Saturday, March 10, 2018

ನೀರಿನ ಅರವಟಿಗೆ ಉದ್ಘಾಟನೆ


ಕೊಪ್ಪಳ : ತಾಲೂಕಿನ ಕಿನ್ನಾಳ ಗ್ರಾಮದಲ್ಲಿ ಶ್ರೀ ಸ್ವಾಮಿ ವಿವೇಕಾನಂದ ಸೇವಾ ಸಂಸ್ಥೆ (ರಿ) ವತಿಯಿಂದ ಬಸವೇಶ್ವರ ವೃತ್ತದ ಸ್ವಾಮಿ ವಿವೇಕಾನಂದ ಬಸ್‍ನಿಲ್ದಾಣದಲ್ಲಿ ಸಾರ್ವಜನಿಕ ಹಾಗೂ ಪಕ್ಷಿ ಸಂಕುಲಕ್ಕೆ ಕುಡಿಯುವ ನೀರಿನ ಅರವಟಿಗೆಗಳ ಉದ್ಘಾಟನೆಯನ್ನು ಗ್ರಾ.ಪಂ ಸದಸ್ಯ ವೀರಭದ್ರಪ್ಪ ಗಂಜಿ ಅವರು ನೆರವೇರಿಸಿ ಮಾತನಾಡುತ್ತಾ ಈ ಸಂಸ್ಥೆಯು ವರ್ಷವಿಡಿ ಚಟುವಟಿಕೆಯಲ್ಲಿ ತೊಡಗಿದ್ದು ಅನೇಕ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಳ್ಳುವುದರ ಜೊತೆಗೆ ಪ್ರತಿ ವರ್ಷ ಸಾರ್ವಜನಿಕರಿಗೆ ಕುಡಿಯುವ ನೀರಿನ ಅರವಟಿಕೆಯನ್ನು ಮಾಡುತ್ತಿರುವುದು ಪ್ರಯಾಣಿಕರಿಗೆ, ಪರಸ್ಥಳದವರಿಗೆ, ವಿದ್ಯಾರ್ಥಿಗಳಿಗೆ ತುಂಬಾ ಉಪಯೋಗವಾಗುತ್ತಿದ್ದು ಇನ್ನೂ ಹೆಚ್ಚು-ಹೆಚ್ಚು ಸಾಮಾಜಿಕ, ಧಾರ್ಮಿಕ ಶೈಕ್ಷಣಿಕ ಕಾರ್ಯಗಳು ನಿಮ್ಮಿಂದಾಗಲಿ ಹಾಗೆಯೇ ಜೀವ-ಜಲ, ಶಿಕ್ಷಣ, ಮೂಢ ನಂಭಿಕೆ, ಅನ್ಯಾಯ ಭ್ರಷ್ಟಚಾರಗಳ ಕುರಿತು ಜನರಿಗೆ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಕೈಗೊಳ್ಳುವಂತಾಗಲಿ ಸದಾ ನಾವು ಮತ್ತು ಗ್ರಾಮಸ್ಥರು ಸಹಕಾರ ನೀಡುತ್ತೇವೆ ಎಂದರು.
ಈ ಸಂದರ್ಭದಲ್ಲಿ ಗ್ರಾಮದ ಹಿರಿಯರಾದ ಮಾಹದೇವಯ್ಯ ಹಿರೇಮಠ, ಉದಯಕುಮಾರ ಚಿತ್ರಗಾರ, ಮಂಜುನಾಥ ಸಿರಿಗೇರಿ, ಶಂಕರಸಾ ಕಠಾರೆ, ಪ್ರಶಾಂತ ಕುಲಕರ್ಣಿ, ದಾವಸಾಬ್ ಕನಕಗಿರಿ ಹಾಗೂ ಸಂಸ್ಥೆಯ ಅಧ್ಯಕ್ಷ ಮೌನೇಶ ಕಿನ್ನಾಳ ಪದಾಧಿಕಾರಿಗಳಾದ ಲಿಂಗರಾಜ ಶಿರಿಗೇರಿ, ಮೈಲಾರಪ್ಪ ಕುಣಿ, ರಾವೇಂದ್ರ ಉಪ್ಪಾರ, ನವೀನ ಬಳೂಚಿಗಿ, ಸಂತೋಷ ಬಿಸನಳ್ಳಿ, ಸುರೇಶ ಕಳ್ಳಿಮನಿ, ಪವನ್ ಬಣ್ಣದ, ಉಮೇಶ ಅರಕೇರಿ, ಪ್ರದೀಪ್ ಸಿರಿಗೇರಿ, ನಾಗರಾಜ ಕಲಾಲ್, ಶರಣಪ್ಪ ಲಕ್ಕುಂಡಿ, ಸಂತೋಷ ಕಠಾರೆ, ಕಿರಣ ಸಜ್ಜನ್, ನಾರಾಯಣ ಸಿಂದ್ಲಿ, ಕುಮಾರ ಖಾಕಿ, ಹನುಮೇಶ ಬಿಸನಳ್ಳಿ ಸೇರಿದಂತೆ ಆಟೋ ಚಾಲಕರು, ಹಮಾಲರ ಸಂಘದವರು, ಗ್ರಾ.ಪಂ ಸದಸ್ಯರು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.