Thursday, December 28, 2017
Saturday, September 16, 2017
ಪರಿಸರ ಸ್ನೇಹಿ ಗಣೇಶ ಹಬ್ಬ ಆಚರಣೆ
ಕೊಪ್ಪಳ: ತಾಲೂಕಿನ ಕಿನ್ನಾಳ ಗ್ರಾಮದ ಕೌಲಪೇಟೆ ಓಣಿಯಲ್ಲಿ ಶ್ರೀ ಸ್ವಾಮಿ ವಿವೇಕಾನಂದ ಸೇವಾ ಸಂಸ್ಥೆ ವತಿಯಿಂದ ಗಣೇಶ ಹಬ್ಬವನ್ನು ಪರಿಸರ ಸ್ನೇಹಿಯಾಗಿ ಆಚರಣೆ ಮಾಡುವಂತೆ ಜನಜಾಗೃತಿ ಕಾರ್ಯಕ್ರಮವನ್ನು ಮಾಡಿದ್ದರು.
ಗಣೇಶ ಹಬ್ಬದಲ್ಲಿ ಪಿಓಪಿ ಗಣೇಶ, ವಿಗ್ರಹ, ಮದ್ದು, ಪಟಾಕಿ ಸೇರಿದಂತೆ ಪರಿಸರಕ್ಕೆ ಹಾನಿಯಾಗುವಂತಹ ಯಾವುದೇ ಚಟುವಟಿಕೆ ಮಾಡದಂತೆ ಜನರಿಗೆ ತಿಳಿಹೇಳಿದ್ದರು. ಜೆಡಿ ಮಣ್ಣಿನಿಂದ ಮಾಡಿದ ಗಣಪತಿಯನ್ನು ಮನೆಯಲ್ಲಿ ಇಡುವಂತೆ ಮತ್ತು ಪಟಾಕಿ ಬಿಟ್ಟು ದೀಪ ಹಚ್ಚುವಮತೆ ಜಾಗೃತಿ ಮೂಡಿಸಿದ್ದರು.ಜಾಗೃತಿಯಲ್ಲಿ ಸರ್ವ ಸದಸ್ಯರು ಗ್ರಾಮದ ಮುಖಂಡರು ಹಾಗೂ ಮತ್ತಿತರರು ಉಪಸ್ಥಿತರಿದ್ದರು.
Monday, August 21, 2017
ಪಂಚಾಯತ್ ಅಭಿವ್ರದ್ದಿ ಅಧಿಕಾರಿಗಳಿಗೆ ರಸ್ತೆಗಳ ದುರಸ್ತಿ ಕುರಿತು ಮನವಿ ಸಲ್ಲಿಕೆ
ಕಿನ್ನಾಳ: ( ಜುಲೈ
19 ರಂದು) ಶ್ರೀ ಸ್ವಾಮಿ ವಿವೇಕಾನಂದ ಸೇವಾ ಸಂಸ್ಥೆ ವತಿಯಿಂದ
ಕಿನ್ನಾಳ ಗ್ರಾಮದ ಮೂಲಭೂತ ಸಮಸ್ಯೆಗಳಲ್ಲಿ ಒಂದಾದ ರಸ್ತೆಗಳ ದುರಸ್ತಿ ವಿನಾಯಕ ನಗರ 116 ಮತ್ತು ಸರ್ಕಾರಿ ಆಸ್ಪತ್ರೆ ಹಾಗೂ ಸರ್ಕಾರಿ ಶಾಲಾ ಕಾಲೇಜಿಗೆ ಸಂಪರ್ಕ ಕಲ್ಪಿಸುತ್ತಿರುವ ರಸ್ತೆ ಕುರಿತು ಪಂಚಾಯತ್ ಅಭಿವ್ರದ್ದಿ ಅಧಿಕಾರಿಗಳೊಂದಿಗೆ ಚರ್ಚಿಸಿ, ಶ್ರೀ ಸ್ವಾಮಿ ವಿವೇಕಾನಂದ ಸೇವಾ ಸಂಸ್ಥೆ ಸದಸ್ಯರಿಂದ ಮನವಿ ನೀಡಲಾಯಿತು
Saturday, August 19, 2017
Friday, July 21, 2017
ಸ್ವಯಂಪ್ರೇರಿತ ವನಮಹೋತ್ಸವ
ಕಿನ್ನಾಳ :( ಜುಲೈ 07 ರಂದು) ತಾಲೂಕಿನ ಕಿನ್ನಾಳ ಗ್ರಾಮದಲ್ಲಿ ಶ್ರೀ ಸ್ವಾಮಿ ವಿವೇಕಾನಂದ ಸೇವಾ ಸಂಸ್ಥೆ ವತಿಯಿಂದ 2ನೇ ಹಂತದ ಸಸಿ ನೆಡುವ ಕಾರ್ಯವನ್ನು ಬಸ್ ನಿಲ್ದಾಣದಲ್ಲಿನೆರವೇರಿಸಲಾಯಿತು.ಈ ಕಾರ್ಯಕ್ರಮದಲ್ಲಿ ಸರಕಾರಿ ಪದವಿ ಪೂರ್ವ ಕಾಲೇಜಿನ ಎಲ್ಲಾ ವಿದ್ಯಾರ್ಥಿಗಳು ಸ್ವಯಂಪ್ರೇರಿತರಾಗಿ ಪಾಲ್ಗೊಂಡು ಬಬೊಬ್ಬ ವಿದ್ಯಾರ್ಥಿಗಳು ಒಂದೊಂದು ಸಸಿಗಳನ್ನು ನೆಟ್ಟು ಕಾರ್ಯವನ್ನು ಯಶಸ್ವಿಗೊಳಿಸಿದರು. ಸಂಸ್ಥೆಯ ಜಂಟಿ ಕಾರ್ಯದರ್ಶಿ ರಾಘವೇಂದ್ರ ಉಪ್ಪಾರ ಮಾತನಾಡಿ ಸಸಿ ನೆಡುವ ಕಾರ್ಯಕ್ರಮವು ಕೇವಲ ಕಾರ್ಯಕ್ರಮವಾಗದೇ ಪ್ರತಿಯೊಬ್ಬರು ಇದೇ ಆಸಕ್ತಿಯನ್ನು ಮುಂದುವರಿಸಿಕೊಂಡು ತಾವು ನೆಟ್ಟಿರುವ ಸಸಿಗಳ ಪಾಲನೆ. ಪೋಷಣೆ ಮಾಡಿದಾಗ ಮಾತ್ರ ಈ ಕಾರ್ಯಕ್ರಮಕ್ಕೆ ಅರ್ಥ ಬರುತ್ತದೆ. ಯುವಜನತೆ ಪರಿಸರ ಸಂರಕ್ಷಣೆಗೆ ಮುಂದಾಗಬೇಕು ಎಂದರು. ಸಂಸ್ಥೆ ಅಧ್ಯಕ್ಷರು ಮೌನೇಶ ಕಮ್ಮಾರ ಉಪಾಧ್ಯಕ್ಷ ಲಿಂಗರಾಜ ಶಿರಗೇರಿ. ಕಾರ್ಯದರ್ಶಿ ಮೈಲಾರಪ್ಪ ಕುಣಿ , ಅಶ್ವತ್ ನಾರಾಯಣ ಸಾಗರ, ರವಿಕಿರಣ್ ಶ್ಯಾವಿ,ನಾರಾಯಣ ಕಡ್ಲಿಬಾಳ, ಮಂಜುನಾಥ ಮ್ಯಾಗೇರಿ, ಸರಸ್ವತಿ ಗಡಗಿ,ಮಮತಾ ಹಳಪೇಟೆ , ಉಮಾ ಬಡಗೇರಿ,ಶಿಲ್ಪಾ ಗಡಗಿ, ಸುಮಾ ಹಂಚಿನಾಳ, ಸೇರಿದಂತೆ ಊರಿನ ಗ್ರಾಮಸ್ಥರು ಹಾಗೂ ಸಂಸ್ಥೆಯ ಎಲ್ಲಾ ಸದಸ್ಯರು ಉಪಸ್ಥಿತಿಯಲ್ಲಿ ಇದ್ದರು.
Thursday, July 6, 2017
ನಮ್ಮ ಸಂಸ್ಥೆಯ ಮೊದಲ ಹೆಜ್ಜೆ ಸಾರ್ಥಕತೆಯ ಸೇವೆಯಲ್ಲಿ
ಶ್ರೀ ಸ್ವಾಮಿ ವಿವೇಕಾನಂದ ಸೇವಾ ಸಂಸ್ಥೆಯಿಂದ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುಸ್ತಕ, ಬಟ್ಟೆ, ಶಿಕ್ಷಣ ಶುಲ್ಕ ಮತ್ತಿತರ ವೆಚ್ಚಗಳನ್ನು ಸಂಸ್ಥೆಯಿಂದ ವಿತರಿಸಲಾಯಿತು. ಈ ಸಂದರ್ಭದಲ್ಲಿ ಪಾಲಕರೊಂದಿಗೆ ಮಾತನಾಡಿದ ಸಂಸ್ಥೆಯ ಉಪಾಧ್ಯಕ್ಷ ಲಿಂಗರಾಜ ಶಿರಿಗೇರಿ ಶಿಕ್ಷಣವೇಬುಂದು ಕೇವಲ ಉಳ್ಳವರ ಸ್ವತ್ತಾಗಬಾರದು ಪ್ರತಿಯೊಂದು ಮನೆಗಳಲ್ಲಿ ಮಕ್ಕಳು ಜ್ನಾನವನ್ನು ಪಡೆಯುವಂತಾಗಬೇಕು ಅಂದಾಗ ಮಾತ್ರ ಸ್ವಾಮೀಜಿಯವರ ಸದ್ರಡ ಭಾರತದ ಕನಸು ನನಸಾಗುತ್ತದೆ ಎಂದರು ನಂತರ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸೇವೆಗಳನ್ನು ಸಮಾಜಕ್ಕೆ ನಮ್ಮ ಸಂಸ್ಥೆಯಿಂದ ನೀಡಲಾಗುವುದು ಎಂದು ಸಂಸ್ಥೆಯವರು ತಿಳಿಸಿದರು
Tuesday, June 20, 2017
ಶ್ರೀ ಸ್ವಾಮಿ ವಿವೇಕಾನಂದ ಸೇವಾ ಸಂಸ್ಥೆಯವರು ಇಂದು ಬಿಡುಗಡೆ ಮಾಡಿದ ನೂತನ ಆ್ಯಪ್ - SVSKNL
ಕಿನ್ನಾಳ: ಶ್ರೀ ಸ್ವಾಮಿ ವಿವೇಕಾನಂದ ಸೇವಾ ಸಂಸ್ಥೆಯವರು ಇಂದು ಬಿಡುಗಡೆ ಮಾಡಿದ ನೂತನ ಆ್ಯಪ್ - SVSKNL ಸದ್ಯ ಅಂಡ್ರಾಯ್ಡ್‌ನಲ್ಲಿ ಮಾತ್ರ ಈ ಆ್ಯಪ್ ಲಭ್ಯವಿದೆ. ಈ ಆ್ಯಪ್ ಮೂಲಕ ಸಂಸ್ಥೆಯ ಬಗ್ಗೆ ಮತ್ತು ಅನೇಕ ಕಾರ್ಯಗಳನ್ನು ಹಾಗೂ ಸದಸ್ಯತ್ವಕ್ಕೆ ಆನ್ ಲೈನ್ ಮೂಲಕ ನೋಂದಣಿ ಅಭಿಯಾನ ಸದೃಡ ಭಾರತಕ್ಕಾಗಿ ಸದೃಡ ಯುವ ಜನತೆಯ ನಿರ್ಮಾಣಕ್ಕಾಗಿ ಶ್ರೀ ಸ್ವಾಮಿ ವಿವೇಕಾನಂದ ಸೇವಾ ಸಂಸ್ಥೆ ಕಿನ್ನಾಳ ಸದಸ್ಯತ್ವವನ್ನು ಆರಂಭಿಸಲಾಯಿತು. ನೂರಾರು ಯುವಕರು ಸದಸ್ಯತ್ವವನ್ನು ಈ ಆ್ಯಪ್ ಮೂಲಕ ಪಡೆಯಬಹುದಾಗಿದೆ
Subscribe to:
Posts (Atom)

















