Thursday, February 28, 2019

ಕಿನ್ನಾಳ ಎಸ್.ವಿ.ಎಸ್ ಸಂಸ್ಥೆಗೆ ಪ್ರಥಮ ಬಹುಮಾನ

ಕೊಪ್ಪಳ: ನಗರದ ಹಿಂದಿ ಪ್ರಚಾರ ಸಭಾ ಕಾನೂನು ಮಹಾವಿದ್ಯಾಲಯದಲ್ಲಿ ನೆಹರು ಯುವಕೇಂದ್ರ ಕೊಪ್ಪಳ ಯುವ ಸಮಾವೇಶ ಹಾಗೂ ಪ್ರಶಸ್ತಿ ಪ್ರಧಾನ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಈ ಸಂದರ್ಭದಲ್ಲಿ ನೆಹರು  ಯುವ ಕೇಂದ್ರ ಕೊಪ್ಪಳ, ಯುವ ಕಾರ್ಯ ಹಾಗೂ ಕ್ರೀಡಾ ಸಚಿವಾಲಯ ನೀಡುವ ಜಿಲ್ಲಾ ಮಟ್ಟದ ಅತ್ಯುತ್ತಮ ಸ್ವಚ್ಛ ಭಾರತ ಪ್ರಶಸ್ತಿಯನ್ನು ಕಿನ್ನಾಳ ಶ್ರೀ ಸ್ವಾಮಿ ವಿವೇಕಾನಂದ ಸೇವಾ ಸಂಸ್ಥೆಯು ಜಿಲ್ಲಾ ಮಟ್ಟದಲ್ಲಿ ಸ್ವಚ್ಚ ಭಾರತ ಸಮ್ಮರ್ ಇಂಟನ್ರ್ಸಿಫ್-100 ತಾಸು ಶ್ರಮಧಾನ ಕಾರ್ಯಕ್ರಮಕ್ಕೆ ಪ್ರಥಮ ಸ್ಥಾನ ಪಡೆದಿದ್ದು ಸಂಸ್ಥೆಯ ಅಧ್ಯಕ್ಷ ಮೌನೇಶ ಕಿನ್ನಾಳ ಹಾಗೂ ಪಧಾದಿಕಾರಿಗಳಾದ ಮೈಲಾರಪ್ಪ ಕುಣಿ, ಲಿಂಗರಾಜ ಶಿರಗೇರಿ,ಸಂತೋಷ ಬೀಸನಳ್ಳಿ,  ರಮೇಶ ಅಂಚೆಕಚೇರಿ ಇವರಿಗೆ ನೀಡಿ ಗೌರವಿಸಲಾಯಿತು.

ನಂತರ ಕಾರ್ಯಕ್ರಮವನ್ನು ಉದ್ದೇಶಿಸಿ ಶರಣಪ್ಪ ಸಿಂದೋಗಿ  ಮಾತನಾಡಿ ಪ್ರಸ್ತುತ ಸಮಾಜದಲ್ಲಿ ಯುವಕರ ಪಾತ್ರ ಏನು, ಸಂಘ ಸಂಸ್ಥೆಗಳು ಯಾವ ರೀತಿಯ ಕಾರ್ಯಚಟುವಟಿಕೆಯಲ್ಲಿ ಭಾಗಿಯಾಗಬೇಕು ಹಾಗೂ ಸೇವೆ, ಶಿಕ್ಷಣ, ರಾಷ್ಟ್ರೀಯತೆಯ ಕುರಿತು ಹೇಳಿದರು.

ಈ ಸಂದರ್ಭದಲ್ಲಿ ಜಿಲ್ಲಾ ಸಮನ್ವಯ ಅಧಿಕಾರಿ ಡಿ.ದಯಾನಂದ, ಕಾನೂನು ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಬಸವರಾಜ ಹನಸಿ, ರಾಮರಾವ್ ಬಿರಾದಾರ್, ಸಿದ್ದಲಿಂಗಯ್ಯ,ವೆಂಕಟೇಶ ಬ್ಯಾಡಗಿ, ಬಸಯ್ಯ ಹಿರೇಮಠ, ವಿರುಪಾಕ್ಷಪ್ಪ ಮೊರೇನಾಳ, ಶಂಕರ ಸುರಳ ಸೇರಿದಂತೆ ನೆಹರು ಯುವ ಕೇಂದ್ರದ  ಸಿಬ್ಬಂದಿಗಳು, ವಿವಿಧ ಗ್ರಾಮಗಳ ಸಂಘಗಳ ಪಧಾದಿಕಾರಿಗಳು, ಕಾಲೇಜಿನ ವಿದ್ಯಾರ್ಥಿಗಳು ಉಪಸ್ಥಿತರಿದ್ದರು


Monday, January 21, 2019

ಶ್ರೀ ಶ್ರೀ ಶ್ರೀ ಡಾ.ಶಿವುಕುಮಾರ ಸ್ವಾಮೀಜಿಯವರಿಗೆ ಮೌನ ನಮನಗಳು

ನಡೆದಾಡುವ ದೇವರು ಬಡ ವಿದ್ಯಾರ್ಥಿಗಳ ಪಾಲಿಗೆ ಅಕ್ಷರ ದಾಸೋಹಿ ಹಸಿದವರ ಪಾಲಿಗೆ ಅನ್ನದಾಸೋಹಿಯಾದ ಶ್ರೀ ಶ್ರೀ ಶ್ರೀ ಡಾ.ಶಿವುಕುಮಾರ ಸ್ವಾಮೀಜಿಯವರಿಗೆ ಮೌನ ನಮನಗಳು..



Saturday, January 19, 2019

ಸ್ವಾಮಿ ವಿವೇಕಾನಂದರ 156ನೇ ಜಯಂತೋತ್ಸವದ ಅಂಗವಾಗಿ ಬಹಿರಂಗ ಸಭೆ ಮತ್ತು ಸಮರ್ಥ ಸಾರಥಿಯೊಂದಿಗೆ ತಿರಂಗಾ ಯಾತ್ರೆ

ಕೊಪ್ಪಳ: ತಾಲ್ಲೂಕಿನ ಕಿನ್ನಾಳ ಗ್ರಾಮದಲ್ಲಿ ಶ್ರೀ ಸ್ವಾಮಿ ವಿವೇಕಾನಂದ ಸೇವಾ ಸಂಸ್ಥೆ(ರಿ) ಕಿನ್ನಾಳ ನೇತೃತ್ವದಲ್ಲಿ  ಶ್ರೀ ಸ್ವಾಮಿ ವಿವೇಕಾನಂದರ 156ನೇ ಜಯಂತೋತ್ಸವದ ಅಂಗವಾಗಿ ಬಹಿರಂಗ ಸಭೆ ಮತ್ತು ಸಮರ್ಥ ಸಾರಥಿಯೊಂದಿಗೆ ತಿರಂಗಾ ಯಾತ್ರೆ ಕಾರ್ಯಕ್ರಮವನ್ನು ಶ್ರೀ ಸ್ವಾಮಿ ವಿವೇಕಾನಂದ ವೃತ್ತ (ಕಾಮನಕಟ್ಟೆ)ಯಲ್ಲಿ ಆಯೋಜಿಸಲಾಗಿತ್ತು ಕಾರ್ಯಕ್ರಮದ ಪ್ರಸ್ತಾವಿಕ ನುಡಿಗಳನ್ನು ಸಂಸ್ಥೆಯ ಅಧ್ಯಕ್ಷ ಮೌನೇಶ ಕಿನ್ನಾಳ ಮಾತನಾಡಿ ಶಿಕ್ಷಣ ಸಂಸ್ಕೃತಿ ಸ್ವಾವಲಂಬನೆ ಎನ್ನುವ ದ್ಯೇಯ ವಾಕ್ಯದೊಂದಿಗೆ ಸ್ವಾಮಿ ವಿವೇಕಾನಂದರ ಕನಸಿನನಂತೆ ಸದೃಢ ಭಾರತಕ್ಕಾಗಿ ಸದೃಢ ಯುವಜನತೆ ತಯಾರಿಯೊಂದಿಗೆ ಅನೇಕ ಸಾಮಾಜಿಕ,ಶೈಕ್ಷಣಿಕ, ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಸಂಸ್ಥೆ ಕೆಲಸ ಮಾಡುತ್ತಿದ್ದು ಸಮಾಜ ಕಟ್ಟುವ ಕಾರ್ಯಕ್ಕೆ ಎಲ್ಲರೂ ಕೈ ಜೋಡಿಸಬೇಕು ಎಂದರು. 

ನಂತರ ಮುಖ್ಯಭಾಷಣಕಾರರಾದ  ವಸಂತ ಪೂಜಾರ ಮಾತನಾಡಿ ವಿವೇಕಾನಂದರ ಆದರ್ಶಗಳನ್ನು ಮೈಗೂಡಿಸಿಕೊಂಡ ಪ್ರತಿಯೊಬ್ಬರೂ ಅಸಾಮಾನ್ಯರಾಗಿದ್ದಾರೆ ಶಕ್ತಿಯೇ ಜೀವನ ದುರ್ಬಲತೆಯೇ ಮರಣ ಎನ್ನುವ ಕುರಿತು ಉದಾಹರಣೆಗಳೊಂದಿಗೆ  ವಿಷಯವನ್ನು ತಿಳಿಸಿ ವ್ಯಸನಮುಕ್ತರಾದಗ ಮಾತ್ರ ಯುವಜನತೆ ಸದೃಢರಾಗಲು ಸಾಧ್ಯ, ಜಾತಿ ಜನಾಂಗ ಭಾಷೆ ಎಲ್ಲವನು ದಾಟಿ ಸ್ವಂತಕ್ಕೆ ಸ್ವಲ್ಪ ದೇಶಕ್ಕೆ ಸರ್ವಸ್ವ ಎನ್ನುವ ನಿಟ್ಟಿನಲ್ಲಿ ಜಾಗೃತರಾಗಬೇಕು, ದೇಶಸೇವೆಗೆ ಮುಂದಾಗಬೇಕು ಎಂದರು 
ನಂತರ ಅಧ್ಯಕ್ಷಿಯ ಭಾಷಣವನ್ನು ಕೆ.ವೆಂಕಾರೆಡ್ಡಿ ಪ್ರಾಚಾರ್ಯರು ಸರ್ಕಾರಿ ಪದವಿ ಪೂರ್ವ ಕಾಲೇಜು ಕಿನ್ನಾಳ ಮಾತನಾಡಿದರು, ಮಂಜುನಾಥ ಏಣಿಗಿ ವೇಧಿಕೆಯಲ್ಲಿದ್ದರು ಬಹಿರಂಗ ಸಭೆ ನಂತರ ಗ್ರಾಮದ ಮುಖ್ಯರಸ್ತೆಗಳಲ್ಲಿ ತಿರಂಗಾ ಯಾತ್ರೆಯನ್ನು ಹಮ್ಮಿಕೊಳ್ಳಲಾಯಿತು..
ಈ ಸಂದರ್ಭದಲ್ಲಿ ಗ್ರಾಮದ ಹಿರಿಯರಾದ ನರಸಿಂಹರಾವ್ ಕುಲಕರ್ಣಿ, ಪರಸಪ್ಪ ಗಡಗಿ, ಮಂಜುನಾಥ ಶಿರಗೇರಿ, ಉದಯಕುಮಾರ ಚಿತ್ರಗಾರ,ವಿರುಪಾಕ್ಷಪ್ಪ ಬಾರಕೇರ,ಮಲ್ಲಪ್ಪ ಉದ್ದಾರ, ಸಂತೋಷ ಕಠಾರೆ, ಲಿಂಗರಾಜ್ ಶಿರಗೇರಿ, ಮೈಲಾರಪ್ಪ ಕುಣಿ, ಮಾರ್ಕಂಡೇಶ್ವರ, ಕನಕಪ್ಪ ಉಪ್ಪಾರ, ವಿರೇಶ ವಾಲ್ಮೀಕಿ, ಅಮರೇಶ ಉದ್ದಾರ, ಮಂಜುನಾಥ ಬಡಗಲ್, ಸಂತೋಷ ಬೀಸನಳ್ಳಿ, ರಮೇಶ ಅಂಚೆಕಚೇರಿ,ಸಣ್ಣೆಪ್ಪ ಕರಬ್ಯಾಳಿ,ಸಂತೋಷ್,ರಘುವೀರ ಪತ್ತಾರ,ಬಸವರಾಜ ವಾಲ್ಮೀಕಿ,ಪ್ರಶಾಂತ ಹಿರೇಮಠ,ಸಂಗಮೇಶ ಪಾಗಿ,ರವಿಕಿರಣ ಕೆ,ಶಿವುಕುಮಾರ ಕೆ,ಉಮೇಶ ಬಂಡಿಹಾಳ,ಅಕ್ಷಯಕುಮಾರ್ ಪರಗಿ,ಮಂಜುನಾಥ ಗ್ವಾಡೇಕೇರ,ಹನುಮಂತ ಕುಂಬಾರ,ರಾಘು ಕಮ್ಮಾರ,ಪವನ್,ಅಣ್ಣಯ್ಯ ಜೋಗಿನ್, ಸರಸ್ವತಿ ಗಡಗಿ, ಮಮತಾ ಹಳಪೇಟೆ, ಉಮಾ ಬಡಿಗೇರ್ ಸೇರಿದಂತೆ ಕಿನ್ನಾಳ ಕಾಲೇಜಿನ ಶಿಕ್ಷಕರು, ವಿದ್ಯಾರ್ಥಿಗಳು, ಗ್ರಾಮಸ್ಥರು ಸಂಸ್ಥೆಯ ಸರ್ವ ಸದಸ್ಯರು ಭಾಗಿಯಾದರು. ರಾಘವೇಂದ್ರ ಕಿನ್ನಾಳ ನಿರೂಪಿಸಿದರು, ಪ್ರಶಾಂತ ತಿಮ್ಮಕ್ಕನವರ ವಂದಿಸಿದರು...



Saturday, January 12, 2019

ಸದೃಡ ಭಾರತಕ್ಕಾಗಿ ಸದೃಡ ಯುವಜನತೆ ಕರೆ - ಮೌನೇಶ ಕಿನ್ನಾಳ



ಕೊಪ್ಪಳ : ತಾಲೂಕಿನ ಕಿನ್ನಾಳ ಗ್ರಾಮದ ಶ್ರೀ ಸ್ವಾಮಿ ವಿವೇಕಾನಂದ ಸೇವಾ ಸಂಸ್ಥೆ(ರಿ) ವತಿಯಿಂದ  ಸ್ವಾಮಿ ವಿವೇಕಾನಂದರ ೧೫೬ನೇ ಜಯಂತಿಯ ಅಂಗವಾಗಿ ಗ್ರಾಮದ ವಿವೇಕಾನಂದ ವೃತ್ತ (ಕಾಮನಕಟ್ಟಿ) ಯಲ್ಲಿ ಅವರ ಭಾವಚಿತ್ರಕ್ಕೆ ಪೂಜೆಯನ್ನು ಸಲ್ಲಿಸಿ ಸಿಹಿಯನ್ನು ಹಂಚುವುದರ ಮೂಲಕ ಕಾರ್ಯಕ್ರಮವನ್ನು ಆಚರಿಸಲಾಯಿತು. ಕಾರ್ಯಕ್ರಮದ ಪ್ರಾಸ್ತವಿಕ ನುಡಿಗಳನ್ನು ಸಂಸ್ಥೆಯ ಅಧ್ಯಕ್ಷರಾದ ಮೌನೇಶ ಕಿನ್ನಾಳ ಮಾತನಾಡಿ ಸಂತರ ಸಂತ ಮಹಾತ್ಮರ ಮಹಾತ್ಮ ದೇಶಭಕ್ತ, ವೀರಸನ್ಯಾಸಿ, ಅಮೃತಪುತ್ರ ಸ್ವಾಮಿ ವಿವೇಕಾನಂದರ ಆದರ್ಶಗಳೊಂದಿಗೆ ಶಿಕ್ಷಣ, ಸಂಸ್ಕೃತಿ, ಸ್ವಾವಲಂಬನೆ ಎನ್ನವ ಆಶಯದೊಂದಿಗೆ ಉತ್ತಮವಾದ ಶಿಕ್ಷಣ ಅದರ ಮೂಲಕ ನಮ್ಮ ಸಂಸ್ಕೃತಿ ಏಳ್ಗೆ ನಂತರ ಸ್ವಾವಲಂಬನೆಯ ಬದುಕಿಗಾಗಿ ನಿಟ್ಟಿನಲ್ಲಿ ಸಂಸ್ಥೆಯು ಶೈಕ್ಷಣಿಕವಾಗಿ, ಧಾರ್ಮಿಕವಾಗಿ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ಪ್ರವೃತ್ತವಾಗಿದೆ. ಇದಕ್ಕೆಲ್ಲಾ ಸ್ಪೂರ್ತಿ ಸ್ವಾಮಿ ವಿವೇಕಾನಂದರ ಅವರ ಆದರ್ಶ ಧೇಯ್ಯೊದ್ದೇಶಗಳನ್ನು ನಾವೆಲ್ಲಾ ಹೆಚ್ಚಾಗಿ ತೊಡಗಿಸಿಕೊಂಡು ಉತ್ತಮ ಪ್ರಜೆಗಳಾಗಿರಬೇಕು ಎಂದರು. ಹಾಗೂ ಇದೇ ತಿಂಗಳ ೧೯ ರಂದು ಬ್ರಹತ್ ಶೋಭಯಾತ್ರೆ ಮತ್ತು ಬಹಿರಂಗ ಸಭೆಯನ್ನು ಹಮ್ಮಿಕೊಳ್ಳಲಾಗಿದ್ದು ಎಲ್ಲರೂ ಭಾಗಿಯಾಗಿ ಯಶಸ್ವಿಗೊಳಿಸಬೇಕೆಂದು ಕೋರಿದರು

              ನಂತರ ಗ್ರಾಮದ ಹಿರಿಯರಾದ ಕಾಳಪ್ಪ ಮಾಸ್ತರ ಪತ್ತಾರ ಮಾತನಾಡಿ ಸರ್ವರೊಳಗೂ ಶಕ್ತಿ ಇದೆ. ಅದನ್ನು ನಾವೇ ಹೊರಹಾಕಬೇಕು ಜಗತ್ತೆ ಒಂದು ಗರಡಿಮನೆ ಎಂದ ಸ್ವಾಮಿ ವಿವೇಕಾನಂದರು ಶಕ್ತಿಯೇ ಜೀವನ ದುರ್ಬಲತೆಯೇ ಮರಣ ಎಂದು ಹೇಳುವುದರ ಜೊತೆ ನಿಮ್ಮಂತಹ ಯುವಕರಿಂದ  ಸದೃಢ ಭಾರತದ ನಿರ್ಮಾಣದ ಬುನಾದಿಯಾಗಿದೆ. ಸ್ವಾಮಿ ವಿವೇಕಾನಂದರ ಮಾರ್ಗದರ್ಶನದಲ್ಲಿ ಧೇಯ್ಯೊದ್ದೇಶಗಳನ್ನು ಇಟ್ಟುಕೊಂಡು ಅನೇಕ ಸಾಮಾಜಿಕ ಶೈಕ್ಷಣಿಕ ಕಾರ್ಯದಲ್ಲಿ ತೊಡಗಿರುವ ಸಂಸ್ಥೆ ಇನ್ನು ಎತ್ತರ ಬೆಳೆಯಲಿ ಎಂದರು.

ನಂತರ ಗ್ರಾಮ ಪಂಚಾಯತಿ ಸದಸ್ಯರಾದ ಬಸವರಾಜ ಚಿಲವಾಡ್ಗಿ ಹಾಗೂ ಯುವ ಮುಖಂಡರಾದ ಭಾಷಾ ಹಿರೇಮನಿ, ಅನೀಲ ಬೋರಟ್ಟಿ ಮತ್ತು ಶಿಕ್ಷಕರಾದ ಶಕೀಲ್ ಅಮ್ಮದ್ ಅವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
         ಸಂದರ್ಭದಲ್ಲಿ ಗ್ರಾಮದ ಹಿರಿಯರಾದ ಮಂಜುನಾಥ ಶಿರಗೇರಿ, ಉದಯಕುಮಾರ ಚಿತ್ರಗಾರ, ನಾಗರಾಜ ಬಿದರೂರು, ನರಸಿಂಹರಾವ್ ಕುಲಕರ್ಣಿ, ರಮೇಶ ಘೋರ್ಪಡೆ, ಪ್ರಶಾಂತ ಕುಲಕರ್ಣಿ, ಕೋಟ್ರೇಶ ಗಂಗಾವತಿ, ವಿರೇಶ ಇಟಗಿ, ಹನುಮೇಶ ಬುಡಶೆಟ್ನಾಳ ಶಿಕ್ಷಕರಾದ ಮುತ್ತಣ್ಣ ಕೆ, ಜಯಶ್ರೀ ಅಂಗಡಿ ಮತ್ತು ಶರಣಮ್ಮ ಶಿಕ್ಷಕರು ಹಾಗೂ ಸಂಸ್ಥೆಯ ಸರ್ವಪದಾಧಿಕಾರಿಗಳು ವಿದ್ಯಾರ್ಥಿಗಳು ಗ್ರಾಮದ ಯುವಕರು ಉಪಸ್ಥಿತಿಯಲ್ಲಿದ್ದರು. ಸಂಸ್ಥೆಯ ಜಂಟಿ ಕಾರ್ಯದರ್ಶಿ ರಾಘವೇಂದ್ರ ಕಿನ್ನಾಳ ಮತ್ತು ಸಂತೋಷ ಕಠಾರೆ ನಿರೂಪಿಸಿದರು. ಹಾಗೂ ಕೊನೆಗೆ ಸಂಸ್ಥೆಯ ಕಾರ್ಯದರ್ಶಿ ಮೈಲಾರಪ್ಪ ಕುಣಿ ವಂದಿಸಿದರು.



Tuesday, December 4, 2018

ಸ್ವಾಮಿ ವಿವೇಕಾನಂದರ 125ನೇ ಚಿಕ್ಯಾಗೋ ಭಾಷಣ ವರ್ಷಾಚರಣೆ

ಕೊಪ್ಪಳ ತಾಲೂಕಿನ ಕಿನ್ನಾಳ ಗ್ರಾಮದಲ್ಲಿ ಶ್ರೀ ಸ್ವಾಮಿ ವಿವೇಕಾನಂದ ಸೇವಾ ಸಂಸ್ಥೇ (ರಿ) ಕಿನ್ನಾಳ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಜನಾರೋಗ್ಯ ಕೇಂದ್ರ ಎಪಿಡೀಮಿಯಾಲಜಿ ವಿಭಾಗ ನಿಮ್ಯಾನ್ಸ್ ಬೆಂಗಳೂರು, ಯುವ ಸ್ಪಂದನಾ ಜೀವನ ಕೌಶಲ್ಯ ತರಬೇತಿ ಶಿಬಿರ ಹಾಗೂ ನೆಹರು ಯುವ ಕೆಂದ್ರ ಕೊಪ್ಪಳ ಇವರ ಸಹಯೋಗದಲ್ಲಿ ಶ್ರೀ ಸ್ವಾಮಿ ವಿವೇಕಾನಂದರ 125ನೇ ಚಿಕ್ಯಾಗೋ ಭಾಷಣ ವರ್ಷಾಚರಣೆಯ ಅಂಗವಾಗಿ ಸರಕಾರಿ ಸಂಯುಕ್ತ ಪದವಿ ಪೂರ್ವ ಕಾಲೇಜ್ ಕಿನ್ನಾಳದಲ್ಲಿ ಉಪನ್ಯಾಸ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
 ಈ ಕಾರ್ಯಕ್ರಮದ ಅದ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯರಾದ ಶ್ರೀಮತಿ ಸರೊಜಾ ಅವರು ವಹಿಸಿದ್ದರು ಮುಖ್ಯ ವಕ್ತರರಾದ ಹೊಸಪೇಟೆಯ ಕೇಶವ ಕೆ.ಎಸ್ ಮಾತನಾಡಿ ಸ್ವಾಮಿ ವಿವೇಕಾನಂದರ ಶಕ್ತಿ ಬಹು ಅಗಾಧವಾದದ್ದು. ಜಗತ್ತಿಗೆ ಭಾರತ ಎಂದರೇನು ಭಾರತದ ಶಕ್ತಿ ಏನು ಎಂಬುದನ್ನು ತಮ್ಮ 12 ನಿಮಿಷ ಚಿಕ್ಯಾಗೋ ಬಾಷಣದಲ್ಲಿ ತೆರೆದಿಟ್ಟರು ಅವರ ಬಾಷಣಕ್ಕೆ ಜಗತ್ತಿನ ಎಲ್ಲಾ ಧರ್ಮಗಳು, ದೇಶಗಳು ತಲೆದೂಗಿದವು, ಸರ್ವವೂ ನಿನ್ನಲ್ಲೆ ಅಡಗಿದೆ. ಸದೃಡ ಯುವಕರಿಂದ ಮಾತ್ರ ದೇಶದಲ್ಲಿ ಬದಲಾವಣೆ ಸಾದ್ಯ ಎಂಬುದರ ಕುರಿತು ಸ್ವಾಮಿ ವಿವೇಕಾನಂದರ ವಿಚಾರಗಳನ್ನು ಮತ್ತು ದೇಶ ಮೋದಲು ಎನ್ನುವ ಅವರ ಪರಿಕಲ್ಪನೆಯನ್ನು ಕಾರ್ಯಕ್ರಮದಲ್ಲಿ ವಿಸ್ತುøತವಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಕಾಲೇಜು ಅಭಿವೃದ್ದಿ ಸಮಿತಿಯ ಸದಸ್ಯರಾದ ಮಂಜುನಾಥ ಶಿರಗೇರಿ, ನೆಹರು ಯುವ ಕೆಂದ್ರದ ಲೆಕ್ಕಾದಿಕಾರಿಗಳಾದ ಮಂಜುಳಾ ಮೂಲಿಮನಿ, ಯುವ ಕಾರ್ಯಕರ್ತರಾದ ವಿರೇಶ ಹಾಲಗುಂಡಿ, ಸ್ವಾಮಿ ವಿವೇಕಾನಂದ ಸಂಸ್ಥೆಯ ಸದಸ್ಯರಾದ ರವಿಗೌಡ ವಾಲ್ಮಕಿ, ಪ್ರದಿಪ್ ಶಿರಗೇರಿ, ಖಾಜಾವಲಿ ಬೆಣಕಲ್, ಶಿವಾನಂದ ವಾಲ್ಮಿಕಿ,  ರಾಮು ಕಿನ್ನಾಳ, ಪ್ರಶಾಂತ ಕಿನ್ನಾಳ, ಆಶ್ವತ್ ನಾರಾಯಣ ಸಾಗರ, ನವೀನ ಬಲೂಚಗಿ, ಮೈಲಾರಪ್ಪ ಕುಣಿ, ಬಸವರಾಜ ನಾಯಕ, ಸೇರಿದಂತೆ ಕಾಲೇಜ್ ಉಪನ್ಯಾಸಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
 ಸ್ವಾಮಿ ವಿವೇಕಾನಂದ ಸಂಸ್ಥೆಯ ಅದ್ದಕ್ಷ ಮೌನೇಶ ಕಿನ್ನಾಳ ನಿರೂಪಿಸಿದರು ಸಂತೋಷ ಕಠಾರೆ ವಂದಿಸಿದರು





Tuesday, September 25, 2018

122 ನೇ ಪಂಡಿತ ದೀನ್ ದಯಾಳ ಉಪದ್ಯಾಯ ಜನ್ಮ ದಿನಾಚರಣೆ

ಕೊಪ್ಪಳ : ತಾಲೂಕಿನ ಕಿನ್ನಾಳ ಗ್ರಾಮದಲ್ಲಿ ಶ್ರೀ ಸ್ವಾಮಿ ವಿವೇಕಾನಂದ ಸೇವಾ ಸಂಸ್ಥೆ(ರಿ) ಹಾಗೂ ನೆಹರೂ ಯುವ ಕೇಂದ್ರ ಕೊಪ್ಪಳ, ಯುವ ಕಾರ್ಯ ಹಾಗೂ ಕ್ರೀಡಾ ಸಚಿವಾಲಯ ಇವರುಗಳ ಸಂಯುಕ್ತಾಶ್ರಯದಲ್ಲಿ 122 ನೇ ಪಂಡಿತ ದೀನ್ ದಯಾಳ ಉಪದ್ಯಾಯ ಜನ್ಮ ದಿನಾಚರಣೆ ಆಚರಿಸಲಾಯಿತು.



ಈ ಸಂದರ್ಭದಲ್ಲಿ ಶ್ರೀ ಸ್ವಾಮಿ ವಿವೇಕಾನಂದ ಸೇವಾ ಸಂಸ್ಥೆ ಅಧ್ಯಕ್ಷರಾದ ಮೌನೇಶ ಕಿನ್ನಾಳ ಹಾಗೂ ಯುವ ಯುವಕರು ಯುವ ನಾಯಕರಾಗಿರುವಂತಹ ಹಾಗೂ ಹಿತೈಸಿಗಳು ಹಾಗೂ ಸಮಾಜ ಸೇವಕರಾದಂತಹ ಮಂಜುನಾಥ ಶಿರಿಗೇರಿ ಅದೇ ರೀರಿಯಾಗಿ ವಸತಿ ನಿಲಯದ ಮುಖ್ಯಸ್ಥರಾದ ವಿರೇಶ ಅವರು ವೇದಿಕೆ ಮೇಲೆ ಉಪಸ್ಥಿತರಿದ್ದರು 


ಅದೇ ರೀತಿಯಾಗಿ ಸಂಸ್ಥೆಯ ವಿವೇಕಾನಂದ ಅದರ ಅಧ್ಯಕ್ಷರಾದ ಮೌನೇಶ ಕಿನ್ನಾಳ ಅವರು ಮಾತನಾಡುತ್ತ ಸಂಸ್ಥೆಯ ಕುರಿತು ಪ್ರಾಸ್ತವಿಕ ಮಾತನಾಡಿವರು. 

ಹಾಗೂ ಶ್ರೀ ಸ್ವಾಮಿ ವಿವೇಕಾನಂದÀ ಸಂಸ್ಥೆ ಜಂಟಿ ಕಾರ್ಯದಶಿಗಳಾ ರಾಘವೇಂದ್ರ ಉಪ್ಪಾರ ಕಾರ್ಯಕ್ರಮವನ್ನು ನಿರೂಪಿಸಿದರು ಈ ಸಂದರ್ಭದಲ್ಲಿ ಕಾರ್ಯಕ್ರಮದ ಪದಾಧಿಕಾರಿಗಳ ನವೀನ್ ಬಳೂಟಗಿ, ಮೈಲಾರಪ್ಪ ಕುಣಿ, ಲಿಂಗರಾಜ ಶಿರಿಗೇರಿ ಹಾಗೂ ಎಲ್ಲಾ ವಿದ್ಯಾರ್ಥಿಗಳ ಉಪಸ್ಥಿತಿಯಲ್ಲಿ ಇದ್ದರು.


Monday, July 23, 2018

BHIM APP AWARENESS PROGRAMME


Shree Swami Vivekananda seva samste(R) kinnal conducted an awareness campaign for promoting BHIM App. on 25th March, 2018. The BHIM App is an important step for government initiative of DIGITAL INDIA. An easy-to-use application for cashless transaction, BHIM (Bharat Interface for Money) developed by National Payments Corporation of India (NPCI) has been named after Dr. Bhimrao Ambedkar and is a e-payment platform. The App supports all Indian banks and allows the use to transfer money between the bank accounts of any two parties.
The secretory Mr Mailarappa Kuni approached the small vendors around the features of BHIM App. It was a small step taken by SVSKNL create a NEW INDIA.



Friday, July 20, 2018

ಸ್ವಚ್ಚತೆ ಕುರಿತು ಜಾಗೃತಿ ಜಾಥ


ಕೊಪ್ಪಳ : ತಾಲೂಕಿನ ಕಿನ್ನಾಳ ಗ್ರಾಮದಲ್ಲಿ ಶ್ರೀ ಸ್ವಾಮಿ ವಿವೇಕಾನಂದ ಸೇವಾ ಸಂಸ್ಥೆ(ರಿ) ಹಾಗೂ ನೆಹರೂ ಯುವ ಕೇಂದ್ರ ಕೊಪ್ಪಳ, ಯುವ ಕಾರ್ಯ ಹಾಗೂ ಕ್ರೀಡಾ ಸಚಿವಾಲಯ ಇವರುಗಳ ಸಂಯುಕ್ತಾಶ್ರಯದಲ್ಲಿ ಸ್ವಚ್ಚ ಭಾರತ ಸಮ್ಮರ್ ಇಂಟನ್ರ್ಸಿಫ್-100 ತಾಸು ಶ್ರಮಧಾನ ಕಾರ್ಯಕ್ರಮಕ್ಕೆ ಗ್ರಾಮದ ಸ.ಹಿ.ಪ್ರಾ. ಶಾಲೆ ಕೌಲಪೇಟೆ ಕಿನ್ನಾಳದಲ್ಲಿ ಶ್ರಮಧಾನ ಮಾಡಿ ಚಾಲನೆ ನೀಡುವುದರ ಮೂಲಕ ಗ್ರಾಮದ ಬೀದಿಗಳಲ್ಲಿ ಜಾಗೃತಿ ಜಾಥವನ್ನು ಹಮ್ಮಿಕೊಳ್ಳಲಾಗಿತ್ತು.
ನಂತರ ಸಂಸ್ಥೆಯ ಜಂಟಿ ಕಾರ್ಯದರ್ಶಿ ರಾಘವೇಂದ್ರ ಕಿನ್ನಾಳ ಸ್ವಚ್ಚ ಭಾರತದ ಪ್ರತಿಜ್ಞೆಯನ್ನು ಮಾಡಿಸುವ ಮೂಲಕ ನಾನು ಭಾರತ ಸ್ವಚ್ಚತೆಯನ್ನು ಕಾಪಾಡುವಲ್ಲಿ ನನ್ನ ಸಮಯವನ್ನು ಮೀಸಲಿಟ್ಟು ಸಹಕರಿಸುತ್ತೇನೆ ಹಾಗೂ ಸ್ವಯಂ ಸ್ಪೂರ್ತಿಯಿಂದ ಭಾರತದ ಸ್ಚಚ್ಚತೆಯನ್ನು ಕಾಪಾಡುವಲ್ಲಿ ವಾರದಲ್ಲಿ ಎರಡು ಗಂಟೆಗಳನ್ನು ಮೀಸಲಿಡುತ್ತೇನೆ. ಕಸವನ್ನು ಎಲ್ಲಿ ಅಂದರೆ ಅಲ್ಲಿ ಎಸೆಯುವುದಿಲ್ಲ ಮತ್ತು ಬೇರೆಯವರು ಎಸೆಯಲು ಬೀಡುವುದಿಲ್ಲ.
ಸ್ಚಚ್ಚತೆಗಾಗಿ ನಾನು, ನನ್ನ ಕುಟುಂಬ, ನನ್ನ ಸುತ್ತಮುತ್ತಲಿನ ಜನರನ್ನು ಭಾರತದ ಸ್ಚಚ್ಚತಾ ಅಭಿಯಾನಕ್ಕೆ ಪ್ರೋತ್ಸಾಹಿಸುತ್ತೇನೆ ಎಂದು ಪ್ರಮಾಣ ಮಾಡಿಸಲಾಯಿತು.
ಶಾಲೆಯ ಶಿಕ್ಷಕರಾದ ಶ್ರೀಮತಿ ಗಂಗುಭಾಯಿ ಜೋಷಿ ಮಾತನಾಡಿ ಮನುಷ್ಯ ಹೇಗೆ ತನ್ನ ಹಕ್ಕುಗಳನ್ನು ಚಲಾಯಿಸುತ್ತಾನೋ ಹಾಗೇಯೆ ನಮ್ಮ ಕರ್ತವ್ಯಗಳನ್ನು ಕೂಡಾ ನಿಭಾಯಿಸಬೇಕು ಇದರಲ್ಲಿ ನಮ್ಮ ಮನೆ, ನಮ್ಮ ಶಾಲೆ, ನಮ್ಮ ಊರು, ಜಿಲ್ಲೆ, ರಾಜ್ಯ ಮತ್ತು ದೇಶವನ್ನು ಸ್ಚಚ್ಚವಾಗಿಸುವುದು ನಮ್ಮ ಕತ್ರ್ಯವ್ಯಗಳಲ್ಲಿ ಬಹುಮುಖ್ಯವಾಗಿದೆ ಎಂದರು.
ಸಂಸ್ಥೆಯ ಕಾರ್ಯದರ್ಶಿಯಾದ ಮೈಲಾರಪ್ಪ ಕುಣಿ ಮಾತನಾಡಿ ಪ್ರತಿಯೊಬ್ಬರು ಸ್ವಚ್ಚತೆಗೆ ಆಧ್ಯತೆಯನ್ನು ನೀಡುವ ಮೂಲಕ ಒಂದು ಹೆಜ್ಜೆ ಸ್ಚಚ್ಚತೆಯ ಕಡೆಗೆ ಎನ್ನುವ ಮಾತನ್ನು ಗಮನದಲ್ಲಿ ಇಟ್ಟುಕೊಂಡು ನನ್ನ ಮೊದಲನೆ ಹೆಜ್ಜೆ ಸ್ಚಚ್ಚತೆಯ ಕಡೆಗೆ ಎನ್ನುವುದನ್ನು ಪಾಲಿಸಬೇಕಾಗಿದೆ ಹಾಗೂ ನೀವು ಕಸವನ್ನು ಶೆಖಕರಿಸಿ ಒಣ ಮತ್ಯು ಹಸಿ ತ್ಯಾಜವನ್ನು ಬೇರೆ ಬೇರೆಯಾಗಿಸಿ ಪರಿಸರ ಸಂರಕ್ಷಣೆಯನ್ನು ಮಾಡಬೇಕು ಕಡ್ಡಾಯವಾಗಿ ಪ್ರತಿ ಮನೆಯಲ್ಲೂ ಶೌಚಾಲಯವನ್ನು ಉಪಯೋಗಿಸುವಂತೆ ಮನವೊಲಿಸಬೇಕೆ ಎಂದರು.
ಈ ಸಂದರ್ಭದಲ್ಲಿ ಶಾಲೆಯ ಶಿಕ್ಷಕರಾದ ಗಣೇಶ ಬಣ್ಣದ, ಶೇಖರಪ್ಪ ಮುಧೂಳು, ರೇಣುಕಾ ನಾಗಾವಿ, ಜಲಜಾಕ್ಷಿ ಕೆ. ಚಂದ್ರಕಾಂತ ಕಮ್ಮಾರ, ವಿಜಯಲಕ್ಷ್ಮೀ ಬಿಜ್ಜಳ, ನಾಗಪ್ಪ ಎಳಂಬಿ ಹಾಗೂ ಸಂಸ್ಥೆಯ ಪದಾಧಿಕಾರಿಗಳಾದ ರಂಜಿತ್ ಕಳ್ಳಿಮನಿ, ರಮೇಶ ಪೊಸ್ಟ, ಸಂತೋಷ ಕಠಾರೆ, ಮಂಜುನಾಥ, ಪ್ರವೀಣ ಇಂಡಿ, ಸಂತೋಷ ಬಿಸರಳ್ಳಿ, ಲಿಂಗರಾಜ ಶಿರಗೇರಿ ಸೇರಿದಂತೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.



Saturday, March 10, 2018

ನೀರಿನ ಅರವಟಿಗೆ ಉದ್ಘಾಟನೆ


ಕೊಪ್ಪಳ : ತಾಲೂಕಿನ ಕಿನ್ನಾಳ ಗ್ರಾಮದಲ್ಲಿ ಶ್ರೀ ಸ್ವಾಮಿ ವಿವೇಕಾನಂದ ಸೇವಾ ಸಂಸ್ಥೆ (ರಿ) ವತಿಯಿಂದ ಬಸವೇಶ್ವರ ವೃತ್ತದ ಸ್ವಾಮಿ ವಿವೇಕಾನಂದ ಬಸ್‍ನಿಲ್ದಾಣದಲ್ಲಿ ಸಾರ್ವಜನಿಕ ಹಾಗೂ ಪಕ್ಷಿ ಸಂಕುಲಕ್ಕೆ ಕುಡಿಯುವ ನೀರಿನ ಅರವಟಿಗೆಗಳ ಉದ್ಘಾಟನೆಯನ್ನು ಗ್ರಾ.ಪಂ ಸದಸ್ಯ ವೀರಭದ್ರಪ್ಪ ಗಂಜಿ ಅವರು ನೆರವೇರಿಸಿ ಮಾತನಾಡುತ್ತಾ ಈ ಸಂಸ್ಥೆಯು ವರ್ಷವಿಡಿ ಚಟುವಟಿಕೆಯಲ್ಲಿ ತೊಡಗಿದ್ದು ಅನೇಕ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಳ್ಳುವುದರ ಜೊತೆಗೆ ಪ್ರತಿ ವರ್ಷ ಸಾರ್ವಜನಿಕರಿಗೆ ಕುಡಿಯುವ ನೀರಿನ ಅರವಟಿಕೆಯನ್ನು ಮಾಡುತ್ತಿರುವುದು ಪ್ರಯಾಣಿಕರಿಗೆ, ಪರಸ್ಥಳದವರಿಗೆ, ವಿದ್ಯಾರ್ಥಿಗಳಿಗೆ ತುಂಬಾ ಉಪಯೋಗವಾಗುತ್ತಿದ್ದು ಇನ್ನೂ ಹೆಚ್ಚು-ಹೆಚ್ಚು ಸಾಮಾಜಿಕ, ಧಾರ್ಮಿಕ ಶೈಕ್ಷಣಿಕ ಕಾರ್ಯಗಳು ನಿಮ್ಮಿಂದಾಗಲಿ ಹಾಗೆಯೇ ಜೀವ-ಜಲ, ಶಿಕ್ಷಣ, ಮೂಢ ನಂಭಿಕೆ, ಅನ್ಯಾಯ ಭ್ರಷ್ಟಚಾರಗಳ ಕುರಿತು ಜನರಿಗೆ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಕೈಗೊಳ್ಳುವಂತಾಗಲಿ ಸದಾ ನಾವು ಮತ್ತು ಗ್ರಾಮಸ್ಥರು ಸಹಕಾರ ನೀಡುತ್ತೇವೆ ಎಂದರು.
ಈ ಸಂದರ್ಭದಲ್ಲಿ ಗ್ರಾಮದ ಹಿರಿಯರಾದ ಮಾಹದೇವಯ್ಯ ಹಿರೇಮಠ, ಉದಯಕುಮಾರ ಚಿತ್ರಗಾರ, ಮಂಜುನಾಥ ಸಿರಿಗೇರಿ, ಶಂಕರಸಾ ಕಠಾರೆ, ಪ್ರಶಾಂತ ಕುಲಕರ್ಣಿ, ದಾವಸಾಬ್ ಕನಕಗಿರಿ ಹಾಗೂ ಸಂಸ್ಥೆಯ ಅಧ್ಯಕ್ಷ ಮೌನೇಶ ಕಿನ್ನಾಳ ಪದಾಧಿಕಾರಿಗಳಾದ ಲಿಂಗರಾಜ ಶಿರಿಗೇರಿ, ಮೈಲಾರಪ್ಪ ಕುಣಿ, ರಾವೇಂದ್ರ ಉಪ್ಪಾರ, ನವೀನ ಬಳೂಚಿಗಿ, ಸಂತೋಷ ಬಿಸನಳ್ಳಿ, ಸುರೇಶ ಕಳ್ಳಿಮನಿ, ಪವನ್ ಬಣ್ಣದ, ಉಮೇಶ ಅರಕೇರಿ, ಪ್ರದೀಪ್ ಸಿರಿಗೇರಿ, ನಾಗರಾಜ ಕಲಾಲ್, ಶರಣಪ್ಪ ಲಕ್ಕುಂಡಿ, ಸಂತೋಷ ಕಠಾರೆ, ಕಿರಣ ಸಜ್ಜನ್, ನಾರಾಯಣ ಸಿಂದ್ಲಿ, ಕುಮಾರ ಖಾಕಿ, ಹನುಮೇಶ ಬಿಸನಳ್ಳಿ ಸೇರಿದಂತೆ ಆಟೋ ಚಾಲಕರು, ಹಮಾಲರ ಸಂಘದವರು, ಗ್ರಾ.ಪಂ ಸದಸ್ಯರು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.