Tuesday, March 26, 2019

ಮತದಾನ ಜಾಗೃತಿ ಕಾರ್ಯಕ್ರಮ

ಮತದಾನ ಜಾಗೃತಿ ಕಾರ್ಯಕ್ರಮ, ಮತ ಚಲಾಯಿಸಿ, ಪ್ರಜಾಪ್ರಭುತ್ವ ಬಲಪಡಿಸಿ...
ಕೊಪ್ಪಳ : ಕಿನ್ನಾಳ ಗ್ರಾಮದಲ್ಲಿ ಶ್ರೀ ಸ್ವಾಮಿ ವಿವೇಕಾನಂದ ಸೇವಾ ಸಂಸ್ಧೆ ಹಾಗೂ ನೆಹರು ಯುವಕೇಂದ್ರ ಕೊಪ್ಪಳ ಸಹಯೋಗದಲ್ಲಿ ನೆರೆಹೊರೆ ಯುವ ಸಂಸತ್ತು 2018-19 ಮತ್ತು ಮತದಾನ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು..


ನೇಹರು ಯುವಕೇಂದ್ರದ ಜ್ಯೋತಿ ಮೂಲಿಮನಿ ಮಾತನಾಡಿ 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬ ಮತದಾರರೂ ಸಹ ತಪ್ಪದೆ ಮತದಾನವನ್ನು ಮಾಡುವ ಮೂಲಕ ದೇಶದ ಅಭಿವೃದ್ಧಿಗೆ ಕೈ ಜೋಡಿಸಬೇಕು ಎಂದರು. ಹಾಗೂ ಇದೇ ಸಂದರ್ಭಧಲ್ಲಿ ಪ್ರತಿಜ್ಞಾ ವಿಧಿ ಭೋದಿಸಿದರು.


ಸಂತೋಷ ಕಠಾರೆ ಕಾರ್ಯಕ್ರಮ ಉದ್ದೇಶ ಮಾತನಾಡಿ ಉತ್ತಮ ಸಮಾಜ ನಿರ್ಮಾಣ ಮಾಡುವಲ್ಲಿ ಪ್ರತಿಯೊಬ್ಬ ಮತದಾರರ ಪಾತ್ರ ಅತ್ಯಮೂಲ್ಯವಾದುದು. ದೇಶದ ಅಭಿವೃದ್ಧಿಗಾಗಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲಾಗಿದೆ. ಹಾಗಾಗಿ ಈ ವ್ಯವಸ್ಥೆಯು ಉತ್ತಮವಾಗಿ ಇರಬೇಕಾದರೆ ಪ್ರತಿಯೊಬ್ಬ ಮತದಾರರು ಸ್ವಯಂ ಪ್ರೇರಿತರಾಗಿ ಮತಚಲಾಯಿಸುವ ಕೆಲಸ ಮಾಡಬೇಕು  ಹಾಗೂ ಪ್ರತಿಯೊಬ್ಬ ವ್ಯಕ್ತಿಯೂ ಯಾವುದೇ ಕುಲ, ಮತ, ಜಾತಿ, ಧರ್ಮ, ಹಣ ಆಮಿಷಗಳಿಗೆ ಒಳಗಾಗದೇ ಪ್ರಾಮಾಣಿಕತೆಯಿಂದ ಮತದಾನ ಮಾಡುವ ಮೂಲಕ ತಮ್ಮ ಹಕ್ಕನ್ನು ಚಲಾಯಿಸಬೇಕೆಂದು ಎಂದರು.


ಈ ಕಾರ್ಯಕ್ರಮದಲ್ಲಿ  ಗ್ರಾಮ ಪಂಚಾಯತಿ ನೀಲಮ್ಮ ಜಿ.ಬಿ, ಸಂತೋಷ ಕಠಾರೆ, ಶಿವಕುಮಾರ ಕಮ್ಮಾರ, ರಾಘವೇಂದ್ರ ಉಪ್ಪಾರ, ನೇಹರು ಯುವಕೇಂದ್ರ ಯುವ ಕಾರ್ಯಕರ್ತರಾದ ಜ್ಯೋತಿ ಮೂಲಿಮನಿ, ಊರಿನ ಗುರುಹಿರಿಯರು ಮಹಿಳೆಯರು ಉಪಸ್ಧಿತಿಯಲ್ಲಿ ಇದ್ದರು.



Friday, March 15, 2019

ಕಿನ್ನಾಳ ಗ್ರಾಮದಲ್ಲಿ 100 ದಿನಗಳ ಮಹಿಳಾ ಸ್ವಯಂ ಉದ್ಯೋಗ ತರಬೇತಿ ಕಾರ್ಯಾಗಾರಕ್ಕೆ ಚಾಲನೆ


ಕೊಪ್ಪಳ : ಕಿನ್ನಾಳ ಗ್ರಾಮದಲ್ಲಿ ಶ್ರೀ ಸ್ವಾಮಿ ವಿವೇಕಾನಂದ ಸೇವಾ ಸಂಸ್ಧೆ ಹಾಗೂ ಅಮರಜ್ಯೋತಿ ನಗರ ಗ್ರಾಮೀಣಭಿವೃದ್ಧಿ ಮತ್ತು ಸ್ವಯಂ ಉದ್ಯೋಗ್ಯ ತರಬೇತಿ ಸಂಸ್ಥೆ ಯಲಬುರ್ಗಾ ಇವರ ಸಂಯುಕ್ತ ಆಶ್ರಯದಲ್ಲಿ ಕಿನ್ನಾಳ ಗ್ರಾಮದಲ್ಲಿ 100 ದಿನಗಳ ಮಹಿಳಾ ಸ್ವಯಂ ಉದ್ಯೋಗ ತರಬೇತಿ ಕಾರ್ಯಾಗಾರಕ್ಕೆ ಚಾಲನೆಯನ್ನು ನೀಡಲಾಯಿತು.



ಕಾರ್ಯಾಗಾರವು ನಮ್ಮ ಸಂಸ್ಥೆಯದ್ಯೇಯೋದ್ದೇಶಗಳಾದ  ಶಿಕ್ಷಣ, ಸಂಸ್ಕೃತಿ, ಸ್ವಾವಲಂಬನೆ ಕನಸನ್ನು ನನಸಾಗಿಸುವತ್ತ ಹೆಜ್ಜೆ ಹಾಕಿ ಗ್ರಾಮೀಣ ಭಾಗದ ಮಹಿಳೆಯರಿಗೆ ಸ್ವಾವಲಂಬನೆಯ ಬದುಕು ಕಟ್ಟಿಕೊಳ್ಳಲು ಸಹಕಾರಿಯಾಗಲಿದೆ. ಹಾಗೂ ಗ್ರಾಮ ಪಂಚಾಯತ ಕಿನ್ನಾಳ ಸಹಕಾರ ನೀಡಿದ್ದು.ಕಾರ್ಯಾಗಾರ ನಾಳೆಯಿಂದ ಪೂರ್ಣವಾಗಿ ಆರಂಭವಾಗಲಿದೆ. ನಿಮ್ಮ ಸುತ್ತಮುತ್ತಲಿನ ಕುಟುಂಬದ ಮಹಿಳೆಯರಿಗೆ ಕಾರ್ಯಾಗಾರದ ಸದುಪಯೋಗ ಪಡೆಯಲು ಮೌನೇಶ ಕಮ್ಮಾರ ತಿಳಸಿದರು.


ಕಾರ್ಯಕ್ರಮಕ್ಕೆ ಗ್ರಾಮ ಪಂಚಾಯತಿ ವೀರನಗೌಡ ಚನ್ನವೀರಗೌಡ್ರ ಪಿ.ಡಿ. ಮತ್ತು ನೀಲಮ್ಮ ಜಿ.ಬಿ ಹಾಗೂ ಮಾಜಿ ಗ್ರಾಮ ಪಂಚಾಯತಿ ಅದ್ಯಕ್ಷರು ಓಂಕಾರಮ್ಮ ಶಿರಿಗೇರಿ,ಮೌನೇಶ ಕಿನ್ನಾಳ, ಶರಣಪ್ಪ ಕಂಚಿ,ಲಿಂಗರಾಜ ಶಿರಿಗೇರಿ,ಸಂತೋಷ ಕಠಾರೆ, ರಾಘವೇಂದ್ರ ಉಪ್ಪಾರ ಊರಿನ ಗುರುಹಿರಿಯರು ಮಹಿಳೆಯರು ಉಪಸ್ಥಿತರಿದ್ದರು.


Tuesday, March 12, 2019

ಪರೀಕ್ಷಾ ಪೂರ್ವ ತರಬೇತಿ ಕಾರ್ಯಾಗಾರ


ಕೊಪ್ಪಳ : ಕಿನ್ನಾಳ ಗ್ರಾಮದಲ್ಲಿ ಶ್ರೀ ಸ್ವಾಮಿ ವಿವೇಕಾನಂದ ಸೇವಾ ಸಂಸ್ಧೆ ಹಾಗೂ ಹಾಗೂ ಅಭಿನವ ಶ್ರೀ ಸಿದ್ದೇಶ್ವರ ಶಿಕ್ಷಣ ಗ್ರಾಮೀಣ ಕ್ಷೇಮಾಭಿವೃದ್ಧಿ ಸಂಸ್ಥೆ ಕೊಪ್ಪಳ ಇವರ ಸಹಯೋಗದಲ್ಲಿ SSLC ವಿದ್ಯಾರ್ಥಿಗಳ ಉತ್ತಮ ಫಲಿತಾಂಶಕ್ಕಾಗಿ ವ್ಯಕ್ತಿಗಳಿಂದ ಪರೀಕ್ಷಾ ಪೂರ್ವ ತರಬೇತಿ ಕಾರ್ಯಾಗಾರವನ್ನು ಸರಕಾರಿ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯ ಕಿನ್ನಾಳ ಹಮ್ಮಿಕೊಳ್ಳಾಯಿತು.


ಆನಂದ ಹಳ್ಳಿಗುಡಿ ಮಾತನಾಡಿ ವಿದ್ಯಾರ್ಥಿಗಳು ಪರೀಕ್ಷೆಯನ್ನು ಏಕಾಗ್ರತೆ ಮತ್ತು ಅತ್ಮವಿಶ್ವಾಸದಿಂದ ಬರೆಯಬೇಕು. ಗಣಿತ ಮತ್ತು ಇಂಗ್ಲೀಷ್ ವಿಷಯಗಳನ್ನು ಆಸಕ್ತಿಯಿಂದ ಗಮನಿಸಿದರೆ ಅತ್ಯಂತ ಸರಳವಾಗಿ ಅರಿಯಬಹುದು. ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಅತಿಮುಖ್ಯ ಘಟ್ಟವಾಗಿದ್ದು ಬಹಳ ಶ್ರಮಪಟ್ಟು ವಿದ್ಯಾಭ್ಯಾಸ ಮಾಡಿ ತಮ್ಮ ಬದುಕನ್ನು ರೂಪಿಸಿಕೊಳ್ಳುವಂತೆ ತಿಳಿ ಹೇಳಿದರು.



           ಶೋಭಾ ವೇದಪಾಠಕ ಮಾತನಾಡಿ ವಿದ್ಯಾರ್ಥಿಗಳಲ್ಲಿ ಪರೀಕ್ಷೆಯ ಭಯ ಬೇಡ, ಪಬ್ಲಿಕ್ ಪರೀಕ್ಷೆಯನ್ನು ಧೈರ್ಯದಿಂದ ಎದುರಿಸಿದಾಗ ಉತ್ತಮ ಅಂಕ ಗಳಿಸಲು ಸಾಧ್ಯವಾಗುವುದು ಎಂದು ಹೇಳಿದರು.  ಜಯಶ್ರೀ ಅಂಗಡಿ, ಅಧ್ಯಕ್ಷತೆ ವಹಿಸಿದ್ದರು. ಸರಕಾರಿ ಪ್ರೌಢ ಶಾಲೆ ಶಿಕ್ಷಕರಾದ ಮಂಜುನಾಥ ಕಟ್ಟಿ, ಸರೋಜಾ ಮೇದಪಾಠಕ ಮತ್ತಿತರರು ಹಾಜರಿದ್ದರು. ಸಂತೋಷ ಕಠಾರೆ ಸ್ವಾಗತಿಸಿ, ಮೈಲಾರಪ್ಪ ಕುಣಿ ನಿರೂಪಿಸಿ, ಹಾಗೂ ವಿದ್ಯಾರ್ಥಿಗಳು ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು.