Friday, March 31, 2017
Saturday, March 25, 2017
ಕಿನ್ನಾಳದಲ್ಲಿ ಬಲಿದಾನ ದಿವಸ್ ದೇಶ ಪ್ರೇಮಿಗಳಿಗೆ ನುಡಿನಮನ
ಕೊಪ್ಪಳ : ತಾಲೂಕಿನ ಕಿನ್ನಾಳ ಗ್ರಾಮದಲ್ಲಿ ಸ್ವಾಮಿ ವಿವೇಕಾನಂದ ಸೇವಾ ಸಂಸ್ಥೆ ಕಿನ್ನಾಳ ವತಿಯಿಂದ ಮಾರ್ಚ 23 ರಂದು ಗ್ರಾಮದ ಕನಕದಾಸ ವೃತ್ತದಲ್ಲಿ ಬಲಿದಾನ ದಿವಸ ಕಾರ್ಯಕ್ರಮವನ್ನು ಭಗತ್ ಸಿಂಗ್ ಹಮಾಲರ ಸಂಘದ ಕಾರ್ಮಿಕರಿಗೆ ಸನ್ಮಾನ ಮಾಡುವುದರ ಮೂಲಕ ದೇಶ ಪ್ರೇಮಿಗಳಾದ ರಾಜ್‍ಗುರು ಸುಖದೇವ ಭಗತ್ ಸಿಂಗ್ ಅವರಿಗೆ ಗೌರವ ನಮನಗಳನ್ನು ಸಲ್ಲಿಸಲಾಯಿತು.
ಸಂಸ್ಥೆಯ ಪದಾಧಿಕಾರಿ ಮೈಲಾರಪ್ಪ ಕುಣಿ ಮಾತನಾಡಿ ಭಗತ್‍ಸಿಂಗ್, ರಾಜ್‍ಗುರ್, ಸುಖದೇವ ಅವರ ಬಲಿಧಾನ ದಿನವಾದ ಇಂದು ನಾವೆಲ್ಲರೂ ದೇಶಕ್ಕಾಗಿ ನಮ್ಮನ್ನು ನಾವು ತೊಡಗಿಸಿಕೊಳ್ಳತ್ತೇವೆಂದು ಶಪಥ ಮಾಡಬೇಕಾಗಿದೆ. ಸ್ವಾತಂತ್ರ್ಯ ಎನ್ನುವುದು ನಮಗೆ ಪುಕ್ಕಟೆಯಾಗಿ ಸಿಕ್ಕಿದ್ದಲ್ಲ ಸುಮಾರು ಆರೂವರೆ ಲಕ್ಷ ಬಲಿಧಾನಿಗಳ ತ್ಯಾಗದ ಫವಾಗಿದೆ. ಆದರೆ ಇವತ್ತಿನ ದಿನ ನಮಗೆ ಕ್ರೀಕೆಟರ್ ಮಹೇಂದ್ರ ಸಿಂಗ್ ಗೊತ್ತು ಆದರೆ ಭಗತ್ ಸಿಂಗ್ ಗೊತ್ತಿಲ್ಲಾ, ಕಪಿಲ್‍ದೇವ ಗೊತ್ತು ಸುಖದೇವ ಗೊತ್ತಿಲ್ಲಾ, ಅಪ್ಜಲ್‍ಗುರು ಗೊತ್ತು ರಾಜ್‍ಗುರು ಗೊತ್ತಿಲ್ಲಾ ಹೀಗೆಯೇ ಮುಂದೊರೆದರೆ ಮತ್ತೆ ನಾವುಗಳು ಇನ್ಯಾರದ್ದೊ ಕಪಿಮುಷ್ಟಿಗೆ ಸಿಲುಕಿದರು ಅನುಮಾನವಿಲ್ಲ. ನಮ್ಮ ಮಕ್ಕಳನ್ನು ಕ್ರಾಂತಿಕಾರಿಗಳನ್ನಾಗಿ ಮಾಡದಿದ್ದರು ಚಿಂತೆಯಿಲ್ಲ ದೇಶಕ್ಕಾಗಿ ಅವರ ಮನ ಮಿಡಿಯುವಂತೆ ತಯಾರು ಮಾಡಬೇಕಾಗಿರುವದು ಪ್ರತಿಯೊಬ್ಬ ಪಾಲಕರ ಆದ್ಯ ಕರ್ತವ್ಯವಾಗಿದೆ ಎಂದರು. ಹಾಗೂ ಹಿರಿಯರಾದ ಭಾಷುಸಾಬ ಹಿರೇಮನಿ ಮಾತನಾಡಿ ಭಗತ್‍ಸಿಂಗ್ ರಾಜ್‍ಗುರು ಸುಖದೇವ್ ಈ ದೇಶದ ಆಸ್ತಿ ಅವರ ಆದರ್ಶಗಳನ್ನು ಇವತ್ತಿನ ಯುವ ಜನತೆ ಪಾಲಿಸುವದರ ಜೋತೆಗೆ ಅವರನ್ನು ಸ್ಮರಿಸುವದು ನಮ್ಮೇಲ್ಲರ ಕರ್ತವ್ಯವಾಗಿದೆ ಎಂದರು.
ನಂತರ ಸನ್ಮಾನ ಸ್ವೀಕರಿಸಿದ ಹಮಾಲರ ಸಂಘದ ಕಾರ್ಮಿಕರಲ್ಲಿ ಒಬ್ಬರಾದ ನಾಗಪ್ಪ ಲ್ಯಾವಕ್ಕಿ ಮಾತನಾಡಿ ಗೌರವ ಸನ್ಮಾನ ಎನ್ನುವದು ಬರಿ ದುಡ್ಡಿರುವವರಿಗೆ, ರಾಜಕಾರಣಿಗಳಿಗೆ ಮಾತ್ರ ಅಂದುಕೊಂಡ್ಡಿದ್ದವು ಆದರೆ ನಮ್ಮನ್ನು ಗೌರವಿಸಿ ಸನ್ಮಾನ ಮಾಡುವವರು ಇದ್ದಾರೆ ಎನ್ನುವದು ತುಂಬ ಸಂತೋಷವನ್ನು ಉಂಟುಮಾಡಿದೆ ಸ್ವಾಮಿ ವಿವೇಕಾನಂದ ಸೇವಾ ಸಂಸ್ಥೆ ಕಿನ್ನಾಳ ಇನ್ನೂ ಹೆಚ್ಚು ಹೆಚ್ಚು ಇಂತಹ ಕಾರ್ಯಕ್ರಮಗಳನ್ನು ಮಾಡಲು ಆ ದೇವರು ಶಕ್ತಿ ನೀಡಲಿ ಎಂದರು.
ಈ ಕಾರ್ಯಕ್ರಮದಲ್ಲಿ ಗ್ರಾಮದ ಹಿರಿಯರಾದ ಮಂಜುನಾಥ ಸಿರಿಗೇರಿ, ಉದಯ ಚಿತ್ರಗಾರ, ರಾಘವೇಂದ್ರ ಉಪ್ಪಾರ, ಶಿವುಕುಮಾರ ಕಾಕಿ, ನಾಗರಾಜ ಭಾಂಗಡಿ, ನವಿನ ಬಲೂಚಿಗಿ, ವಿನಾಯಕ್ ಪೂಜಾರ, ನಾಗರಾಜ ಚುಟ್ಟಾ, ರವಿಕಿರಣ ಶಾವಿ, ಶಿವುಕುಮಾರ ಪಾಗಿ, ಮಂಜುನಾಥ ಗ್ವಾಡೆಕೇರ, ಬಸವರಾಜ ವಾಲ್ಮಿಕಿ, ಜಗದಿಶ ಜಾಲಿಹಾಳ, ರಂಜಿತ್ ಕಳ್ಳಿಮನಿ, ಅಶ್ವತ್ ನಾರಯಣ ಸಾಗರ, ಮೌನೇಶ ಕಮ್ಮಾರ, ಹಾಗೂ ಸಂಸ್ಥೆಯ ಎಲ್ಲಾ ಪದಾಧಿಕಾರಿಗಳು, ಹಮಾಲರ ಸಂಘದ ಕಾರ್ಮಿಕರು ಹಾಗೂ ಗ್ರಾಮದ ಸಾರ್ವಜನಿಕರು ಉಪಸ್ಥಿತರಿದ್ದರು. ಕೊನೆಯದಾಗಿ ಲಿಂಗರಾಜ್ ಸಿರಿಗೇರಿ ನಿರೂಪಿಸಿ ವಂದಿಸಿದರು.
Sunday, March 19, 2017
ಕಿನ್ನಾಳದಲ್ಲಿ ಸ್ವಾಮಿ ವಿವೇಕಾನಂದರ 154 ನೇ ಜಯಂತಿ ಆಚರಣೆ
ದಿ.12.01.2017 ರಂದು ಶ್ರೀ ಸ್ವಾಮಿ ವಿವೇಕಾನಂದರ 154ನೇ ಜಯಂತಿಯನ್ನು ಆಚರಿಸಲಾಗಿತ್ತು ಹಾಗೂ ಶ್ರೀ ಸ್ವಾಮಿ ವಿವೇಕಾನಂದ ವ್ರತ್ತದಲ್ಲಿ ಪೂಜಾ ಕಾರ್ಯಕ್ರಮ ನೆರವೇರಿಸಿ ಈ ಕಾಯ೯ಕ್ರಮದ ಬಡ ಪ್ರತಿಭಾನ್ವಿತ 06 ಆರು ವಿದ್ಯಾರ್ಥಿಗಳ ದತ್ತು ಪಡೆಯುವ ಕಾರ್ಯಕ್ರಮ ನಡೆಯಿತು
ದಿ.13.01.2017 ರಂದು ಬೆಳಗ್ಗೆ 9 ಗಂಟೆಗೆ ಕಿನ್ನಾಳದ ಮುಖ್ಯ ಬೀದಿಗಳಲ್ಲಿ ಶೋಭಾಯಾತ್ರೆ ನಂತರ ಗ್ರಾಮದ ಸರಕಾರಿ ಸಂಯುಕ್ತ ಪದವಿ ಕಾಲೇಜ್ ಕಿನ್ನಾಳ ಆವರಣದಲ್ಲಿ ಬಹಿರಂಗ ಸಭೆ ನಡೆಯಿತು ಮುಖ್ಯ ವಕ್ತಾರರಾಗಿ ಶ್ರೀ ವಸಂತ ಪೂಜಾರ, ಪ್ರಾಚಾರ್ಯರಾದ ಶ್ರೀ ಸೂಡಿ ಸರ್, ಸಂಸ್ಥೆಯ ಅದ್ಯಕ್ಷರಾದ ಶ್ರೀ ಮೌನೇಶ ಕಮ್ಮಾರ ವೇದಿಕೆ ಮೇಲೆ ಉಪಸ್ಥಿತರಿದ್ದರು.ಸಂಸ್ಥೆಯ ಕಾರ್ಯದರ್ಶಿ ಶ್ರೀ ಮೈಲಾರಪ್ಪ ಕುಣಿ ಯವರು ನಿರೂಪಿಸಿದರು...
Saturday, March 18, 2017
ಡಾ|| ಬಿ.ಆರ್ ಅಂಬೇಡ್ಕರ್ ಪುತ್ತಳಿಗೆ ಪುಷ್ಪನಮನ
ಕಿನಾಳ ಗ್ರಾಮದಲ್ಲಿ ಡಾ|| ಬಾಬಾ ಸಾಹೇಬ್ ಅಂಬೇಡ್ಕರ್ ಅವರ ೬೦ನೇ ಮಹಾಪರಿ ನಿರ್ಮಾಣ ಅಂಗವಾಗಿ ನಮ್ಮ ನಡೆ ಸಾಮರಸ್ಯದ ಕಡೆ ಎನ್ನುವ ಕಾರ್ಯಕ್ರಮವನ್ನು ಶ್ರೀ ಸ್ವಾಮಿ ವಿವೇಕಾನಂದ ಸೇವಾ ಸಂಸ್ಥೆ ಕಿನ್ನಾಳ ವತಿಯಿಂದ ಆಯೋಜಿಸಲಾಗಿತ್ತು.
ಡಾ|| ಬಿ.ಆರ್ ಅಂಬೆಂಡ್ಕರ್ ಅವರ ಪುತ್ತಳಿಗೆ ಪುಷ್ಪನಮನವನ್ನುಸಲ್ಲಿಸಿ ಮೇಣದ ಬತ್ತಿಗಳನ್ನು ಬೆಳಗಿಸುವದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತ್ತು. ಗ್ರಾಮದ ಹಿರಿಯರಾದ ವಿರೇಶ ತಾವರಗೇರಿ ಯವರು ಮಾತನಾಡಿ ಸಮಾಜಕ್ಕೆ ಅಂಬೆಂಡ್ಕರ್ ಅವರ ಕೊಡುಗೆ ಅಪಾರ ಸಂವಿಧಾನ ಶಿಲ್ಪಿಗಳು ಆಗಿರುವ ಅವರನ್ನು ನಾವೇಲ್ಲ ಗೌರವಿಸಬೇಕು ಹಾಗೂ ಅವರ ಅನುಯಾಯಿಗಳಾಗಿ ಸಮಾಜಮುಖಿಯಾಗಿ ಕಾರ್ಯನಿರ್ವಹಿಸಬೇಕು ಎಂದರು ನಂತರ ಸ್ವಾಮಿ ವಿವೇಕಾನಂದ ಸೇವಾ ಸಂಸ್ಥೆಯ ಅಧ್ಯಕ್ಷ ಮೌನೇಶ ಕಿನ್ನಾಳ ಮಾತನಾಡಿ ಸಾಮಾಜಿಕ ಕ್ರಾಂತಿ ಸೂರ್ಯ, ಭಾರತರತ್ನ, ರಾಷ್ಟ್ರೀಯವಾದಿ, ಅಂಬೇಡ್ಕರ್ ಅವರು ಕೇವಲ ದಲಿತ ನಾಯಕಲ್ಲ ಅವರು ದೇಶದ ಆಸ್ತಿ, ಅವರ ಕುರಿತು ಮಾvನಾಡುವುದೆಂದರೆ ಸಮುದ್ರದ ನೀರನ್ನು ತಂಬಿಗೆಯಲ್ಲಿ ಅಳತೆ ಮಾಡಿದಂತೆ ಆಗುತ್ತದೆ. ತೆರೆದಷ್ಟು ಬೆಳೆಯುತ್ತಾರೆ ಸಾಗುವ ಮೇರು ಪರ್ವತದ ವ್ಯಕ್ಥಿತ್ವ ಅಂಬೆಂಡ್ಕರ್ ಅವರದು ಆದರೆ ಇವತ್ತಿ ದಿನ ಅವರನ್ನು ಕೇವಲ ಎಂದು ವರ್ಗದ ನಾಯಕನಾಗಿ ಬಿಂಬಿಸುತ್ತಿರುವುದು. ಬದಲಾಗಿ ಅವರು ಮಹಾನ ಅರ್ಥಶಾಸ್ತ್ರಜ್ಞ ಶಿಕ್ಷಣಶಾಸ್ತ್ರಜ್ಞ ನೋವುಂಡು ಬಳಸಿದ ದಲಿತ ಫಿಡಿತ ಶೋಷಿತ ವರ್ಗಗಳ ಹೋರಾಟಗಾರರ ನಾಯಕ ರಾಷ್ಟ್ರೀಯವಾದಿ ಎನ್ನುವುದನ್ನು ತಿಳಿಯಪಡಿಸಲಾಗಿದೆ.
ಯಾವುದೊ ಒಂದು ಗುಂಪು ಮಾತನಾಡಿದರೆ ಅದು ಕುರುಬ ಜನಾಂಗ, ವಾಲ್ಮೀಕಿ ಕನಕದಾಸರ ಕುರಿತು ಬೇಡ ಅಂಬೇಡ್ಕರ ಕುರಿತು ಮಾತನಾಡುತ್ತಾನೆಂದರೆ ಯಾವುದೇ ಕೆಳ ಜಾತಿಯವರು ಎನ್ನುವ ಮನಸ್ಥಿತಿ ಈ ಜಾತಿ ಪದ್ದತಿ ದೂರಾಗಬೇಕು ಪ್ರತಿ ಮನೆ ಮನೆಯಲ್ಲಿ ಅಂಬೇಡ್ಕರರವರ ಆದೇಶಗಳನ್ನು ಪಾಲಿಸಬೇಕು ಶೋಷಿತ ವರ್ಗದ ಮೆಲಾಗುತ್ತಿರುವ ಅನ್ಯಾಯ ಅಪಮಾನಗಳು ದೂರಾಗಬೇಕು ಎಲ್ಲರೂ ಅಂಬೇಡ್ಕರ ಹೆಸರಿನಲ್ಲಿ ಪ್ರತಿಜ್ಞೆಯನ್ನು ಮಾಡಿ ಸಮಾನತೆ, ಸಾಮರಸ್ಯ ನಮ್ಮಿಂದಲೇ ನಮ್ಮ ಮನೆಯಿಂದಲೇ ಪ್ರಾರಂಭವಾಗಬೇಕು ಎಂದು ಸಾರ್ವಜನಿಕರಿಗೆ ಪ್ರೇರಣೆ ನೀಡಿದರು.
ಈ ಸಂದರ್ಭದಲ್ಲಿ ಹಿರಿಯರಾದ ಉದಯ ಚಿತ್ರಗಾರ, ಮಂಜುನಾಥ ಶಿರಗೇರಿ, ದಾವಸಾಬ ಕನಕಗಿರಿ, ಆನಂದ ಯಾವಗಲ್ ವಿನಾಯಕ್ ಪೂಜಾರ, ಸಂಕೆತ್ ಕುರುಬರ್, ರವಿ ವಾಲ್ಮೀಕಿ, ವಿರೇಶ, ಅಶ್ವತ್ ಸಾಗರ್, ಮಣವೇಶ ಹಳ್ಳಿಕೇರಿ, ನಾಗರಾಜ ಚಿತ್ರಗಾರ, ಶರಣಪ್ಪ ಲಕ್ಕುಂಡಿ, ವಿನಾಯಕ ಹಳಪೇಟಿ, ಮೈಲಾರಪ್ಪ ಕುಣಿ,ಸಂತೋಷ ಬಿಸನಳ್ಳಿ ಹಾಗೂ ಸ್ವಾಮಿ ವಿವೇಕಾನಂದ ಸೇವಾ ಸಂಸ್ಥೆಯ ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು.ಲಿಂಗರಾಜ ಶಿರಗೇರಿ ನಿರೂಪಿಸಿದರು. ಕೊನೆಯಲ್ಲಿ ರವಿ ಕಿರಣ ವಂದಿಸಿದರು.
ಮೋದಿ ಭಾವಚಿತ್ರಕ್ಕೆ ಕ್ಷೀರಾಭೀಷೇಕ
ಕಿನ್ನಾಳ ಗ್ರಾಮದಲ್ಲಿ ಶ್ರೀ ಸ್ವಾಮಿ ವಿವೇಕಾನಂದ ಸೇವಾ ಸಂಸ್ಥೆ ಯಿಂದ ನರೇಂದ್ರ ಮೋದಿಯವರ ೫೦೦, ೧೦೦೦ ರೂ ನೋಟುಗಳ ನಿಷೇಧವನ್ನು ಬೆಂಬಲಿಸಿ ಬಸವೇಶ್ವರ ವೃತ್ತದಲ್ಲಿ ಜನ ಜಾಗೃತಿ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.
ಸ್ವಾಮಿ ವಿವೇಕಾನಂದರ ಸೇವಾ ಟ್ರಸ್ಟ್‌ನ ಅಧ್ಯಕ್ಷರಾದ ಮೌನೇಶ ಕಿನ್ನಾಳ ರವರು ನರೇಂದ್ರ ಮೋದಿಯವರ ಭಾವಚಿತ್ರಕ್ಕೆ ಕ್ಷೀರಾಭಿಷೇಕ ಮತ್ತು ಪುಷ್ಪಾರ್ಪಣೆ ಮಾಡುವುದರ ಮೂಲಕ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡುತ್ತಾ ದೇಶ ಅಂತ ಬಂದಾಗ ಪಕ್ಷ ಯಾವುದೇ ಆಗಿರಲಿ, ಪದವಿ ಯಾವುದೇ ಇರಲಿ ನಾವೆಲ್ಲರು ಒಂದಾಗಬೇಕು. ಇಂದು ಎಡ ಪಕ್ಷಗಳು ಕರೆ ನೀಡಿರುವ ಭಾರತ ಬಂದ್‌ಗೆ ನಮ್ಮ ವಿರೋಧವಿದೆ. ಬದುಕಿದರೂ ಭಾರತಕ್ಕಾಗಿ, ಸತ್ತರೂ ಭಾರತಕ್ಕಾಗಿ ಎನ್ನುತ್ತಿರುವ ದೇಶದ ಪ್ರಧಾನಿಗೆ ನಮ್ಮ ಬೆಂಬಲ ಸದಾ ಇರಬೇಕು. ಜನರೂ ಯಾವುದೇ ಕಾರಣಕ್ಕೂ ಬಂದ್‌ಗೆ ಬೆಂಬಲ ನೀಡಬಾರದು. ದೇಶದ ಹೊರಗಿರುವ ಭಯೋತ್ಪಾದಕರನ್ನು ನಿಗ್ರಹಿಸಲು ಗಡಿಯಲ್ಲಿ ಸೈನಿಕರಿದ್ದಂತೆ ದೆಶದ ಒಳಗಿರುವ ಭಯೋತ್ಪಾದಕರು, ಭ್ರಷ್ಟಾಚಾರಿಗಳನ್ನು ನಿಗ್ರಹಿಸಲೆಂದೆ ಅವತರಿಸಿರುವ ಮೋದಿಜಿಯವರಿಗೆ ನಮ್ಮ ಬೆಂಬಲ ಎಂದರು.
ಈ ಸಂದರ್ಭದಲ್ಲಿ ಸ್ವಾಮಿ ವಿವೇಕಾನಂದರ ಸೇವಾ ಟ್ರಸ್ಟನ ಪದಾಧಿಕಾರಿಗಳಾದ ಲಿಂಗರಾಜ ಸಿರಗೇರಿ, ಬಸವರಾಜ ಪರಗಿ, ರಂಜಿತ್ ಕಳ್ಳಿಮನಿ, ರವಿಕಿರಣ ಶ್ಯಾವಿ, ಮಂಜುನಾಥ ಮಳ್ಳಿ, ಮೈಲಾರಪ್ಪ ಕುಣಿ, ನಾರಾಯಣ ಕಡ್ಲಿಬಾಳ, ಮಂಜುನಾಥ ಬಂಡಾ, ಮಹೇಶ ಗಾಳಿ, ಮಂಜುನಾಥ ಹುಲಿ, ರಾಘವೇಂದ್ರ ಉಪ್ಪಾರ, ಕನಕಪ್ಪ ವಾಲ್ಮೀಕಿ, ಗ್ರಾಮದ ಹಿರಿಯರು, ಸಾರ್ವಜನಿಕರು, ಮಹಿಳೆಯರು, ಮಕ್ಕಳು ಪಾಲ್ಗೊಂಡಿದ್ದರು.
ರಸ್ತೆಯ ದುರಸ್ಥಿ ಕುರಿತು
ರಸ್ತೆಯ ದುರಸ್ಥಿ ಕುರಿತು ಸ್ವಾಮಿ ವಿವೇಕಾನಂದ ಸೇವಾ ಸಂಸ್ಥೆ ಕಿನ್ನಾಳಿನ ನೇತೃತ್ವದಲ್ಲಿ ಗ್ರಾಮದ ಬಸವೇಶ್ವರ ವೃತ್ತದಲ್ಲಿ ರಸ್ತೆ ತಡೆ ಮಾಡುವುದರ ಮೂಲಕ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು. ಎರಡು ಗಂಟೆಗಳ ಕಾಲ ರಸ್ತೆ ತಡೆ ನಡೆಸಲಾಯಿತು.
ಪ್ರತಿಭಟನೆ ನೇತೃತ್ವವನ್ನು ವಹಿಸಿದ್ದ ಸ್ವಾಮಿ ವಿವೇಕಾನಂದ ಸೇವಾ ಸಂಸ್ಥೆಯ ಅಧ್ಯಕ್ಷ ಮೌನೇಶ್ ಕಿನ್ನಾಳ ಮಾತನಾಡಿ ಕಿನ್ನಾಳ ಗ್ರಾಮವು ಜಿಲ್ಲಾ ಕೇಂದ್ರದಿಂದ ಕೇವಲ ಹತ್ತು ಕೀಲೋ ಮೀಟರ್ ದೂರವಿದ್ದು ಇಬ್ಬರು ಸಚಿವರಿದ್ದು, ಗಂಡ ಹೆಂಡತಿ ಜಗಳದಲ್ಲಿ ಕೂಸು ಬಡವಾಯಿತು ಎನ್ನುವ ಹಾಗೇ ಕಿನ್ನಾಳಿನ ಪರಿಸ್ಥಿತಿ ಆಗಿದೆ. ಅನೇಕ ಮೂಲಭೂತ ಸಮಸ್ಯೆಗಳ ಗೂಡಾಗಿರುವ ಗ್ರಾಮದಲ್ಲಿ ಕೊಪ್ಪಳ ಕಿನ್ನಾಳ ರಸ್ತೆಯು ತೀರಾ ಹದಗೆಟ್ಟಿದ್ದು, ಸಾರ್ವಜನಿಕರು ಮನವಿ ನೀಡಿದರು ಜನ ಪ್ರತಿನಿಧಿಗಳು ಯಾವುದೇ ರೀತಿಯ ಸ್ಪಂದನೆ ನೀಡದಿರುವುದು ದುರದೃಷ್ಟಕರ. ೨೦ ನಿಮಿಷಗಳಲ್ಲಿ ತಲುಪುಬೇಕಾದ ರಸ್ತೆ ೪೫ ನಿಮಿಷ ಬೇಕಾಗುತ್ತಿದೆ. ರಸ್ತೆಗಳೆಲ್ಲಾ ಗುಂಡಿಗಳು ಅಲ್ಲಲ್ಲಿ ಗುಂಡಿಗಳಲ್ಲಿರುವ ಸ್ವಲ್ಪ ರಸ್ತೆಯಲ್ಲಿ ಅನೇಕ ಅಪಘಾತವಾಗುತ್ತಿದ್ದು ಅನೇಕ ಗರ್ಭೀಣಿ ಮಹಿಳೆಯರ ಹೆರಿಗೆಗಳು ರಸ್ತೆಯಲ್ಲೆ ಆಗಿವೆ. ಅನೇಕ ಅನಾರೋಗ್ಯ ಪೀಡಿತರು ಜಿಲ್ಲಾ ಆಸ್ಪತ್ರೆಗೆ ಸೇರಿಸುವ ಮುನ್ನವೇ ಪ್ರಾಣಬಿಟ್ಟಿದ್ದಾರೆ. ಇಷ್ಟು ಸಮಸ್ಯೆಗಳಿದ್ದರು ಗಮನಿಸದ ಜನಪ್ರತಿನಿಧಿಗಳು ಸಾರ್ವಜನಿಕರು ಪ್ರತಿಭಟನೆ ಮಾಡುತ್ತಾರೆ ಎನ್ನುವ ಸುದ್ದಿ ತಿಳಿಯುತ್ತಿದ್ದಂತೆ ಅಲ್ಲಲ್ಲಿ ಗುಂಡಿಗಳನ್ನು ಮುಚ್ಚಿಸುವ ಕೆಲಸವನ್ನು (ಪ್ಯಾಚ್ ವರ್ಕ) ಮಾಡಲಾಗುತ್ತಿದೆ. ಆದ್ದರಿಂದ ದಯಮಾಡಿ ಗಂಗಾವತಿ ವಿಧಾನಸಭಾ ಕ್ಷೇತ್ರದ ಸಚಿವರಾದ ಇಕ್ಬಾಲ್ ಅನ್ಸಾರಿ ಹಾಗೂ ಕೊಪ್ಪಳ ವಿಧಾನಸಭಾ ಕ್ಷೇತ್ರ ಸಚಿವರಾದ ರಾಘವೇಂದ್ರ ಹಿಟ್ನಾಳ ಮತ್ತು ಸಂಭಂಧಪಟ್ಟ ಅಧಿಕಾರಿಗಳಲ್ಲಿ ನಾವು ಮನವಿ ಮಾಡುತ್ತಿದ್ದೇವೆ ಈ ಕೂಡಲೇ ಕೊಪ್ಪಳ ಕಿನ್ನಾಳ ರಸ್ತೆಯನ್ನು ಆರಂಭಿಸಬೇಕು ಇಲ್ಲದಿದ್ದರೇ ಮುಂದಿನ ದಿನಮಾನಗಳಲ್ಲಿ ಉಗ್ರವಾದ ಹೋರಾಟವನ್ನು ಕೈಗೊಳ್ಳಲಾಗುವುದು ಎಂದರು.
ನಂತರ ಕೊಪ್ಪಳದ ತಹಸಿಲ್ದಾರರು ಪ್ರತಿಭಟನಾ ಸ್ಥಳಕ್ಕೆ ಬಂದು ಮನವಿಯನ್ನು ಸ್ವೀಕರಿಸಿದರು.ಈ ಪ್ರತಿಭಟನೆಯಲ್ಲಿ ಕಿನ್ನಾಳ ಗ್ರಾಮದ ಡಾ.ಬಿ.ಆರ್. ಅಂಬೇಡ್ಕರ್ ಆಟೋಚಾಲಕರ ಸಂಘದ ಸರ್ವ ಸದಸ್ಯರು ಹಾಗೂ ಗ್ರಾಮದ ಯುವಕರಾದ ಉದಯ ಚಿತ್ರಗಾರ, ಮಂಜುನಾಥ ಶಿರಗೇರಿ, ಮಹಾದೇವಯ್ಯ ಹೀರೇಮಠ, ಲಿಂಗರಾಜ ಶಿರಗೇರಿ, ಮೈಲಾರಪ್ಪ ಕುಣಿ,ಪವನ ಬಣ್ಣದ, ಗವಿಸಿದ್ದಪ್ಪ ವಡ್ಡರ್, ಪೋಸ್ಟ್ ರಾಮು, ನವೀನ ಬಳೂಚಗಿ, ಹನುಮಂತಪ್ಪ ಕುಂಬಾರ್, ಸ್ವಾಮಿ ವಿವೇಕಾನಂದ ಸೇವಾ ಸಂಸ್ಥೆಯ ಎಲ್ಲಾ ಪಧಾಧಿಕಾರಿಗಳು ಹಾಗೂ ಸಾರ್ವಜನಿಕರು ಪಾಲ್ಗೊಂಡಿದ್ದರು
ಕಿನ್ನಾಳ ನಲ್ಲಿ ಸಾರ್ವಜನಿಕ ಕುಡಿಯುವ ನೀರಿನ ಅರವಟಿಗೆ ಹಾಗೂ ಪಕ್ಷಿ ಸಂಕುಲಕ್ಕೆ ಮರಗಳಲ್ಲಿ ನೀರಿನ ಅರವಟಿಗೆ
ದಿ.04.03.2017 ಕಿನ್ನಾಳ ನಲ್ಲಿ ಸಾರ್ವಜನಿಕ ಕುಡಿಯುವ ನೀರಿನ ಅರವಟಿಗೆ ಹಾಗೂ ಪಕ್ಷಿ ಸಂಕುಲಕ್ಕೆ ಮರಗಳಲ್ಲಿ ನೀರಿನ ಅರವಟಿಗೆ ವ್ಯವಸ್ಥೆಯನ್ನು ಸ್ವಾಮಿ ವಿವೇಕಾನಂದ ಸೇವಾ ಸಂಸ್ಥೆಯಿಂದ ಬಸವೆಶ್ವರ ವ್ರತ ಬಳಿ ನೇರವೆರಿಸಲಾಯೀತು ಈ ಕಾಯಕ್ರಮಕ್ಕೆ ಸಂಸ್ಥೆಯ ಸರ್ವ ಸದಸ್ಯರುˌ ಗ್ರಾಮ ಪಂಚಾಯತ ಅಡಳಿತ ಮಂಡಳಿಯವರು ಹಾಗೂ ಊರಿನ ಗುರುಹಿರಿಯರು ಮತ್ತು ಅಟೋ ಚಾಲಕರು, ಹಮಾಲರು ಸಂಘದವರು ಭಾಗವಹಿಸಿದರು.
Subscribe to:
Posts (Atom)