷ ಮೌನೇಶ ಕಿನ್ನಾಳ ಹಾಗೂ ಪಧಾದಿಕಾರಿಗಳಾದ ಮೈಲಾರಪ್ಪ ಕುಣಿ, ಲಿಂಗರಾಜ ಶಿರಗೇರಿ,ಸಂತೋಷ ಬೀಸನಳ್ಳಿ,  ರಮೇಶ ಅಂಚೆಕಚೇರಿ ಇವರಿಗೆ ನೀಡಿ ಗೌರವಿಸಲಾಯಿತು.

ನಂತರ ಕಾರ್ಯಕ್ರಮವನ್ನು ಉದ್ದೇಶಿಸಿ ಶರಣಪ್ಪ ಸಿಂದೋಗಿ  ಮಾತನಾಡಿ ಪ್ರಸ್ತುತ ಸಮಾಜದಲ್ಲಿ ಯುವಕರ ಪಾತ್ರ ಏನು, ಸಂಘ ಸಂಸ್ಥೆಗಳು ಯಾವ ರೀತಿಯ ಕಾರ್ಯಚಟುವಟಿಕೆಯಲ್ಲಿ ಭಾಗಿಯಾಗಬೇಕು ಹಾಗೂ ಸೇವೆ, ಶಿಕ್ಷಣ, ರಾಷ್ಟ್ರೀಯತೆಯ ಕುರಿತು ಹೇಳಿದರು.

ಈ ಸಂದರ್ಭದಲ್ಲಿ ಜಿಲ್ಲಾ ಸಮನ್ವಯ ಅಧಿಕಾರಿ ಡಿ.ದಯಾನಂದ, ಕಾನೂನು ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಬಸವರಾಜ ಹನಸಿ, ರಾಮರಾವ್ ಬಿರಾದಾರ್, ಸಿದ್ದಲಿಂಗಯ್ಯ,ವೆಂಕಟೇಶ ಬ್ಯಾಡಗಿ, ಬಸಯ್ಯ ಹಿರೇಮಠ, ವಿರುಪಾಕ್ಷಪ್ಪ ಮೊರೇನಾಳ, ಶಂಕರ ಸುರಳ ಸೇರಿದಂತೆ ನೆಹರು ಯುವ ಕೇಂದ್ರದ  ಸಿಬ್ಬಂದಿಗಳು, ವಿವಿಧ ಗ್ರಾಮಗಳ ಸಂಘಗಳ ಪಧಾದಿಕಾರಿಗಳು, ಕಾಲೇಜಿನ ವಿದ್ಯಾರ್ಥಿಗಳು ಉಪಸ್ಥಿತರಿದ್ದರು