Thursday, December 28, 2017

ಡಾ|| ಬಾಬಾ ಸಾಹೇಬ್ ಅಂಬೇಡ್ಕರ್ ಅವರ ೬೧ನೇ ಪರಿನಿರ್ವಾಣ ದಿನ ಆಚರಣೆ

ಕಿನ್ನಾಳ : ಶ್ರೀ ಸ್ವಾಮಿ ವಿವೇಕಾನಂದ ಸೇವಾ ಸಂಸ್ಥೆ ವತಿಯಿಂದ ಕಿನ್ನಾಳ ಗ್ರಾಮದಲ್ಲಿ ಡಾ|| ಬಾಬಾ ಸಾಹೇಬ್ ಅಂಬೇಡ್ಕರ್ ಅವರ ೬೧ನೇ ಮಹಾಪರಿ ಪರಿನಿರ್ವಾಣ ದಿನ  ಕಾರ್ಯಕ್ರಮವನ್ನು  ಆಯೋಜಿಸಲಾಗಿತ್ತು

Saturday, September 16, 2017

ಹಲಗೇರಿ ಗ್ರಾಮದಲ್ಲಿ ಹೆಚ್ಚುತ್ತಿರುವ ಸೊಳ್ಳೆಗಳ ಉತ್ಪತ್ತಿಯನ್ನು ತಡೆಯುವಂತೆ ಔಷಧಿಗಳ ಸಿಂಪಡಿಸಲು ಮನವಿ ಸಲ್ಲಿಸಲಾಯಿತು

ಶ್ರೀ ಸ್ವಾಮಿ ವಿವೇಕಾನಂದ ಸೇವಾ ಸಂಸ್ಥೆ  ನೂತನ ಶಾಖೆ   ಹಲಗೇರಿ ವತಿಯಿಂದ ಗ್ರಾಮದಲ್ಲಿ ಹೆಚ್ಚುತ್ತಿರುವ ಸೊಳ್ಳೆಗಳ ಉತ್ಪತ್ತಿಯನ್ನು ತಡೆಯುವಂತೆ ಔಷಧಿಗಳ ಸಿಂಪಡಿಸಲು ಪಂಚಾಯತಿ ಅಧಿಕಾರಿಗಳಿಗೆ ಸಂಸ್ಥೆಯ ಸರ್ವ ಸದಸ್ಯರಿಂದ  ಮನವಿ ಸಲ್ಲಿಸಲಾಯಿತು               

ಪರಿಸರ ಸ್ನೇಹಿ ಗಣೇಶ ಹಬ್ಬ ಆಚರಣೆ

ಕೊಪ್ಪಳ: ತಾಲೂಕಿನ ಕಿನ್ನಾಳ ಗ್ರಾಮದ ಕೌಲಪೇಟೆ ಓಣಿಯಲ್ಲಿ ಶ್ರೀ ಸ್ವಾಮಿ ವಿವೇಕಾನಂದ ಸೇವಾ ಸಂಸ್ಥೆ ವತಿಯಿಂದ  ಗಣೇಶ ಹಬ್ಬವನ್ನು ಪರಿಸರ ಸ್ನೇಹಿಯಾಗಿ ಆಚರಣೆ ಮಾಡುವಂತೆ ಜನಜಾಗೃತಿ ಕಾರ್ಯಕ್ರಮವನ್ನು ಮಾಡಿದ್ದರು.
ಗಣೇಶ ಹಬ್ಬದಲ್ಲಿ ಪಿಓಪಿ ಗಣೇಶ, ವಿಗ್ರಹ, ಮದ್ದು, ಪಟಾಕಿ ಸೇರಿದಂತೆ ಪರಿಸರಕ್ಕೆ ಹಾನಿಯಾಗುವಂತಹ ಯಾವುದೇ ಚಟುವಟಿಕೆ ಮಾಡದಂತೆ ಜನರಿಗೆ ತಿಳಿಹೇಳಿದ್ದರು. ಜೆಡಿ ಮಣ್ಣಿನಿಂದ ಮಾಡಿದ ಗಣಪತಿಯನ್ನು ಮನೆಯಲ್ಲಿ ಇಡುವಂತೆ ಮತ್ತು ಪಟಾಕಿ ಬಿಟ್ಟು ದೀಪ ಹಚ್ಚುವಮತೆ ಜಾಗೃತಿ ಮೂಡಿಸಿದ್ದರು.ಜಾಗೃತಿಯಲ್ಲಿ ಸರ್ವ ಸದಸ್ಯರು ಗ್ರಾಮದ ಮುಖಂಡರು ಹಾಗೂ ಮತ್ತಿತರರು ಉಪಸ್ಥಿತರಿದ್ದರು.




Monday, August 21, 2017

ಪಂಚಾಯತ್ ಅಭಿವ್ರದ್ದಿ ಅಧಿಕಾರಿಗಳಿಗೆ ರಸ್ತೆಗಳ ದುರಸ್ತಿ ಕುರಿತು ಮನವಿ ಸಲ್ಲಿಕೆ

ಕಿನ್ನಾಳ: ( ಜುಲೈ 19 ರಂದು) ಶ್ರೀ ಸ್ವಾಮಿ ವಿವೇಕಾನಂದ ಸೇವಾ ಸಂಸ್ಥೆ ವತಿಯಿಂದ ಕಿನ್ನಾಳ ಗ್ರಾಮದ ಮೂಲಭೂತ ಸಮಸ್ಯೆಗಳಲ್ಲಿ ಒಂದಾದ ರಸ್ತೆಗಳ ದುರಸ್ತಿ  ವಿನಾಯಕ ನಗರ 116 ಮತ್ತು ಸರ್ಕಾರಿ ಆಸ್ಪತ್ರೆ ಹಾಗೂ ಸರ್ಕಾರಿ ಶಾಲಾ ಕಾಲೇಜಿಗೆ ಸಂಪರ್ಕ ಕಲ್ಪಿಸುತ್ತಿರುವ ರಸ್ತೆ  ಕುರಿತು ಪಂಚಾಯತ್ ಅಭಿವ್ರದ್ದಿ ಅಧಿಕಾರಿಗಳೊಂದಿಗೆ ಚರ್ಚಿಸಿ, ಶ್ರೀ ಸ್ವಾಮಿ ವಿವೇಕಾನಂದ ಸೇವಾ ಸಂಸ್ಥೆ ಸದಸ್ಯರಿಂದ  ಮನವಿ ನೀಡಲಾಯಿತು


Saturday, August 19, 2017

ಸ್ವಾಸ್ಥ್ಯ ಹಾಗೂ ಸದ್ರಡ ಸಮಾಜಕ್ಕಾಗಿ ಗೋಡೆ ಬರಹ

ಕಿನ್ನಾಳ:(ಜುಲೈ 28 ರಂದು) ಶ್ರೀ ಸ್ವಾಮಿ ವಿವೇಕಾನಂದ ಸೇವಾ ಸಂಸ್ಥೆ ಕಿನ್ನಾಳ ವತಿಯಿಂದ ಸ್ವಾಸ್ಥ್ಯ ಹಾಗೂ ಸದ್ರಡ ಸಮಾಜಕ್ಕಾಗಿ ಗೋಡೆ ಬರಹಗಳನ್ನು  ಕಿನ್ನಾಳ ಗ್ರಾಮದ ಬಸವೇಶ್ವರ ವೃತ್ತ ಬಳಿ ಮತ್ತು  ಮಾರುತೇಶ್ವರ ಗುಡಿ ಆವರಣದಲ್ಲಿ ಬರೆಸಲಾಯಿತು

           




Friday, July 21, 2017

ಸ್ವಯಂಪ್ರೇರಿತ ವನಮಹೋತ್ಸವ

ಕಿನ್ನಾಳ :( ಜುಲೈ 07 ರಂದು) ತಾಲೂಕಿನ ಕಿನ್ನಾಳ ಗ್ರಾಮದಲ್ಲಿ ಶ್ರೀ ಸ್ವಾಮಿ ವಿವೇಕಾನಂದ ಸೇವಾ ಸಂಸ್ಥೆ ವತಿಯಿಂದ 2ನೇ ಹಂತದ ಸಸಿ ನೆಡುವ ಕಾರ್ಯವನ್ನು ಬಸ್ ನಿಲ್ದಾಣದಲ್ಲಿನೆರವೇರಿಸಲಾಯಿತು.ಈ ಕಾರ್ಯಕ್ರಮದಲ್ಲಿ ಸರಕಾರಿ ಪದವಿ ಪೂರ್ವ ಕಾಲೇಜಿನ ಎಲ್ಲಾ ವಿದ್ಯಾರ್ಥಿಗಳು ಸ್ವಯಂಪ್ರೇರಿತರಾಗಿ ಪಾಲ್ಗೊಂಡು ಬಬೊಬ್ಬ ವಿದ್ಯಾರ್ಥಿಗಳು ಒಂದೊಂದು ಸಸಿಗಳನ್ನು ನೆಟ್ಟು ಕಾರ್ಯವನ್ನು ಯಶಸ್ವಿಗೊಳಿಸಿದರು.                                                                                                 ಸಂಸ್ಥೆಯ ಜಂಟಿ ಕಾರ್ಯದರ್ಶಿ ರಾಘವೇಂದ್ರ ಉಪ್ಪಾರ ಮಾತನಾಡಿ ಸಸಿ ನೆಡುವ ಕಾರ್ಯಕ್ರಮವು ಕೇವಲ ಕಾರ್ಯಕ್ರಮವಾಗದೇ ಪ್ರತಿಯೊಬ್ಬರು ಇದೇ ಆಸಕ್ತಿಯನ್ನು ಮುಂದುವರಿಸಿಕೊಂಡು ತಾವು ನೆಟ್ಟಿರುವ ಸಸಿಗಳ ಪಾಲನೆ. ಪೋಷಣೆ ಮಾಡಿದಾಗ ಮಾತ್ರ ಈ ಕಾರ್ಯಕ್ರಮಕ್ಕೆ ಅರ್ಥ ಬರುತ್ತದೆ. ಯುವಜನತೆ ಪರಿಸರ ಸಂರಕ್ಷಣೆಗೆ ಮುಂದಾಗಬೇಕು ಎಂದರು. ಸಂಸ್ಥೆ ಅಧ್ಯಕ್ಷರು ಮೌನೇಶ ಕಮ್ಮಾರ ಉಪಾಧ್ಯಕ್ಷ ಲಿಂಗರಾಜ ಶಿರಗೇರಿ. ಕಾರ್ಯದರ್ಶಿ ಮೈಲಾರಪ್ಪ ಕುಣಿ , ಅಶ್ವತ್ ನಾರಾಯಣ ಸಾಗರ, ರವಿಕಿರಣ್ ಶ್ಯಾವಿ,ನಾರಾಯಣ ಕಡ್ಲಿಬಾಳ, ಮಂಜುನಾಥ ಮ್ಯಾಗೇರಿ, ಸರಸ್ವತಿ ಗಡಗಿ,ಮಮತಾ ಹಳಪೇಟೆ , ಉಮಾ ಬಡಗೇರಿ,ಶಿಲ್ಪಾ ಗಡಗಿ, ಸುಮಾ ಹಂಚಿನಾಳ, ಸೇರಿದಂತೆ ಊರಿನ ಗ್ರಾಮಸ್ಥರು ಹಾಗೂ ಸಂಸ್ಥೆಯ ಎಲ್ಲಾ ಸದಸ್ಯರು ಉಪಸ್ಥಿತಿಯಲ್ಲಿ ಇದ್ದರು.

ಆತ್ಮ ಸಂರಕ್ಷಣಾ ಕಲೆ ಹಾಗೂ ಯೋಗ ತರಬೇತಿ ಶಿಬಿರಕ್ಕೆ ಚಾಲನೆ

ಕೊಪ್ಪಳ ಜಲೈ ೧೩: ಶ್ರೀ ಸ್ವಾಮಿ ವಿವೇಕಾನಂದ ಸೇವಾ ಸಂಸ್ಥೆ ಕಿನ್ನಾಳ ವತಿಯಿಂದ ಆತ್ಮ ಸಂರಕ್ಷಣಾ ಕಲೆ ಹಾಗೂ ಯೋಗ ತರಬೇತಿ ಶಿಬಿರಕ್ಕೆ ಚಾಲನೆ ನೀಡಲಾಯಿತು ಇದರ ಸದುಪಯೋಗವನ್ನು ಎಲ್ಲರೂ ಪಡೆದುಕೊಳ್ಳಬೇಕಾಗಿ ವಿನಂತಿ. ನಮ್ಮ ಸಂಕಲ್ಪ ಸದೃಡ ಭಾರತಕ್ಕಾಗಿ ಸದೃಡ ಯುವಜನತೆ ನಿರ್ಮಾಣ ಮಾಡುವುದು



Thursday, July 6, 2017

ಶ್ರೀ ಸ್ವಾಮಿ ವಿವೇಕಾನಂದರ‌ 115 ನೇ ಸ್ಮೃತಿ ದಿನವನ್ನು ಆಚರಿಸಲಾಯಿತು

ದಿ.04.07.2017 ಶ್ರೀ ಸ್ವಾಮಿ ವಿವೇಕಾನಂದ ಸೇವಾ ಸಂಸ್ಥೆ ಕಿನ್ನಾಳ ವತಿಯಿಂದ ಭಾರತದ ಅತ್ಯಂತ ಪ್ರಸಿದ್ಧ ಮತ್ತು ಪ್ರಭಾವಶಾಲಿ ತತ್ತ್ವಜ್ಞಾನಿಗಳಲ್ಲಿ ಒಬ್ಬರಾದ ಶ್ರೀ ಸ್ವಾಮಿ ವಿವೇಕಾನಂದರ‌ 115 ನೇ ಸ್ಮೃತಿ ದಿನವನ್ನು ಕಿನ್ನಾಳದ ಶ್ರೀ ಸ್ವಾಮಿ ವಿವೇಕಾನಂದ ವೃತ್ತದಲ್ಲಿ ಆಚರಿಸಲಾಯಿತು..

ನಮ್ಮ ಸಂಸ್ಥೆಯ ಮೊದಲ ಹೆಜ್ಜೆ ಸಾರ್ಥಕತೆಯ ಸೇವೆಯಲ್ಲಿ

ಶ್ರೀ ಸ್ವಾಮಿ ವಿವೇಕಾನಂದ ಸೇವಾ ಸಂಸ್ಥೆಯಿಂದ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುಸ್ತಕ, ಬಟ್ಟೆ, ಶಿಕ್ಷಣ ಶುಲ್ಕ ಮತ್ತಿತರ ವೆಚ್ಚಗಳನ್ನು ಸಂಸ್ಥೆಯಿಂದ ವಿತರಿಸಲಾಯಿತು. ಈ ಸಂದರ್ಭದಲ್ಲಿ ಪಾಲಕರೊಂದಿಗೆ ಮಾತನಾಡಿದ ಸಂಸ್ಥೆಯ ಉಪಾಧ್ಯಕ್ಷ ಲಿಂಗರಾಜ ಶಿರಿಗೇರಿ ಶಿಕ್ಷಣವೇಬುಂದು ಕೇವಲ ಉಳ್ಳವರ ಸ್ವತ್ತಾಗಬಾರದು ಪ್ರತಿಯೊಂದು ಮನೆಗಳಲ್ಲಿ ಮಕ್ಕಳು ಜ್ನಾನವನ್ನು ಪಡೆಯುವಂತಾಗಬೇಕು ಅಂದಾಗ ಮಾತ್ರ ಸ್ವಾಮೀಜಿಯವರ ಸದ್ರಡ ಭಾರತದ ಕನಸು ನನಸಾಗುತ್ತದೆ ಎಂದರು ನಂತರ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸೇವೆಗಳನ್ನು ಸಮಾಜಕ್ಕೆ ನಮ್ಮ ಸಂಸ್ಥೆಯಿಂದ ನೀಡಲಾಗುವುದು ಎಂದು ಸಂಸ್ಥೆಯವರು ತಿಳಿಸಿದರು

Tuesday, June 20, 2017

ಶ್ರೀ ಸ್ವಾಮಿ ವಿವೇಕಾನಂದ ಸೇವಾ ಸಂಸ್ಥೆಯವರು ಇಂದು ಬಿಡುಗಡೆ ಮಾಡಿದ ನೂತನ ಆ್ಯಪ್ - SVSKNL

ಕಿನ್ನಾಳ: ಶ್ರೀ ಸ್ವಾಮಿ ವಿವೇಕಾನಂದ ಸೇವಾ ಸಂಸ್ಥೆಯವರು ಇಂದು ಬಿಡುಗಡೆ ಮಾಡಿದ ನೂತನ ಆ್ಯಪ್ - SVSKNL  ಸದ್ಯ ಅಂಡ್ರಾಯ್ಡ್‌ನಲ್ಲಿ ಮಾತ್ರ ಈ ಆ್ಯಪ್ ಲಭ್ಯವಿದೆ. ಈ ಆ್ಯಪ್ ಮೂಲಕ ಸಂಸ್ಥೆಯ ಬಗ್ಗೆ ಮತ್ತು ಅನೇಕ ಕಾರ್ಯಗಳನ್ನು ಹಾಗೂ  ಸದಸ್ಯತ್ವಕ್ಕೆ ಆನ್ ಲೈನ್ ಮೂಲಕ ನೋಂದಣಿ ಅಭಿಯಾನ ಸದೃಡ ಭಾರತಕ್ಕಾಗಿ ಸದೃಡ ಯುವ ಜನತೆಯ ನಿರ್ಮಾಣಕ್ಕಾಗಿ  ಶ್ರೀ ಸ್ವಾಮಿ ವಿವೇಕಾನಂದ ಸೇವಾ ಸಂಸ್ಥೆ ಕಿನ್ನಾಳ ಸದಸ್ಯತ್ವವನ್ನು ಆರಂಭಿಸಲಾಯಿತು. ನೂರಾರು ಯುವಕರು ಸದಸ್ಯತ್ವವನ್ನು  ಈ ಆ್ಯಪ್ ಮೂಲಕ ಪಡೆಯಬಹುದಾಗಿದೆ                                                     

Monday, June 5, 2017

ಕಿನ್ನಾಳ ಗ್ರಾಮದಲ್ಲಿ ವಿಶ್ವ ಪರಿಸರ ದಿನಾಚರಣೆ

ಕಿನ್ನಾಳ ಜೂನ್ ೦೩ : ವಿಶ್ವ ಪರಿಸರ ದಿನ ಆಚರಣೆ ಹಿನ್ನೆಲೆಯಲ್ಲಿ ಶ್ರೀ ಸ್ವಾಮಿ ವಿವೇಕಾನಂದ ಸೇವಾ ಸಂಸ್ಥೆ ವತಿಯಿಂದ ಗ್ರಾಮದ ವಿಜಯನಗರ ಕಾಲೋನಿ ಮಾರುತೇಶ್ವರ ದೇವಸ್ಥಾನದ ಆವರಣದಲ್ಲಿ ಮೊದಲನೇ ಹಂತದ ಸಸಿ ನೆಡುವ  ಕಾರ್ಯಕ್ರಮವನ್ನು ನೆರವೇರಿಸಲಾಯಿತು

Sunday, May 28, 2017

ಗೋ ಹತ್ಯೆ ನಿಷೇಧ: ಕಿನ್ನಾಳ ದಲ್ಲಿ ಸಂಭ್ರಮ

ಕಿನ್ನಾಳ: ದೇಶಾದ್ಯಂತ ಗೋ ಹತ್ಯೆ ನಿಷೇಧ ಮಾಡಿರುವ ಕೇಂದ್ರ ಸರ್ಕಾರದ ಕ್ರಮವನ್ನು ಸ್ವಾಗತಿಸಿ ಶ್ರೀ ಸ್ವಾಮಿ ವಿವೇಕಾನಂದ ಸೇವಾ ಸಂಸ್ಥೆ  ಸಂಭ್ರಮಾಚರಣೆ ನಡೆಸಿದರು,ಗ್ರಾಮದ ಬಸವೇಶ್ವರ ವೃತ್ತದಲ್ಲಿ ಶ್ರೀ ಸ್ವಾಮಿ ವಿವೇಕಾನಂದ ಸೇವಾ ಸಂಸ್ಥೆ ಸೇರಿದಂತೆ ವಿವಿಧ ಹಿಂದೂಪರ ಸಂಘಟನೆಗಳು ಗೋಹತ್ಯೆ ನಿಷೇಧ ಮಾಡಿರುವುದಕ್ಕೆ ವಿನೂತನವಾಗಿ ಸಂಭ್ರಮಾಚರಣೆ ನಡೆಸಿದವು. ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು. ‌‌‌‌‌     ‌         
‌ಈ ಸಂದರ್ಭದಲ್ಲಿ ಊರಿನ ಹಿರಿಯರು ಉದಯ ಚಿತ್ರಗಾರ ಮೌನೇಶ ಹಳ್ಳಿಕೇರಿ,ವಿರೇಶ ಕನಗೇರಿ,ಆದಿತ್ಯ ಕುದುರಿಮೊತಿ,ಮಾರ್ಕಂಡೆಪ್ಪ , ಹನುವೇಶ,ಸಂತೋಷ ಮಾಲ್ವಿ, ಪ್ರವೀಣ್ ಇಂಡಿ , ಸಂತೋಷ ಶಿರಿಗೇರಿ,ವೆಂಕಟೇಶ ವಾಲ್ವಿ ,ಮಂಜುನಾಥ ಭಾಂಗಡಿ,ನಾಗರಾಜ ಚಿತ್ರಗಾರ, ಮೈಲಾರಪ್ಪ ಕುಣಿ, ಮೌನೇಶ ಕಮ್ಮಾರ ಹಾಗೂ ಶ್ರೀ ಸ್ವಾಮಿ ವಿವೇಕಾನಂದ ಸೇವಾ ಸಂಸ್ಥೆಯ ಎಲ್ಲಾ  ಪದಾಧಿಕಾರಿಗಳು ಹಾಗೂ ಎಲ್ಲಾ ಭಾಂದವರು ಭಾಗವಹಿಸಿದ್ದರು

Friday, March 31, 2017

ಕಿನ್ನಾಳ ದಲ್ಲಿ ಯುಗಾದಿ ಹಬ್ಬವನ್ನು ಆಚರಿಸಲಾಗಿತು

ಶ್ರೀ ಸ್ವಾಮಿ ವಿವೇಕಾನಂದ ಸೇವಾ ಸಂಸ್ಥೆ ವತಿಯಿಂದ ಕಿನ್ನಾಳ ಗ್ರಾಮದ ಶ್ರೀ ಕರಿಯಮ್ಮ ದೇವಿ ಜಾತ್ರೆ ಮಹೋತ್ಸವ ಅಂಗವಾಗಿ ದೇವಸ್ಥಾನದಲ್ಲಿ ಸಕಲ ಸದ್ಭಕ್ತರಿಗೆ ಬೇವುಬೆಲ್ಲ ಹಂಚುವ ಕಾರ್ಯಕ್ರಮ ಹಾಗೂ ಕುಡಿಯುವ ನೀರಿನ ವ್ಯವಸ್ಥೆಯ ಕಾರ್ಯಕ್ರಮವನ್ನು ನೆರವೇರಿಸಲಾಯಿತು, ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಸರ್ವ ಸದಸ್ಯರು ಪಾಲ್ಗೊಂಡಿದ್ದರು

Saturday, March 25, 2017

ಕಿನ್ನಾಳದಲ್ಲಿ ಬಲಿದಾನ ದಿವಸ್ ದೇಶ ಪ್ರೇಮಿಗಳಿಗೆ ನುಡಿನಮನ

ಕೊಪ್ಪಳ : ತಾಲೂಕಿನ ಕಿನ್ನಾಳ ಗ್ರಾಮದಲ್ಲಿ ಸ್ವಾಮಿ ವಿವೇಕಾನಂದ ಸೇವಾ ಸಂಸ್ಥೆ ಕಿನ್ನಾಳ ವತಿಯಿಂದ ಮಾರ್ಚ 23 ರಂದು ಗ್ರಾಮದ ಕನಕದಾಸ ವೃತ್ತದಲ್ಲಿ ಬಲಿದಾನ ದಿವಸ ಕಾರ್ಯಕ್ರಮವನ್ನು ಭಗತ್ ಸಿಂಗ್ ಹಮಾಲರ ಸಂಘದ ಕಾರ್ಮಿಕರಿಗೆ ಸನ್ಮಾನ ಮಾಡುವುದರ ಮೂಲಕ ದೇಶ ಪ್ರೇಮಿಗಳಾದ ರಾಜ್‍ಗುರು ಸುಖದೇವ ಭಗತ್ ಸಿಂಗ್ ಅವರಿಗೆ ಗೌರವ ನಮನಗಳನ್ನು ಸಲ್ಲಿಸಲಾಯಿತು.
ಸಂಸ್ಥೆಯ ಪದಾಧಿಕಾರಿ ಮೈಲಾರಪ್ಪ ಕುಣಿ ಮಾತನಾಡಿ ಭಗತ್‍ಸಿಂಗ್, ರಾಜ್‍ಗುರ್, ಸುಖದೇವ ಅವರ ಬಲಿಧಾನ ದಿನವಾದ ಇಂದು ನಾವೆಲ್ಲರೂ ದೇಶಕ್ಕಾಗಿ ನಮ್ಮನ್ನು ನಾವು ತೊಡಗಿಸಿಕೊಳ್ಳತ್ತೇವೆಂದು ಶಪಥ ಮಾಡಬೇಕಾಗಿದೆ. ಸ್ವಾತಂತ್ರ್ಯ ಎನ್ನುವುದು ನಮಗೆ ಪುಕ್ಕಟೆಯಾಗಿ ಸಿಕ್ಕಿದ್ದಲ್ಲ ಸುಮಾರು ಆರೂವರೆ ಲಕ್ಷ ಬಲಿಧಾನಿಗಳ ತ್ಯಾಗದ ಫವಾಗಿದೆ. ಆದರೆ ಇವತ್ತಿನ ದಿನ ನಮಗೆ ಕ್ರೀಕೆಟರ್ ಮಹೇಂದ್ರ ಸಿಂಗ್ ಗೊತ್ತು ಆದರೆ ಭಗತ್ ಸಿಂಗ್ ಗೊತ್ತಿಲ್ಲಾ, ಕಪಿಲ್‍ದೇವ ಗೊತ್ತು ಸುಖದೇವ ಗೊತ್ತಿಲ್ಲಾ, ಅಪ್ಜಲ್‍ಗುರು ಗೊತ್ತು ರಾಜ್‍ಗುರು ಗೊತ್ತಿಲ್ಲಾ ಹೀಗೆಯೇ ಮುಂದೊರೆದರೆ ಮತ್ತೆ ನಾವುಗಳು ಇನ್ಯಾರದ್ದೊ ಕಪಿಮುಷ್ಟಿಗೆ ಸಿಲುಕಿದರು ಅನುಮಾನವಿಲ್ಲ. ನಮ್ಮ ಮಕ್ಕಳನ್ನು ಕ್ರಾಂತಿಕಾರಿಗಳನ್ನಾಗಿ ಮಾಡದಿದ್ದರು ಚಿಂತೆಯಿಲ್ಲ  ದೇಶಕ್ಕಾಗಿ ಅವರ ಮನ ಮಿಡಿಯುವಂತೆ ತಯಾರು ಮಾಡಬೇಕಾಗಿರುವದು ಪ್ರತಿಯೊಬ್ಬ ಪಾಲಕರ ಆದ್ಯ ಕರ್ತವ್ಯವಾಗಿದೆ ಎಂದರು. ಹಾಗೂ ಹಿರಿಯರಾದ ಭಾಷುಸಾಬ ಹಿರೇಮನಿ ಮಾತನಾಡಿ ಭಗತ್‍ಸಿಂಗ್ ರಾಜ್‍ಗುರು ಸುಖದೇವ್ ಈ ದೇಶದ ಆಸ್ತಿ ಅವರ ಆದರ್ಶಗಳನ್ನು ಇವತ್ತಿನ ಯುವ ಜನತೆ ಪಾಲಿಸುವದರ ಜೋತೆಗೆ ಅವರನ್ನು ಸ್ಮರಿಸುವದು ನಮ್ಮೇಲ್ಲರ ಕರ್ತವ್ಯವಾಗಿದೆ ಎಂದರು.
ನಂತರ ಸನ್ಮಾನ ಸ್ವೀಕರಿಸಿದ ಹಮಾಲರ ಸಂಘದ ಕಾರ್ಮಿಕರಲ್ಲಿ ಒಬ್ಬರಾದ ನಾಗಪ್ಪ ಲ್ಯಾವಕ್ಕಿ ಮಾತನಾಡಿ ಗೌರವ ಸನ್ಮಾನ ಎನ್ನುವದು ಬರಿ ದುಡ್ಡಿರುವವರಿಗೆ, ರಾಜಕಾರಣಿಗಳಿಗೆ ಮಾತ್ರ ಅಂದುಕೊಂಡ್ಡಿದ್ದವು  ಆದರೆ ನಮ್ಮನ್ನು ಗೌರವಿಸಿ ಸನ್ಮಾನ ಮಾಡುವವರು ಇದ್ದಾರೆ ಎನ್ನುವದು ತುಂಬ ಸಂತೋಷವನ್ನು ಉಂಟುಮಾಡಿದೆ ಸ್ವಾಮಿ ವಿವೇಕಾನಂದ ಸೇವಾ ಸಂಸ್ಥೆ ಕಿನ್ನಾಳ ಇನ್ನೂ ಹೆಚ್ಚು ಹೆಚ್ಚು ಇಂತಹ ಕಾರ್ಯಕ್ರಮಗಳನ್ನು ಮಾಡಲು ಆ ದೇವರು ಶಕ್ತಿ ನೀಡಲಿ ಎಂದರು.
ಈ ಕಾರ್ಯಕ್ರಮದಲ್ಲಿ ಗ್ರಾಮದ ಹಿರಿಯರಾದ ಮಂಜುನಾಥ ಸಿರಿಗೇರಿ, ಉದಯ ಚಿತ್ರಗಾರ, ರಾಘವೇಂದ್ರ ಉಪ್ಪಾರ, ಶಿವುಕುಮಾರ ಕಾಕಿ, ನಾಗರಾಜ ಭಾಂಗಡಿ, ನವಿನ ಬಲೂಚಿಗಿ, ವಿನಾಯಕ್ ಪೂಜಾರ, ನಾಗರಾಜ ಚುಟ್ಟಾ, ರವಿಕಿರಣ ಶಾವಿ, ಶಿವುಕುಮಾರ ಪಾಗಿ, ಮಂಜುನಾಥ ಗ್ವಾಡೆಕೇರ, ಬಸವರಾಜ ವಾಲ್ಮಿಕಿ, ಜಗದಿಶ ಜಾಲಿಹಾಳ, ರಂಜಿತ್ ಕಳ್ಳಿಮನಿ, ಅಶ್ವತ್ ನಾರಯಣ ಸಾಗರ, ಮೌನೇಶ ಕಮ್ಮಾರ, ಹಾಗೂ ಸಂಸ್ಥೆಯ ಎಲ್ಲಾ ಪದಾಧಿಕಾರಿಗಳು, ಹಮಾಲರ ಸಂಘದ ಕಾರ್ಮಿಕರು ಹಾಗೂ ಗ್ರಾಮದ ಸಾರ್ವಜನಿಕರು ಉಪಸ್ಥಿತರಿದ್ದರು. ಕೊನೆಯದಾಗಿ ಲಿಂಗರಾಜ್ ಸಿರಿಗೇರಿ ನಿರೂಪಿಸಿ ವಂದಿಸಿದರು.

Sunday, March 19, 2017

ಹಿಮಪಾತದಲ್ಲಿ ಹುತಾತ್ಮರಾದ ವೀರಯೋಧರಿಗೆ ಶ್ರದ್ದಾಂಜಲಿ

ದಿನಾಂಕ:೨೮-೦೧-೨೦೧೭.ಕಿನ್ನಾಳ ಗ್ರಾಮದ ಶ್ರೀ ಸ್ವಾಮೀ ವಿವೇಕಾನಂದ ಸೇವಾ ಸಂಸ್ಥೆಯ ವತಿಯಿಂದ ಜಮ್ಮು ಕಾಶ್ಮೀರದ ಗುರೇಜ ವಲಯದ ಹಿಮಪಾತದಲ್ಲಿ ಹುತಾತ್ಮರಾದ ವೀರಯೋಧರಿಗೆ ಶ್ರದ್ದಾಂಜಲಿ ಹಾಗೂ ನುಡಿ ನಮನವನ್ನು ಸಲ್ಲಿಸಲಾಯಿತು...!

ಕಿನ್ನಾಳದಲ್ಲಿ ಸ್ವಾಮಿ ವಿವೇಕಾನಂದರ 154 ನೇ ಜಯಂತಿ ಆಚರಣೆ

ದಿ.12.01.2017 ರಂದು ಶ್ರೀ ಸ್ವಾಮಿ ವಿವೇಕಾನಂದರ 154ನೇ ಜಯಂತಿಯನ್ನು  ಆಚರಿಸಲಾಗಿತ್ತು ಹಾಗೂ ಶ್ರೀ ಸ್ವಾಮಿ ವಿವೇಕಾನಂದ ವ್ರತ್ತದಲ್ಲಿ ಪೂಜಾ ಕಾರ್ಯಕ್ರಮ ನೆರವೇರಿಸಿ ಈ ಕಾಯ೯ಕ್ರಮದ ಬಡ ಪ್ರತಿಭಾನ್ವಿತ 06 ಆರು ವಿದ್ಯಾರ್ಥಿಗಳ ದತ್ತು ಪಡೆಯುವ ಕಾರ್ಯಕ್ರಮ ನಡೆಯಿತು
ದಿ.13.01.2017 ರಂದು ಬೆಳಗ್ಗೆ 9 ಗಂಟೆಗೆ ಕಿನ್ನಾಳದ ಮುಖ್ಯ ಬೀದಿಗಳಲ್ಲಿ ಶೋಭಾಯಾತ್ರೆ ನಂತರ ಗ್ರಾಮದ ಸರಕಾರಿ ಸಂಯುಕ್ತ ಪದವಿ ಕಾಲೇಜ್ ಕಿನ್ನಾಳ ಆವರಣದಲ್ಲಿ ಬಹಿರಂಗ ಸಭೆ ನಡೆಯಿತು ಮುಖ್ಯ ವಕ್ತಾರರಾಗಿ ಶ್ರೀ ವಸಂತ ಪೂಜಾರ, ಪ್ರಾಚಾರ್ಯರಾದ ಶ್ರೀ ಸೂಡಿ ಸರ್, ಸಂಸ್ಥೆಯ ಅದ್ಯಕ್ಷರಾದ ಶ್ರೀ ಮೌನೇಶ ಕಮ್ಮಾರ ವೇದಿಕೆ ಮೇಲೆ ಉಪಸ್ಥಿತರಿದ್ದರು.ಸಂಸ್ಥೆಯ ಕಾರ್ಯದರ್ಶಿ  ಶ್ರೀ ಮೈಲಾರಪ್ಪ ಕುಣಿ ಯವರು ನಿರೂಪಿಸಿದರು...