Friday, January 12, 2018

ಸ್ವಾಮಿ ವಿವೇಕಾನಂದರ 155ನೇ ಜಯಂತಿ ಆಚರಣೆ

ಕೊಪ್ಪಳ : ತಾಲೂಕಿನ ಕಿನ್ನಾಳ ಗ್ರಾಮದ ಶ್ರೀ ಸ್ವಾಮಿ ವಿವೇಕಾನಂದ ಸೇವಾ ಸಂಸ್ಥೆ(ರಿ) ವತಿಯಿಂದ  ಸ್ವಾಮಿ ವಿವೇಕಾನಂದರ 155ನೇ ಜಯಂತಿಯನ್ನು ಗ್ರಾಮದ ವಿವೇಕಾನಂದ ವೃತ್ತ (ಕಾಮನಕಟ್ಟಿ) ಯಲ್ಲಿ ಆಚರಿಸಲಾಯಿತು.
       ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷ ಮೌನೇಶ ಕಿನ್ನಾಳ ಮಾತನಾಡಿ ಸ್ವಾಮಿ ವಿವೇಕಾನಂದರ ಆದರ್ಶ ಮತ್ತು ಸಿದ್ದಾಂತಗಳನ್ನು ಮಾರ್ಗದರ್ಶನವನ್ನಾಗಿಸಿಕೊಂಡು ಸಂಸ್ಥೆಯು ಶಿಕ್ಷಣ, ಸಂಸ್ಕøತಿ, ಸ್ವಾವಲಂಬನೆ ಎಂಬ ದೇಯ್ಯೂದ್ಯೇಶಗಳನ್ನು ಮುಂದಿಟ್ಟುಕೊಂಡು ಗ್ರಾಮದ ಹಾಗೂ ಯುವ ಜನತೆಯ ಆಶಾಕಿರಣವಾಗಿ ಶ್ರೀ ಸ್ವಾಮಿ ವಿವೇಕಾನಂದ ಸೇವಾ ಸಂಸ್ಥೆಯು ಬೆಳೆಯುತ್ತಿದೆ. ಪ್ರತಿ ವರ್ಷದಂತೆ ಈ ವರ್ಷವೂ ಕೂಡಾ ವೀರ ಸನ್ಯಾಸಿಯ ಜಯಂತಿಯನ್ನು ಆಚರಿಸುತ್ತಿದ್ದು ಗ್ರಾಮದ ಎಲ್ಲಾ ಯುವಕರು, ಹಿರಿಯರು ಉತ್ತಮ ಮಾರ್ಗದರ್ಶನ ನೀಡುತ್ತಿದ್ದು ದಿನಾಂಕ : 18.01.2018 ರ ಗುರುವಾರರಂದು ಶೋಭಾಯಾತ್ರೆ ಮತ್ತು  ಬಹಿರಂಗ ಸಭೆಯನ್ನು ಹಮ್ಮಿಕೊಳ್ಳಲಾಗಿದ್ದು ಇದೇ ರೀತಿ ಎಲ್ಲರೂ ಭಾಗವಹಿಸಿ ಯಶಸ್ವಿಗೊಳಿಸಬೇಕು ಸ್ವಾಮಿ ವಿವೇಕನಾಂದರ  ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕೆಂದು ಹೇಳಿದರು. ಹಾಗೂ ಗ್ರಾಮದ ಹಿರಿಯರಾದ ಕಾಳಪ್ಪ ಮಾಸ್ತರ ಪತ್ತಾರ ಮಾತನಾಡಿ ಸ್ವಾಮಿ ವಿವೇಕಾನಂದರು ಪ್ರತಿಯೊಬ್ಬ ಯುವಕರ ಸ್ಪೂರ್ತಿ ಅವರೇ ಹೆಸರೇ ಒಂದು ಶಕ್ತಿ ಆ ಶ್ಕತಿಯನ್ನು ಬೆನ್ನತ್ತಿ ಹೊರಟವರು ಉತ್ತುಂಗ ಶಿಖರಕ್ಕೆ ಹೇರುತ್ತಾರೆ ಅವರ ಆದರ್ಶಗಳನ್ನು ಪಾಲಿಸುತ್ತಾ ಸಾಗಿರುವ ಸ್ವಾಮಿ ವಿವೇಕಾನಂದ ಸೇವಾ ಸಂಸ್ಥೆಯು ಹಾಗೂ ಕಿನ್ನಾಳ ಗ್ರಾಮದ ಯುವಕರು ಬಹು ಎತ್ತರಕ್ಕೆ ಬೆಳಯಲಿ ಎಂದು ಆಶಿಸುತ್ತೇನೆ ಎಂದರು.
ಹಾಗೂ ಗ್ರಾ.ಪಂ ಸದಸ್ಯ ಬಸವರಾಜ ಚಿಲವಾಡಗಿ ಮಾತನಾಡಿ ಭಾರತದ ಕೀರ್ತಿಯನ್ನು ಜಗತ್ತಿನಾದ್ಯಂತ ಸಾರಿದ ಮಹಾಪುರುಷನ ಜಯಂತಿಯನ್ನು ಆಚರಿಸುತ್ತಿರುವುದು ನಮ್ಮೆಲ್ಲರ ಭಾಗ್ಯವಾಗಿದೆ. 155 ವರ್ಷ ಕಳೆದರೂ ನರೇಂದ್ರನ ಆದರ್ಶ ಮತ್ತು ಒಂದೊಂದು ನುಡಿ ಮುತ್ತುಗಳು ಹಿಂದಿನ ಯುವ ಜನತೆಯ ಸ್ಪೂರ್ತಿಯಾಗಿದೆ. ಸ್ವಾಮಿ ವಿವೇಕಾನಂದರ ಸದೃಡ ಭಾರತಕ್ಕಾಗಿ ಸದೃಢ ಯುವಜನತೆ ಎನ್ನುವ ಮಾತು ಅಕ್ಷರಶಃ ಸತ್ಯವಾಗಿದ್ದು ಯುವ ಜನತೆ ಸದೃಢರಾದಗ ಮಾತ್ರ ಎನ್ನನ್ನಾದರೂ ಸಾಧಿಸಬಹುದು ಎಂದರು.
ಈ ಸಂದರ್ಭದಲ್ಲಿ ಹಿರಿಯರಾದ ಮಾಹದೇವಯ್ಯ ಹಿರೇಮಠ, ತೋಟಪ್ಪ ಗಾಳಿ, ನಾಗರಾಜ ಬಿದರೂರು, ಹುಚ್ಚಪ್ಪ ಬಂಡಾ, ಅಶೋಕ ಚಿತ್ರಗಾರ, ಉದಯ ಚಿತ್ರಗಾರ, ರಮೇಶ ಘೋರ್ಪಡೆ, ರವಿ ವಾಲ್ಮೀಕಿ, ಚಂದ್ರು ಕುದರಿಮೋತಿ, ಸತೀಶ ಕುಲಕರ್ಣಿ, ಮಂಜುನಾಥ ಬಳಿಗಾರ, ಈರಪ್ಪ ಹರಿಜನ, ಆನಂದ ಮಾಸ್ತರ, ಮಹೇಶ ಪತ್ತಾರ, ಕರ್ಣ ಕಟ್ಟಿಮನಿ, ನಾಗರಾಜ ಗಂಗಾವತಿ, ಶರಣಪ್ಪ ವಾಲ್ಮೀಕಿ, ಬಸವರಾಜ ಪರಗಿ, ಈರಣ್ಣ ಕಮ್ಮಾರ, ವಿರೇಶ ಇಟಗಿ, ಧರ್ಮಣ್ಣ ಮೇಟಿ, ಬೈಲಪ್ಪ ವಾಲ್ಮೀಕಿ ಹಾಗೂ ಕೃಷಿ ಪತ್ತಿನ ಸಹಕಾರ ಸಂಘದ ಸಿಬ್ಬಂದಿ ವರ್ಗ, ಗ್ರಾ.ಪಂ ಸಿಬ್ಬಂದಿ ವರ್ಗ, ಸಂಸ್ಥೆಯ ಲಿಂಗರಾಜ ಶಿರಗೇರಿ, ಮೈಲಾರಪ್ಪ ಕುಣಿ, ರಾಘವೇಂದ್ರ ಉಪ್ಪಾರ,  ರಂಜಿತ ಕಳ್ಳಿಮನಿ, ಪ್ರದೀಪ ಶಿರಗೇರಿ,, ಸಂತೋಷ ಕಟಾರೆ, ಪ್ರವೀಣ ಇಂಡಿ, ಉಮೇಶ ಬಂಡಿಹಾಳ, ಪ್ರಸನ್ನ ವಾಲ್ಮೀಕಿ, ರವಿ ಬುಡಶೆಟ್ನಾಳ, ಶರಣಪ್ಪ ಬುಡಶೆಟ್ನಾಳ, ಹನುಮೇಶ ಚಿಕ್ಕಬೀಡನಾಳ, ಶಿವು ಹಳೇಪೇಟೆ, ನಾರಾಯಣ ಕಡ್ಲಿಬಾಳ, ಹನುಮಂತ ಕಡಗತ್ತಿ, ಮುತ್ತುರಾಜ, ಮಂಜುನಾಥ, ನಾರಾಯಣ ಸಿಂದ್ಲಿ, ರಾಕೇಶ ಆರೆರ್, ರವಿಕಿರಣ ಕೆ.ಎಲ್, ವಿನಾಯಕ ಪೂಜಾರ, ಹನುಮಂತ ಕುಂಬಾರ, ಮಂಜುನಾಥ ಚಿತ್ರಗಾರ, ಸಣ್ಣೆಪ್ಪ ಕಾರಬ್ಯಾಳಿ, ಕೃಷ್ಣ ಮಾಲವಿ, ಪ್ರತಿಬಾ ಕಾತರಕಿ, ಪೂಜಾ, ವಿದ್ಯಾ, ಸುಮಂಗಲಾ  ಸೇರಿದಂತೆ ಇತರರು ಉಪಸ್ಥಿತರಿದ್ದರು.