Tuesday, March 26, 2019

ಮತದಾನ ಜಾಗೃತಿ ಕಾರ್ಯಕ್ರಮ

ಮತದಾನ ಜಾಗೃತಿ ಕಾರ್ಯಕ್ರಮ, ಮತ ಚಲಾಯಿಸಿ, ಪ್ರಜಾಪ್ರಭುತ್ವ ಬಲಪಡಿಸಿ...
ಕೊಪ್ಪಳ : ಕಿನ್ನಾಳ ಗ್ರಾಮದಲ್ಲಿ ಶ್ರೀ ಸ್ವಾಮಿ ವಿವೇಕಾನಂದ ಸೇವಾ ಸಂಸ್ಧೆ ಹಾಗೂ ನೆಹರು ಯುವಕೇಂದ್ರ ಕೊಪ್ಪಳ ಸಹಯೋಗದಲ್ಲಿ ನೆರೆಹೊರೆ ಯುವ ಸಂಸತ್ತು 2018-19 ಮತ್ತು ಮತದಾನ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು..


ನೇಹರು ಯುವಕೇಂದ್ರದ ಜ್ಯೋತಿ ಮೂಲಿಮನಿ ಮಾತನಾಡಿ 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬ ಮತದಾರರೂ ಸಹ ತಪ್ಪದೆ ಮತದಾನವನ್ನು ಮಾಡುವ ಮೂಲಕ ದೇಶದ ಅಭಿವೃದ್ಧಿಗೆ ಕೈ ಜೋಡಿಸಬೇಕು ಎಂದರು. ಹಾಗೂ ಇದೇ ಸಂದರ್ಭಧಲ್ಲಿ ಪ್ರತಿಜ್ಞಾ ವಿಧಿ ಭೋದಿಸಿದರು.


ಸಂತೋಷ ಕಠಾರೆ ಕಾರ್ಯಕ್ರಮ ಉದ್ದೇಶ ಮಾತನಾಡಿ ಉತ್ತಮ ಸಮಾಜ ನಿರ್ಮಾಣ ಮಾಡುವಲ್ಲಿ ಪ್ರತಿಯೊಬ್ಬ ಮತದಾರರ ಪಾತ್ರ ಅತ್ಯಮೂಲ್ಯವಾದುದು. ದೇಶದ ಅಭಿವೃದ್ಧಿಗಾಗಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲಾಗಿದೆ. ಹಾಗಾಗಿ ಈ ವ್ಯವಸ್ಥೆಯು ಉತ್ತಮವಾಗಿ ಇರಬೇಕಾದರೆ ಪ್ರತಿಯೊಬ್ಬ ಮತದಾರರು ಸ್ವಯಂ ಪ್ರೇರಿತರಾಗಿ ಮತಚಲಾಯಿಸುವ ಕೆಲಸ ಮಾಡಬೇಕು  ಹಾಗೂ ಪ್ರತಿಯೊಬ್ಬ ವ್ಯಕ್ತಿಯೂ ಯಾವುದೇ ಕುಲ, ಮತ, ಜಾತಿ, ಧರ್ಮ, ಹಣ ಆಮಿಷಗಳಿಗೆ ಒಳಗಾಗದೇ ಪ್ರಾಮಾಣಿಕತೆಯಿಂದ ಮತದಾನ ಮಾಡುವ ಮೂಲಕ ತಮ್ಮ ಹಕ್ಕನ್ನು ಚಲಾಯಿಸಬೇಕೆಂದು ಎಂದರು.


ಈ ಕಾರ್ಯಕ್ರಮದಲ್ಲಿ  ಗ್ರಾಮ ಪಂಚಾಯತಿ ನೀಲಮ್ಮ ಜಿ.ಬಿ, ಸಂತೋಷ ಕಠಾರೆ, ಶಿವಕುಮಾರ ಕಮ್ಮಾರ, ರಾಘವೇಂದ್ರ ಉಪ್ಪಾರ, ನೇಹರು ಯುವಕೇಂದ್ರ ಯುವ ಕಾರ್ಯಕರ್ತರಾದ ಜ್ಯೋತಿ ಮೂಲಿಮನಿ, ಊರಿನ ಗುರುಹಿರಿಯರು ಮಹಿಳೆಯರು ಉಪಸ್ಧಿತಿಯಲ್ಲಿ ಇದ್ದರು.