Saturday, September 16, 2017

ಹಲಗೇರಿ ಗ್ರಾಮದಲ್ಲಿ ಹೆಚ್ಚುತ್ತಿರುವ ಸೊಳ್ಳೆಗಳ ಉತ್ಪತ್ತಿಯನ್ನು ತಡೆಯುವಂತೆ ಔಷಧಿಗಳ ಸಿಂಪಡಿಸಲು ಮನವಿ ಸಲ್ಲಿಸಲಾಯಿತು

ಶ್ರೀ ಸ್ವಾಮಿ ವಿವೇಕಾನಂದ ಸೇವಾ ಸಂಸ್ಥೆ  ನೂತನ ಶಾಖೆ   ಹಲಗೇರಿ ವತಿಯಿಂದ ಗ್ರಾಮದಲ್ಲಿ ಹೆಚ್ಚುತ್ತಿರುವ ಸೊಳ್ಳೆಗಳ ಉತ್ಪತ್ತಿಯನ್ನು ತಡೆಯುವಂತೆ ಔಷಧಿಗಳ ಸಿಂಪಡಿಸಲು ಪಂಚಾಯತಿ ಅಧಿಕಾರಿಗಳಿಗೆ ಸಂಸ್ಥೆಯ ಸರ್ವ ಸದಸ್ಯರಿಂದ  ಮನವಿ ಸಲ್ಲಿಸಲಾಯಿತು               

ಪರಿಸರ ಸ್ನೇಹಿ ಗಣೇಶ ಹಬ್ಬ ಆಚರಣೆ

ಕೊಪ್ಪಳ: ತಾಲೂಕಿನ ಕಿನ್ನಾಳ ಗ್ರಾಮದ ಕೌಲಪೇಟೆ ಓಣಿಯಲ್ಲಿ ಶ್ರೀ ಸ್ವಾಮಿ ವಿವೇಕಾನಂದ ಸೇವಾ ಸಂಸ್ಥೆ ವತಿಯಿಂದ  ಗಣೇಶ ಹಬ್ಬವನ್ನು ಪರಿಸರ ಸ್ನೇಹಿಯಾಗಿ ಆಚರಣೆ ಮಾಡುವಂತೆ ಜನಜಾಗೃತಿ ಕಾರ್ಯಕ್ರಮವನ್ನು ಮಾಡಿದ್ದರು.
ಗಣೇಶ ಹಬ್ಬದಲ್ಲಿ ಪಿಓಪಿ ಗಣೇಶ, ವಿಗ್ರಹ, ಮದ್ದು, ಪಟಾಕಿ ಸೇರಿದಂತೆ ಪರಿಸರಕ್ಕೆ ಹಾನಿಯಾಗುವಂತಹ ಯಾವುದೇ ಚಟುವಟಿಕೆ ಮಾಡದಂತೆ ಜನರಿಗೆ ತಿಳಿಹೇಳಿದ್ದರು. ಜೆಡಿ ಮಣ್ಣಿನಿಂದ ಮಾಡಿದ ಗಣಪತಿಯನ್ನು ಮನೆಯಲ್ಲಿ ಇಡುವಂತೆ ಮತ್ತು ಪಟಾಕಿ ಬಿಟ್ಟು ದೀಪ ಹಚ್ಚುವಮತೆ ಜಾಗೃತಿ ಮೂಡಿಸಿದ್ದರು.ಜಾಗೃತಿಯಲ್ಲಿ ಸರ್ವ ಸದಸ್ಯರು ಗ್ರಾಮದ ಮುಖಂಡರು ಹಾಗೂ ಮತ್ತಿತರರು ಉಪಸ್ಥಿತರಿದ್ದರು.