Saturday, March 18, 2017

ಕಿನ್ನಾಳ ಗ್ರಾಮದ ಬಸ್ ನಿಲ್ದಾಣದ ಸ್ವಚ್ಚತಾ ಕಾರ್ಯಕ್ರಮ

ಸ್ವಾಮಿ ವಿವೇಕಾನಂದ ಸೇವಾ ಸಂಸ್ಥೆ ಕಿನ್ನಾಳ ವತಿಯಿಂದ ದಿ.17.02.2017 ಕಿನ್ನಾಳ ಗ್ರಾಮದ ಬಸ್ ನಿಲ್ದಾಣದ ಸ್ವಚ್ಚತಾ ಕಾರ್ಯಕ್ರಮ ಮಾಡಲಾಯಿತು...
ನಮ್ಮ ನಡೆ ಸ್ವಚ್ಛತೆಯ ಕಡೆ

ಡಾ|| ಬಿ.ಆರ್ ಅಂಬೇಡ್ಕರ್ ಪುತ್ತಳಿಗೆ ಪುಷ್ಪನಮನ

ಕಿನಾಳ ಗ್ರಾಮದಲ್ಲಿ ಡಾ|| ಬಾಬಾ ಸಾಹೇಬ್ ಅಂಬೇಡ್ಕರ್ ಅವರ ೬೦ನೇ ಮಹಾಪರಿ ನಿರ್ಮಾಣ ಅಂಗವಾಗಿ ನಮ್ಮ ನಡೆ ಸಾಮರಸ್ಯದ ಕಡೆ ಎನ್ನುವ ಕಾರ್ಯಕ್ರಮವನ್ನು ಶ್ರೀ ಸ್ವಾಮಿ ವಿವೇಕಾನಂದ ಸೇವಾ ಸಂಸ್ಥೆ ಕಿನ್ನಾಳ ವತಿಯಿಂದ ಆಯೋಜಿಸಲಾಗಿತ್ತು.
ಡಾ|| ಬಿ.ಆರ್ ಅಂಬೆಂಡ್ಕರ್ ಅವರ ಪುತ್ತಳಿಗೆ ಪುಷ್ಪನಮನವನ್ನುಸಲ್ಲಿಸಿ ಮೇಣದ ಬತ್ತಿಗಳನ್ನು ಬೆಳಗಿಸುವದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತ್ತು. ಗ್ರಾಮದ ಹಿರಿಯರಾದ ವಿರೇಶ ತಾವರಗೇರಿ ಯವರು ಮಾತನಾಡಿ ಸಮಾಜಕ್ಕೆ ಅಂಬೆಂಡ್ಕರ್ ಅವರ ಕೊಡುಗೆ ಅಪಾರ ಸಂವಿಧಾನ ಶಿಲ್ಪಿಗಳು ಆಗಿರುವ ಅವರನ್ನು ನಾವೇಲ್ಲ ಗೌರವಿಸಬೇಕು ಹಾಗೂ ಅವರ ಅನುಯಾಯಿಗಳಾಗಿ ಸಮಾಜಮುಖಿಯಾಗಿ ಕಾರ್ಯನಿರ್ವಹಿಸಬೇಕು ಎಂದರು ನಂತರ ಸ್ವಾಮಿ ವಿವೇಕಾನಂದ ಸೇವಾ ಸಂಸ್ಥೆಯ ಅಧ್ಯಕ್ಷ ಮೌನೇಶ ಕಿನ್ನಾಳ ಮಾತನಾಡಿ ಸಾಮಾಜಿಕ ಕ್ರಾಂತಿ ಸೂರ್ಯ, ಭಾರತರತ್ನ, ರಾಷ್ಟ್ರೀಯವಾದಿ, ಅಂಬೇಡ್ಕರ್ ಅವರು ಕೇವಲ ದಲಿತ ನಾಯಕಲ್ಲ ಅವರು ದೇಶದ ಆಸ್ತಿ, ಅವರ ಕುರಿತು ಮಾvನಾಡುವುದೆಂದರೆ ಸಮುದ್ರದ ನೀರನ್ನು ತಂಬಿಗೆಯಲ್ಲಿ ಅಳತೆ ಮಾಡಿದಂತೆ ಆಗುತ್ತದೆ. ತೆರೆದಷ್ಟು ಬೆಳೆಯುತ್ತಾರೆ ಸಾಗುವ ಮೇರು ಪರ್ವತದ ವ್ಯಕ್ಥಿತ್ವ ಅಂಬೆಂಡ್ಕರ್ ಅವರದು ಆದರೆ ಇವತ್ತಿ ದಿನ ಅವರನ್ನು ಕೇವಲ ಎಂದು ವರ್ಗದ ನಾಯಕನಾಗಿ ಬಿಂಬಿಸುತ್ತಿರುವುದು. ಬದಲಾಗಿ ಅವರು ಮಹಾನ ಅರ್ಥಶಾಸ್ತ್ರಜ್ಞ ಶಿಕ್ಷಣಶಾಸ್ತ್ರಜ್ಞ ನೋವುಂಡು ಬಳಸಿದ ದಲಿತ ಫಿಡಿತ ಶೋಷಿತ ವರ್ಗಗಳ ಹೋರಾಟಗಾರರ ನಾಯಕ ರಾಷ್ಟ್ರೀಯವಾದಿ ಎನ್ನುವುದನ್ನು ತಿಳಿಯಪಡಿಸಲಾಗಿದೆ.
ಯಾವುದೊ ಒಂದು ಗುಂಪು ಮಾತನಾಡಿದರೆ ಅದು ಕುರುಬ ಜನಾಂಗ, ವಾಲ್ಮೀಕಿ ಕನಕದಾಸರ ಕುರಿತು ಬೇಡ ಅಂಬೇಡ್ಕರ ಕುರಿತು ಮಾತನಾಡುತ್ತಾನೆಂದರೆ ಯಾವುದೇ ಕೆಳ ಜಾತಿಯವರು ಎನ್ನುವ ಮನಸ್ಥಿತಿ ಈ ಜಾತಿ ಪದ್ದತಿ ದೂರಾಗಬೇಕು ಪ್ರತಿ ಮನೆ ಮನೆಯಲ್ಲಿ ಅಂಬೇಡ್ಕರರವರ ಆದೇಶಗಳನ್ನು ಪಾಲಿಸಬೇಕು ಶೋಷಿತ ವರ್ಗದ ಮೆಲಾಗುತ್ತಿರುವ ಅನ್ಯಾಯ ಅಪಮಾನಗಳು ದೂರಾಗಬೇಕು ಎಲ್ಲರೂ ಅಂಬೇಡ್ಕರ ಹೆಸರಿನಲ್ಲಿ ಪ್ರತಿಜ್ಞೆಯನ್ನು ಮಾಡಿ ಸಮಾನತೆ, ಸಾಮರಸ್ಯ ನಮ್ಮಿಂದಲೇ ನಮ್ಮ ಮನೆಯಿಂದಲೇ ಪ್ರಾರಂಭವಾಗಬೇಕು ಎಂದು ಸಾರ್ವಜನಿಕರಿಗೆ ಪ್ರೇರಣೆ ನೀಡಿದರು.
ಈ ಸಂದರ್ಭದಲ್ಲಿ ಹಿರಿಯರಾದ ಉದಯ ಚಿತ್ರಗಾರ, ಮಂಜುನಾಥ ಶಿರಗೇರಿ, ದಾವಸಾಬ ಕನಕಗಿರಿ, ಆನಂದ ಯಾವಗಲ್ ವಿನಾಯಕ್ ಪೂಜಾರ, ಸಂಕೆತ್ ಕುರುಬರ್, ರವಿ ವಾಲ್ಮೀಕಿ, ವಿರೇಶ, ಅಶ್ವತ್ ಸಾಗರ್, ಮಣವೇಶ ಹಳ್ಳಿಕೇರಿ, ನಾಗರಾಜ ಚಿತ್ರಗಾರ, ಶರಣಪ್ಪ ಲಕ್ಕುಂಡಿ, ವಿನಾಯಕ ಹಳಪೇಟಿ, ಮೈಲಾರಪ್ಪ ಕುಣಿ,ಸಂತೋಷ ಬಿಸನಳ್ಳಿ ಹಾಗೂ ಸ್ವಾಮಿ ವಿವೇಕಾನಂದ ಸೇವಾ ಸಂಸ್ಥೆಯ ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು.ಲಿಂಗರಾಜ ಶಿರಗೇರಿ ನಿರೂಪಿಸಿದರು. ಕೊನೆಯಲ್ಲಿ ರವಿ ಕಿರಣ ವಂದಿಸಿದರು.

ಮೋದಿ ಭಾವಚಿತ್ರಕ್ಕೆ ಕ್ಷೀರಾಭೀಷೇಕ

ಕಿನ್ನಾಳ ಗ್ರಾಮದಲ್ಲಿ ಶ್ರೀ ಸ್ವಾಮಿ ವಿವೇಕಾನಂದ ಸೇವಾ ಸಂಸ್ಥೆ ಯಿಂದ ನರೇಂದ್ರ ಮೋದಿಯವರ ೫೦೦, ೧೦೦೦ ರೂ ನೋಟುಗಳ ನಿಷೇಧವನ್ನು ಬೆಂಬಲಿಸಿ ಬಸವೇಶ್ವರ ವೃತ್ತದಲ್ಲಿ ಜನ ಜಾಗೃತಿ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.
ಸ್ವಾಮಿ ವಿವೇಕಾನಂದರ ಸೇವಾ ಟ್ರಸ್ಟ್‌ನ ಅಧ್ಯಕ್ಷರಾದ ಮೌನೇಶ ಕಿನ್ನಾಳ ರವರು ನರೇಂದ್ರ ಮೋದಿಯವರ ಭಾವಚಿತ್ರಕ್ಕೆ ಕ್ಷೀರಾಭಿಷೇಕ ಮತ್ತು ಪುಷ್ಪಾರ್ಪಣೆ ಮಾಡುವುದರ ಮೂಲಕ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡುತ್ತಾ ದೇಶ ಅಂತ ಬಂದಾಗ ಪಕ್ಷ ಯಾವುದೇ ಆಗಿರಲಿ, ಪದವಿ ಯಾವುದೇ ಇರಲಿ ನಾವೆಲ್ಲರು ಒಂದಾಗಬೇಕು. ಇಂದು ಎಡ ಪಕ್ಷಗಳು ಕರೆ ನೀಡಿರುವ ಭಾರತ ಬಂದ್‌ಗೆ ನಮ್ಮ ವಿರೋಧವಿದೆ. ಬದುಕಿದರೂ ಭಾರತಕ್ಕಾಗಿ, ಸತ್ತರೂ ಭಾರತಕ್ಕಾಗಿ ಎನ್ನುತ್ತಿರುವ ದೇಶದ ಪ್ರಧಾನಿಗೆ ನಮ್ಮ ಬೆಂಬಲ ಸದಾ ಇರಬೇಕು. ಜನರೂ ಯಾವುದೇ ಕಾರಣಕ್ಕೂ ಬಂದ್‌ಗೆ ಬೆಂಬಲ ನೀಡಬಾರದು. ದೇಶದ ಹೊರಗಿರುವ ಭಯೋತ್ಪಾದಕರನ್ನು ನಿಗ್ರಹಿಸಲು ಗಡಿಯಲ್ಲಿ ಸೈನಿಕರಿದ್ದಂತೆ ದೆಶದ ಒಳಗಿರುವ ಭಯೋತ್ಪಾದಕರು, ಭ್ರಷ್ಟಾಚಾರಿಗಳನ್ನು ನಿಗ್ರಹಿಸಲೆಂದೆ ಅವತರಿಸಿರುವ ಮೋದಿಜಿಯವರಿಗೆ ನಮ್ಮ ಬೆಂಬಲ ಎಂದರು.
ಈ ಸಂದರ್ಭದಲ್ಲಿ ಸ್ವಾಮಿ ವಿವೇಕಾನಂದರ ಸೇವಾ ಟ್ರಸ್ಟನ ಪದಾಧಿಕಾರಿಗಳಾದ ಲಿಂಗರಾಜ ಸಿರಗೇರಿ, ಬಸವರಾಜ ಪರಗಿ, ರಂಜಿತ್ ಕಳ್ಳಿಮನಿ, ರವಿಕಿರಣ ಶ್ಯಾವಿ, ಮಂಜುನಾಥ ಮಳ್ಳಿ, ಮೈಲಾರಪ್ಪ ಕುಣಿ, ನಾರಾಯಣ ಕಡ್ಲಿಬಾಳ, ಮಂಜುನಾಥ ಬಂಡಾ, ಮಹೇಶ ಗಾಳಿ, ಮಂಜುನಾಥ ಹುಲಿ, ರಾಘವೇಂದ್ರ ಉಪ್ಪಾರ, ಕನಕಪ್ಪ ವಾಲ್ಮೀಕಿ, ಗ್ರಾಮದ ಹಿರಿಯರು, ಸಾರ್ವಜನಿಕರು, ಮಹಿಳೆಯರು, ಮಕ್ಕಳು ಪಾಲ್ಗೊಂಡಿದ್ದರು.

ರಸ್ತೆಯ ದುರಸ್ಥಿ ಕುರಿತು

 ರಸ್ತೆಯ ದುರಸ್ಥಿ ಕುರಿತು ಸ್ವಾಮಿ ವಿವೇಕಾನಂದ ಸೇವಾ ಸಂಸ್ಥೆ ಕಿನ್ನಾಳಿನ ನೇತೃತ್ವದಲ್ಲಿ ಗ್ರಾಮದ ಬಸವೇಶ್ವರ ವೃತ್ತದಲ್ಲಿ ರಸ್ತೆ ತಡೆ ಮಾಡುವುದರ ಮೂಲಕ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು. ಎರಡು ಗಂಟೆಗಳ ಕಾಲ ರಸ್ತೆ ತಡೆ ನಡೆಸಲಾಯಿತು.
ಪ್ರತಿಭಟನೆ ನೇತೃತ್ವವನ್ನು ವಹಿಸಿದ್ದ ಸ್ವಾಮಿ ವಿವೇಕಾನಂದ ಸೇವಾ ಸಂಸ್ಥೆಯ ಅಧ್ಯಕ್ಷ ಮೌನೇಶ್ ಕಿನ್ನಾಳ ಮಾತನಾಡಿ ಕಿನ್ನಾಳ ಗ್ರಾಮವು ಜಿಲ್ಲಾ ಕೇಂದ್ರದಿಂದ ಕೇವಲ ಹತ್ತು ಕೀಲೋ ಮೀಟರ್ ದೂರವಿದ್ದು ಇಬ್ಬರು ಸಚಿವರಿದ್ದು, ಗಂಡ ಹೆಂಡತಿ ಜಗಳದಲ್ಲಿ ಕೂಸು ಬಡವಾಯಿತು ಎನ್ನುವ ಹಾಗೇ ಕಿನ್ನಾಳಿನ ಪರಿಸ್ಥಿತಿ ಆಗಿದೆ. ಅನೇಕ ಮೂಲಭೂತ ಸಮಸ್ಯೆಗಳ ಗೂಡಾಗಿರುವ ಗ್ರಾಮದಲ್ಲಿ ಕೊಪ್ಪಳ ಕಿನ್ನಾಳ ರಸ್ತೆಯು ತೀರಾ ಹದಗೆಟ್ಟಿದ್ದು, ಸಾರ್ವಜನಿಕರು ಮನವಿ ನೀಡಿದರು ಜನ ಪ್ರತಿನಿಧಿಗಳು ಯಾವುದೇ ರೀತಿಯ ಸ್ಪಂದನೆ ನೀಡದಿರುವುದು ದುರದೃಷ್ಟಕರ. ೨೦ ನಿಮಿಷಗಳಲ್ಲಿ ತಲುಪುಬೇಕಾದ ರಸ್ತೆ ೪೫ ನಿಮಿಷ ಬೇಕಾಗುತ್ತಿದೆ. ರಸ್ತೆಗಳೆಲ್ಲಾ ಗುಂಡಿಗಳು ಅಲ್ಲಲ್ಲಿ ಗುಂಡಿಗಳಲ್ಲಿರುವ ಸ್ವಲ್ಪ ರಸ್ತೆಯಲ್ಲಿ ಅನೇಕ ಅಪಘಾತವಾಗುತ್ತಿದ್ದು ಅನೇಕ ಗರ್ಭೀಣಿ ಮಹಿಳೆಯರ ಹೆರಿಗೆಗಳು ರಸ್ತೆಯಲ್ಲೆ ಆಗಿವೆ. ಅನೇಕ ಅನಾರೋಗ್ಯ ಪೀಡಿತರು ಜಿಲ್ಲಾ ಆಸ್ಪತ್ರೆಗೆ ಸೇರಿಸುವ ಮುನ್ನವೇ ಪ್ರಾಣಬಿಟ್ಟಿದ್ದಾರೆ. ಇಷ್ಟು ಸಮಸ್ಯೆಗಳಿದ್ದರು ಗಮನಿಸದ ಜನಪ್ರತಿನಿಧಿಗಳು ಸಾರ್ವಜನಿಕರು ಪ್ರತಿಭಟನೆ ಮಾಡುತ್ತಾರೆ ಎನ್ನುವ ಸುದ್ದಿ ತಿಳಿಯುತ್ತಿದ್ದಂತೆ ಅಲ್ಲಲ್ಲಿ ಗುಂಡಿಗಳನ್ನು ಮುಚ್ಚಿಸುವ ಕೆಲಸವನ್ನು (ಪ್ಯಾಚ್ ವರ್ಕ) ಮಾಡಲಾಗುತ್ತಿದೆ. ಆದ್ದರಿಂದ ದಯಮಾಡಿ ಗಂಗಾವತಿ ವಿಧಾನಸಭಾ ಕ್ಷೇತ್ರದ ಸಚಿವರಾದ ಇಕ್ಬಾಲ್ ಅನ್ಸಾರಿ ಹಾಗೂ ಕೊಪ್ಪಳ ವಿಧಾನಸಭಾ ಕ್ಷೇತ್ರ ಸಚಿವರಾದ ರಾಘವೇಂದ್ರ ಹಿಟ್ನಾಳ ಮತ್ತು ಸಂಭಂಧಪಟ್ಟ ಅಧಿಕಾರಿಗಳಲ್ಲಿ ನಾವು ಮನವಿ ಮಾಡುತ್ತಿದ್ದೇವೆ ಈ ಕೂಡಲೇ ಕೊಪ್ಪಳ ಕಿನ್ನಾಳ ರಸ್ತೆಯನ್ನು ಆರಂಭಿಸಬೇಕು ಇಲ್ಲದಿದ್ದರೇ ಮುಂದಿನ ದಿನಮಾನಗಳಲ್ಲಿ ಉಗ್ರವಾದ ಹೋರಾಟವನ್ನು ಕೈಗೊಳ್ಳಲಾಗುವುದು ಎಂದರು.
ನಂತರ ಕೊಪ್ಪಳದ ತಹಸಿಲ್ದಾರರು ಪ್ರತಿಭಟನಾ ಸ್ಥಳಕ್ಕೆ ಬಂದು ಮನವಿಯನ್ನು ಸ್ವೀಕರಿಸಿದರು.ಈ ಪ್ರತಿಭಟನೆಯಲ್ಲಿ ಕಿನ್ನಾಳ ಗ್ರಾಮದ ಡಾ.ಬಿ.ಆರ್. ಅಂಬೇಡ್ಕರ್ ಆಟೋಚಾಲಕರ ಸಂಘದ ಸರ್ವ ಸದಸ್ಯರು ಹಾಗೂ ಗ್ರಾಮದ ಯುವಕರಾದ ಉದಯ ಚಿತ್ರಗಾರ, ಮಂಜುನಾಥ ಶಿರಗೇರಿ, ಮಹಾದೇವಯ್ಯ ಹೀರೇಮಠ, ಲಿಂಗರಾಜ ಶಿರಗೇರಿ, ಮೈಲಾರಪ್ಪ ಕುಣಿ,ಪವನ ಬಣ್ಣದ, ಗವಿಸಿದ್ದಪ್ಪ ವಡ್ಡರ್, ಪೋಸ್ಟ್ ರಾಮು, ನವೀನ ಬಳೂಚಗಿ, ಹನುಮಂತಪ್ಪ ಕುಂಬಾರ್, ಸ್ವಾಮಿ ವಿವೇಕಾನಂದ ಸೇವಾ ಸಂಸ್ಥೆಯ ಎಲ್ಲಾ ಪಧಾಧಿಕಾರಿಗಳು ಹಾಗೂ ಸಾರ್ವಜನಿಕರು ಪಾಲ್ಗೊಂಡಿದ್ದರು

ಚಂದ್ರಶೇಖರ ಅಜಾದರ ಪುಣ್ಯ ಸ್ಮರಣೆ ಕಾಯ೯ಕ್ರಮ

ದಿನಾಂಕ: 27/02/2017  ಕಿನ್ನಾಳ ಗ್ರಾಮದಲ್ಲಿ ಚಂದ್ರಶೇಖರ ಅಜಾದರ ಪುಣ್ಯ ಸ್ಮರಣೆ ಕಾಯ೯ಕ್ರಮವನ್ನು ಶ್ರೀ ಸ್ವಾಮಿ ವಿವೇಕಾನಂದ ಸೇವಾ ಸಂಸ್ಥೆ ವತಿಯಿಂದ ಆಚರಿಸಲಾಗಿತ್ತು

ಕಿನ್ನಾಳ ನಲ್ಲಿ ಸಾರ್ವಜನಿಕ ಕುಡಿಯುವ ನೀರಿನ ಅರವಟಿಗೆ ಹಾಗೂ ಪಕ್ಷಿ ಸಂಕುಲಕ್ಕೆ ಮರಗಳಲ್ಲಿ ನೀರಿನ ಅರವಟಿಗೆ

ದಿ.04.03.2017 ಕಿನ್ನಾಳ ನಲ್ಲಿ ಸಾರ್ವಜನಿಕ ಕುಡಿಯುವ ನೀರಿನ ಅರವಟಿಗೆ ಹಾಗೂ ಪಕ್ಷಿ ಸಂಕುಲಕ್ಕೆ  ಮರಗಳಲ್ಲಿ ನೀರಿನ ಅರವಟಿಗೆ ವ್ಯವಸ್ಥೆಯನ್ನು ಸ್ವಾಮಿ ವಿವೇಕಾನಂದ ಸೇವಾ ಸಂಸ್ಥೆಯಿಂದ   ಬಸವೆಶ್ವರ ವ್ರತ ಬಳಿ ನೇರವೆರಿಸಲಾಯೀತು ಈ  ಕಾಯಕ್ರಮಕ್ಕೆ ಸಂಸ್ಥೆಯ ಸರ್ವ ಸದಸ್ಯರುˌ ಗ್ರಾಮ ಪಂಚಾಯತ ಅಡಳಿತ ಮಂಡಳಿಯವರು ಹಾಗೂ ಊರಿನ ಗುರುಹಿರಿಯರು ಮತ್ತು ಅಟೋ ಚಾಲಕರು, ಹಮಾಲರು ಸಂಘದವರು ಭಾಗವಹಿಸಿದರು.