ಕೊಪ್ಪಳ : ಕಿನ್ನಾಳ ಗ್ರಾಮದಲ್ಲಿ ಶ್ರೀ ಸ್ವಾಮಿ ವಿವೇಕಾನಂದ ಸೇವಾ ಸಂಸ್ಧೆ ಹಾಗೂ ಹಾಗೂ ಅಭಿನವ ಶ್ರೀ ಸಿದ್ದೇಶ್ವರ ಶಿಕ್ಷಣ ಗ್ರಾಮೀಣ ಕ್ಷೇಮಾಭಿವೃದ್ಧಿ ಸಂಸ್ಥೆ ಕೊಪ್ಪಳ ಇವರ ಸಹಯೋಗದಲ್ಲಿ SSLC ವಿದ್ಯಾರ್ಥಿಗಳ ಉತ್ತಮ ಫಲಿತಾಂಶಕ್ಕಾಗಿ ವ್ಯಕ್ತಿಗಳಿಂದ ಪರೀಕ್ಷಾ ಪೂರ್ವ ತರಬೇತಿ ಕಾರ್ಯಾಗಾರವನ್ನು ಸರಕಾರಿ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯ ಕಿನ್ನಾಳ ಹಮ್ಮಿಕೊಳ್ಳಾಯಿತು.
ಆನಂದ ಹಳ್ಳಿಗುಡಿ ಮಾತನಾಡಿ ವಿದ್ಯಾರ್ಥಿಗಳು ಪರೀಕ್ಷೆಯನ್ನು ಏಕಾಗ್ರತೆ ಮತ್ತು ಅತ್ಮವಿಶ್ವಾಸದಿಂದ ಬರೆಯಬೇಕು. ಗಣಿತ ಮತ್ತು ಇಂಗ್ಲೀಷ್ ವಿಷಯಗಳನ್ನು ಆಸಕ್ತಿಯಿಂದ ಗಮನಿಸಿದರೆ ಅತ್ಯಂತ ಸರಳವಾಗಿ ಅರಿಯಬಹುದು. ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಅತಿಮುಖ್ಯ ಘಟ್ಟವಾಗಿದ್ದು ಬಹಳ ಶ್ರಮಪಟ್ಟು ವಿದ್ಯಾಭ್ಯಾಸ ಮಾಡಿ ತಮ್ಮ ಬದುಕನ್ನು ರೂಪಿಸಿಕೊಳ್ಳುವಂತೆ ತಿಳಿ ಹೇಳಿದರು.
ಶೋಭಾ ವೇದಪಾಠಕ ಮಾತನಾಡಿ ವಿದ್ಯಾರ್ಥಿಗಳಲ್ಲಿ ಪರೀಕ್ಷೆಯ ಭಯ ಬೇಡ, ಪಬ್ಲಿಕ್ ಪರೀಕ್ಷೆಯನ್ನು ಧೈರ್ಯದಿಂದ ಎದುರಿಸಿದಾಗ ಉತ್ತಮ ಅಂಕ ಗಳಿಸಲು ಸಾಧ್ಯವಾಗುವುದು ಎಂದು ಹೇಳಿದರು. ಜಯಶ್ರೀ ಅಂಗಡಿ, ಅಧ್ಯಕ್ಷತೆ ವಹಿಸಿದ್ದರು. ಸರಕಾರಿ ಪ್ರೌಢ ಶಾಲೆ ಶಿಕ್ಷಕರಾದ ಮಂಜುನಾಥ ಕಟ್ಟಿ, ಸರೋಜಾ ಮೇದಪಾಠಕ ಮತ್ತಿತರರು ಹಾಜರಿದ್ದರು. ಸಂತೋಷ ಕಠಾರೆ ಸ್ವಾಗತಿಸಿ, ಮೈಲಾರಪ್ಪ ಕುಣಿ ನಿರೂಪಿಸಿ, ಹಾಗೂ ವಿದ್ಯಾರ್ಥಿಗಳು ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು.