ಕೊಪ್ಪಳ : ಕಿನ್ನಾಳ
ಗ್ರಾಮದಲ್ಲಿ ಶ್ರೀ ಸ್ವಾಮಿ ವಿವೇಕಾನಂದ ಸೇವಾ ಸಂಸ್ಧೆ ಹಾಗೂ ಅಮರಜ್ಯೋತಿ ನಗರ ಗ್ರಾಮೀಣಭಿವೃದ್ಧಿ ಮತ್ತು ಸ್ವಯಂ ಉದ್ಯೋಗ್ಯ ತರಬೇತಿ ಸಂಸ್ಥೆ ಯಲಬುರ್ಗಾ ಇವರ ಸಂಯುಕ್ತ ಆಶ್ರಯದಲ್ಲಿ ಕಿನ್ನಾಳ ಗ್ರಾಮದಲ್ಲಿ 100 ದಿನಗಳ
ಮಹಿಳಾ ಸ್ವಯಂ ಉದ್ಯೋಗ ತರಬೇತಿ ಕಾರ್ಯಾಗಾರಕ್ಕೆ ಚಾಲನೆಯನ್ನು ನೀಡಲಾಯಿತು.
ಈ ಕಾರ್ಯಾಗಾರವು ನಮ್ಮ ಸಂಸ್ಥೆಯದ್ಯೇಯೋದ್ದೇಶಗಳಾದ ಶಿಕ್ಷಣ, ಸಂಸ್ಕೃತಿ,
ಸ್ವಾವಲಂಬನೆ ಕನಸನ್ನು ನನಸಾಗಿಸುವತ್ತ ಹೆಜ್ಜೆ ಹಾಕಿ ಗ್ರಾಮೀಣ ಭಾಗದ ಮಹಿಳೆಯರಿಗೆ ಸ್ವಾವಲಂಬನೆಯ ಬದುಕು ಕಟ್ಟಿಕೊಳ್ಳಲು ಸಹಕಾರಿಯಾಗಲಿದೆ. ಹಾಗೂ
ಗ್ರಾಮ ಪಂಚಾಯತ ಕಿನ್ನಾಳ ಸಹಕಾರ ನೀಡಿದ್ದು.ಕಾರ್ಯಾಗಾರ ನಾಳೆಯಿಂದ ಪೂರ್ಣವಾಗಿ ಆರಂಭವಾಗಲಿದೆ. ನಿಮ್ಮ
ಸುತ್ತಮುತ್ತಲಿನ ಕುಟುಂಬದ ಮಹಿಳೆಯರಿಗೆ ಕಾರ್ಯಾಗಾರದ ಸದುಪಯೋಗ ಪಡೆಯಲು ಮೌನೇಶ ಕಮ್ಮಾರ ತಿಳಸಿದರು.
ಈ ಕಾರ್ಯಕ್ರಮಕ್ಕೆ ಗ್ರಾಮ ಪಂಚಾಯತಿ ವೀರನಗೌಡ ಚನ್ನವೀರಗೌಡ್ರ ಪಿ.ಡಿ.ಒ ಮತ್ತು ನೀಲಮ್ಮ ಜಿ.ಬಿ ಹಾಗೂ ಮಾಜಿ ಗ್ರಾಮ ಪಂಚಾಯತಿ ಅದ್ಯಕ್ಷರು ಓಂಕಾರಮ್ಮ ಶಿರಿಗೇರಿ,ಮೌನೇಶ ಕಿನ್ನಾಳ, ಶರಣಪ್ಪ
ಕಂಚಿ,ಲಿಂಗರಾಜ ಶಿರಿಗೇರಿ,ಸಂತೋಷ ಕಠಾರೆ, ರಾಘವೇಂದ್ರ
ಉಪ್ಪಾರ ಊರಿನ ಗುರುಹಿರಿಯರು ಮಹಿಳೆಯರು ಉಪಸ್ಥಿತರಿದ್ದರು.