Friday, July 21, 2017

ಸ್ವಯಂಪ್ರೇರಿತ ವನಮಹೋತ್ಸವ

ಕಿನ್ನಾಳ :( ಜುಲೈ 07 ರಂದು) ತಾಲೂಕಿನ ಕಿನ್ನಾಳ ಗ್ರಾಮದಲ್ಲಿ ಶ್ರೀ ಸ್ವಾಮಿ ವಿವೇಕಾನಂದ ಸೇವಾ ಸಂಸ್ಥೆ ವತಿಯಿಂದ 2ನೇ ಹಂತದ ಸಸಿ ನೆಡುವ ಕಾರ್ಯವನ್ನು ಬಸ್ ನಿಲ್ದಾಣದಲ್ಲಿನೆರವೇರಿಸಲಾಯಿತು.ಈ ಕಾರ್ಯಕ್ರಮದಲ್ಲಿ ಸರಕಾರಿ ಪದವಿ ಪೂರ್ವ ಕಾಲೇಜಿನ ಎಲ್ಲಾ ವಿದ್ಯಾರ್ಥಿಗಳು ಸ್ವಯಂಪ್ರೇರಿತರಾಗಿ ಪಾಲ್ಗೊಂಡು ಬಬೊಬ್ಬ ವಿದ್ಯಾರ್ಥಿಗಳು ಒಂದೊಂದು ಸಸಿಗಳನ್ನು ನೆಟ್ಟು ಕಾರ್ಯವನ್ನು ಯಶಸ್ವಿಗೊಳಿಸಿದರು.                                                                                                 ಸಂಸ್ಥೆಯ ಜಂಟಿ ಕಾರ್ಯದರ್ಶಿ ರಾಘವೇಂದ್ರ ಉಪ್ಪಾರ ಮಾತನಾಡಿ ಸಸಿ ನೆಡುವ ಕಾರ್ಯಕ್ರಮವು ಕೇವಲ ಕಾರ್ಯಕ್ರಮವಾಗದೇ ಪ್ರತಿಯೊಬ್ಬರು ಇದೇ ಆಸಕ್ತಿಯನ್ನು ಮುಂದುವರಿಸಿಕೊಂಡು ತಾವು ನೆಟ್ಟಿರುವ ಸಸಿಗಳ ಪಾಲನೆ. ಪೋಷಣೆ ಮಾಡಿದಾಗ ಮಾತ್ರ ಈ ಕಾರ್ಯಕ್ರಮಕ್ಕೆ ಅರ್ಥ ಬರುತ್ತದೆ. ಯುವಜನತೆ ಪರಿಸರ ಸಂರಕ್ಷಣೆಗೆ ಮುಂದಾಗಬೇಕು ಎಂದರು. ಸಂಸ್ಥೆ ಅಧ್ಯಕ್ಷರು ಮೌನೇಶ ಕಮ್ಮಾರ ಉಪಾಧ್ಯಕ್ಷ ಲಿಂಗರಾಜ ಶಿರಗೇರಿ. ಕಾರ್ಯದರ್ಶಿ ಮೈಲಾರಪ್ಪ ಕುಣಿ , ಅಶ್ವತ್ ನಾರಾಯಣ ಸಾಗರ, ರವಿಕಿರಣ್ ಶ್ಯಾವಿ,ನಾರಾಯಣ ಕಡ್ಲಿಬಾಳ, ಮಂಜುನಾಥ ಮ್ಯಾಗೇರಿ, ಸರಸ್ವತಿ ಗಡಗಿ,ಮಮತಾ ಹಳಪೇಟೆ , ಉಮಾ ಬಡಗೇರಿ,ಶಿಲ್ಪಾ ಗಡಗಿ, ಸುಮಾ ಹಂಚಿನಾಳ, ಸೇರಿದಂತೆ ಊರಿನ ಗ್ರಾಮಸ್ಥರು ಹಾಗೂ ಸಂಸ್ಥೆಯ ಎಲ್ಲಾ ಸದಸ್ಯರು ಉಪಸ್ಥಿತಿಯಲ್ಲಿ ಇದ್ದರು.

ಆತ್ಮ ಸಂರಕ್ಷಣಾ ಕಲೆ ಹಾಗೂ ಯೋಗ ತರಬೇತಿ ಶಿಬಿರಕ್ಕೆ ಚಾಲನೆ

ಕೊಪ್ಪಳ ಜಲೈ ೧೩: ಶ್ರೀ ಸ್ವಾಮಿ ವಿವೇಕಾನಂದ ಸೇವಾ ಸಂಸ್ಥೆ ಕಿನ್ನಾಳ ವತಿಯಿಂದ ಆತ್ಮ ಸಂರಕ್ಷಣಾ ಕಲೆ ಹಾಗೂ ಯೋಗ ತರಬೇತಿ ಶಿಬಿರಕ್ಕೆ ಚಾಲನೆ ನೀಡಲಾಯಿತು ಇದರ ಸದುಪಯೋಗವನ್ನು ಎಲ್ಲರೂ ಪಡೆದುಕೊಳ್ಳಬೇಕಾಗಿ ವಿನಂತಿ. ನಮ್ಮ ಸಂಕಲ್ಪ ಸದೃಡ ಭಾರತಕ್ಕಾಗಿ ಸದೃಡ ಯುವಜನತೆ ನಿರ್ಮಾಣ ಮಾಡುವುದು



Thursday, July 6, 2017

ಶ್ರೀ ಸ್ವಾಮಿ ವಿವೇಕಾನಂದರ‌ 115 ನೇ ಸ್ಮೃತಿ ದಿನವನ್ನು ಆಚರಿಸಲಾಯಿತು

ದಿ.04.07.2017 ಶ್ರೀ ಸ್ವಾಮಿ ವಿವೇಕಾನಂದ ಸೇವಾ ಸಂಸ್ಥೆ ಕಿನ್ನಾಳ ವತಿಯಿಂದ ಭಾರತದ ಅತ್ಯಂತ ಪ್ರಸಿದ್ಧ ಮತ್ತು ಪ್ರಭಾವಶಾಲಿ ತತ್ತ್ವಜ್ಞಾನಿಗಳಲ್ಲಿ ಒಬ್ಬರಾದ ಶ್ರೀ ಸ್ವಾಮಿ ವಿವೇಕಾನಂದರ‌ 115 ನೇ ಸ್ಮೃತಿ ದಿನವನ್ನು ಕಿನ್ನಾಳದ ಶ್ರೀ ಸ್ವಾಮಿ ವಿವೇಕಾನಂದ ವೃತ್ತದಲ್ಲಿ ಆಚರಿಸಲಾಯಿತು..

ನಮ್ಮ ಸಂಸ್ಥೆಯ ಮೊದಲ ಹೆಜ್ಜೆ ಸಾರ್ಥಕತೆಯ ಸೇವೆಯಲ್ಲಿ

ಶ್ರೀ ಸ್ವಾಮಿ ವಿವೇಕಾನಂದ ಸೇವಾ ಸಂಸ್ಥೆಯಿಂದ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುಸ್ತಕ, ಬಟ್ಟೆ, ಶಿಕ್ಷಣ ಶುಲ್ಕ ಮತ್ತಿತರ ವೆಚ್ಚಗಳನ್ನು ಸಂಸ್ಥೆಯಿಂದ ವಿತರಿಸಲಾಯಿತು. ಈ ಸಂದರ್ಭದಲ್ಲಿ ಪಾಲಕರೊಂದಿಗೆ ಮಾತನಾಡಿದ ಸಂಸ್ಥೆಯ ಉಪಾಧ್ಯಕ್ಷ ಲಿಂಗರಾಜ ಶಿರಿಗೇರಿ ಶಿಕ್ಷಣವೇಬುಂದು ಕೇವಲ ಉಳ್ಳವರ ಸ್ವತ್ತಾಗಬಾರದು ಪ್ರತಿಯೊಂದು ಮನೆಗಳಲ್ಲಿ ಮಕ್ಕಳು ಜ್ನಾನವನ್ನು ಪಡೆಯುವಂತಾಗಬೇಕು ಅಂದಾಗ ಮಾತ್ರ ಸ್ವಾಮೀಜಿಯವರ ಸದ್ರಡ ಭಾರತದ ಕನಸು ನನಸಾಗುತ್ತದೆ ಎಂದರು ನಂತರ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸೇವೆಗಳನ್ನು ಸಮಾಜಕ್ಕೆ ನಮ್ಮ ಸಂಸ್ಥೆಯಿಂದ ನೀಡಲಾಗುವುದು ಎಂದು ಸಂಸ್ಥೆಯವರು ತಿಳಿಸಿದರು