ಕೊಪ್ಪಳ: ತಾಲ್ಲೂಕಿನ ಕಿನ್ನಾಳ ಗ್ರಾಮದಲ್ಲಿ ಸ್ವಾಮಿ ವಿವೇಕಾನಂದರ 157ನೇ ಜಯಂತಿ ಅಂಗವಾಗಿ ಕಿನ್ನಾಳದ ಸ್ವಾಮಿ ವಿವೇಕಾನಂದ ಸೇವಾ ಸಂಸ್ಥೆ (ರಿ) ವತಿಯಿಂದ ಮುದ್ಲಾಪುರ ರಸ್ತೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಬೀರಲಿಂಗೇಶ್ವರ ಬಡಾವಣೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಕ್ರೀಡಾ ಸಾಮಗ್ರಿಗಳನ್ನು ವಿತರಿಸಲಾಯಿತು.
ಮುಖ್ಯಶಿಕ್ಷಕ ಶರಣಪ್ಪ ಬಿಸನಳ್ಳಿ ಮಾತನಾಡಿ, ಯುವಕರು ಮನಸ್ಸು ಮಾಡಿದರೆ ಎಲ್ಲವೂ ಸಾಧ್ಯ ಎನ್ನುವುದಕ್ಕೆ ಈ ಸಂಸ್ಥೆಯು ಸಾಕ್ಷಿಯಾಗಿದ್ದು, ಸರ್ಕಾರಿ ಶಾಲೆಗಳೆಂದರೆ ತಾತ್ಸಾರ ತೋರುವ ಪಾಲಕರ ಮಧ್ಯದಲ್ಲಿ ಸರ್ಕಾರಿ ಶಾಲೆಗಳು ನಮ್ಮ ಆಸ್ತಿ ಎಂದು ಮುಂದೆ ಬಂದು ಮಕ್ಕಳಲ್ಲಿ ಕ್ರೀಡಾಸಕ್ತಿ ತುಂಬಲು ಕ್ರೀಡಾ ಸಾಮಗ್ರಿಗಳನ್ನು ವಿತರಿಸಿದ್ದಾರೆ. ಇದು ಸಂತಸದ ಸಂಗತಿಯಾಗಿದೆ ಎಂದರು.
ಶಾಲಾ ಚಟುವಟಿಕೆಗಳು ಮತ್ತು ಅಭಿವೃದ್ಧಿಗಾಗಿ ನಿಮ್ಮೆಲ್ಲರ ಸಹಕಾರ ಸದಾ ನಮ್ಮೊಂದಿಗೆ ಹೀಗೆ ಇರಬೇಕು. ಮುಂಬರುವ ದಿನಗಳಲ್ಲಿ ಸ್ವಾಮಿ ವಿವೇಕಾನಂದ ಸಂಸ್ಥೆಯಿಂದ ಗ್ರಾಮದಲ್ಲಿ ಶೈಕ್ಷಣಿಕ ಕ್ರಾಂತಿ ಉಂಟಾಗಬೇಕು. ಸದಾ ಸಮಾಜಕ್ಕಾಗಿ ನಿಸ್ವಾರ್ಥ ಸೇವೆಯಲ್ಲಿ ತೊಡಗಿರುವ ಈ ಸಂಸ್ಥೆ ಉತ್ತರೋತ್ತವಾಗಿ ಬೆಳೆಯಲಿ ಎಂದು ಆಶಿಸಿದರು.
ಸಂಸ್ಥೆಯ ಅಧ್ಯಕ್ಷ ಮೌನೇಶ ಕಿನ್ನಾಳ ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿ ಅನುಭವಿ ನುರಿತ ಗುರುಗಳಿಂದ ಉತ್ಕೃಷ್ಟ ಶಿಕ್ಷಣ ದೊರೆಯುತ್ತಿದ್ದು, ಪಠ್ಯದ ಜತೆಗೆ ಪಠ್ಯೇತರ ಚಟುವಟಿಗಳಲ್ಲೂ ಮಕ್ಕಳು ಕ್ರಿಯಾಶೀಲರಾಗಬೇಕು ಎಂದು ನಮ್ಮ ಸಂಸ್ಥೆಯು ಈ ಅಳಿಲು ಸೇವೆಗೆ ಮುಂದಾಗಿದ್ದು, ಸದೃಢ ಭಾರತಕ್ಕಾಗಿ ಸದೃಢ ಯುವಜನತೆ ತಯಾರಾಗಬೇಕಾದರೆ ಪ್ರಾಥಮಿಕ ಹಂತದಲ್ಲೇ ಭದ್ರ ಬುನಾದಿ ಹಾಕಬೇಕಾಗುತ್ತದೆ. ಆ ನಿಟ್ಟಿನಲ್ಲಿ ನಮ್ಮ ಸಂಸ್ಥೆಯು ಸದಾ ಕಾರ್ಯ ಪ್ರವೃತ್ತವಾಗಿದ್ದು, ತಮ್ಮೆಲ್ಲರ ಮಾರ್ಗದರ್ಶನದಲ್ಲಿ ನಾವು ಮುನ್ನೆಡೆಯುತ್ತೇವೆ ಎಂದರು.
ಸಂಸ್ಥೆಯ ಕಾರ್ಯದರ್ಶಿ ಮೈಲಾರಪ್ಪ ಕುಣಿ, ಸಂತೋಷ ಕಠಾರೆ, ಮಂಜುನಾಥ ಬಡಗಲ್, ಸಂತೋಷ ಬಿಸನಳ್ಳಿ, ಲಿಂಗರಾಜ ಶಿರಗೇರಿ, ಶಿವು ಇಂದ್ರಿಗಿ, ಅಣ್ಣಪ್ಪ ಜೋಗಿನ್, ಮಾರ್ಕಂಡೇಶ್ವರ ಪದ್ಮಶಾಲಿ ಇದ್ದರು.
ಸರ್ಕಾರಿ ಶಾಲೆಗಳು ಎಂದರೆ ಬರಿ ಸರ್ಕಾರದ ಆಸ್ತಿ ಮತ್ತು ಶಿಕ್ಷಕರ ಜವಾಬ್ದಾರಿ ಅಷ್ಟೇ ಅಲ್ಲ ಅದು ಸಾರ್ವಜನಿಕರ ಆಸ್ತಿ - ಗಣೇಶ ಬಣ್ಣದ ಗುರುಗಳು
ಕೊಪ್ಪಳ ತಾಲೂಕಿನ ಕಿನ್ನಾಳ ಗ್ರಾಮದಲ್ಲಿ ಶ್ರೀ ಸ್ವಾಮಿ ವಿವೇಕಾನಂದ ಸೇವಾ ಸಂಸ್ಥೆ(ರಿ) ಕಿನ್ನಾಳ ವತಿಯಿಂದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೌಲಪೇಟ ವಿದ್ಯಾರ್ಥಿಗಳಿಗೆ ಕ್ರೀಡಾ ಸಾಮಗ್ರಿಗಳನ್ನು ವಿತರಿಸಲಾಯಿತು.
ನಂತರ ಶಾಲೆಯ ಮುಖ್ಯೋಪಾಧ್ಯಾರಾದ ಗಣೇಶ ಬಣ್ಣದ ಅವರು ಮಾತನಾಡಿ ಎಸ್.ವಿ.ಎಸ್ ಸಂಸ್ಥೆಯು ಸದಾ ಕ್ರಿಯಾಶೀಲವಾಗಿದ್ದು ಸಮಾಜದ ವಿವಿಧ ಚಟುವಟಿಯಲ್ಲಿ ಸದಾ ಬಾಗಿಯಾಗಿರುವುದನ್ನು ನಾವು ಗಮಸಿದ್ದು ಪ್ರಸ್ತುತ ಸ್ವಯಂ ಪ್ರೇರಣೆಯಿಂದ ಸರ್ಕಾರಿ ಶಾಲೆಗಳ ಮಕ್ಕಳಿಗೆ ಅನುಕೂಲವಾಗಿಲಿ ಎಂದು ಕ್ರೀಡಾ ಸಾಮಗ್ರಿಗಳನ್ನು ಒದಗಿಸಿರುವುದು ತುಂಬಾ ಸಂತೋಷದ ವಿಷಯ ಸರ್ಕಾರಿ ಶಾಲೆಗಳು ಎಂದರೆ ಬರಿ ಸರ್ಕಾರದ ಆಸ್ತಿ ಮತ್ತು ಶಿಕ್ಷಕರ ಜವಾಬ್ದಾರಿ ಅಷ್ಟೇ ಅಲ್ಲ ಅದು ಸಾರ್ವಜನಿಕರ ಆಸ್ತಿ ನಮ್ಮ ಜವಾಬ್ದಾರಿಯು ಇದೆ ಎನ್ನುವ ನಿಟ್ಟಿನಲ್ಲಿ ಸಂಸ್ಥೆಯ ಈ ಕಳಕಳಿಗೆ ನಾವು ಸದಾ ನಿಮ್ಮೊಂದಿಗೆ ಇರುತ್ತೇವೆ. ಮುಂದಿನ ದಿನಗಳಲ್ಲಿ ಸಂಸ್ಥೆ ಇನ್ನು ಹೆಚ್ಚಿನ ಮಟ್ಟದಲ್ಲಿ ಬೆಳೆಯಲಿ ಎಂದು ಆಶಿಸುತ್ತೇನೆ ಎಂದರು.
ನಂತರ ಸಂಸ್ಥೆಯ ಅಧ್ಯಕ್ಷ ಮೌನೇಶ ಕಿನ್ನಾಳ ಮಾತನಾಡಿ ನಮ್ಮ ಶಾಲೆಗಳನ್ನ ಬೆಳೆಸೋಣ ಸರ್ಕಾರಿ ಶಾಲೆಗಳನ್ನ ಉಳಿಸೋಣ ಎನ್ನುವ ಉದ್ದೇಶದಿಂದ ನಮ್ಮ ಸಂಸ್ಥೆಯ ಎಲ್ಲಾ ಸದಸ್ಯರು ಮಾತನಾಡಿ ಈ ಹಿಂದೆ ಸರ್ಕಾರಿ ಸಂಯುಕ್ತ ಪದವಿ ಪೂರ್ವ ಕಾಲೇಜಿಗೆ ಕ್ರೀಡಾ ಸಾಮಗ್ರಿಗಳನ್ನ ನೀಡಲಾಗಿತ್ತು ಇವಾಗ ಸರ್ಕಾರಿ ಶಾಲೆಗಳಿಗೆ ನೀಡೋಣ ಸರ್ಕಾರಿ ಶಾಲೆಗಳು ನಮ್ಮ ಆಸ್ತಿ ಅವುಗಳ ಅಭಿರುದ್ದಿಯಲ್ಲಿ ನಮ್ಮದು ಅಳಿಲು ಸೇವೆಯಷ್ಟಿರಲಿ ಕ್ರೀಡೆಯಿಂದ ಮಕ್ಕಳು ಸದೃಢರಾಗಲಿ ಎಂದು ನಿರ್ಧರಿಸಿ ಸಾಮಗ್ರಿಗಳನ್ನು ನೀಡಿದ್ದೇವೆ ನಿಮ್ಮ ಮಾರ್ಗದರ್ಶನ ಸದಾ ನಮ್ಮ ಸಂಸ್ಥೆಗಿರಲಿ ಎಂದರು..
ಈ ಸಂದರ್ಭದಲ್ಲಿ ಸಂಸ್ಥೆಯ ಕಾರ್ಯದರ್ಶಿ ಮೈಲಾರಪ್ಪ ಕುಣಿ, ಪಧಾದಿಕಾರಿಗಳಾದ ಸಂತೋಷ ಬಿಸನಳ್ಳಿ, ಕನಕಪ್ಪ ವಾಲ್ಮೀಕಿ, ಸಂತೋಷ ಕಠಾರೆ, ವಿರೇಶ ಮರಕೊರೆ, ಕೃಷ್ಣ ಮಾಲ್ವಿ, ಹನುಮೇಶ ಬಳಿಗಾರ ಸೇರಿದಂತೆ ಶಾಲಾ ಸಿಬ್ಬಂದಿಗಳು ವಿದ್ಯಾರ್ಥಿಗಳು ಉಪಸ್ಥಿತರಿದ್ದರು
ಕೊಪ್ಪಳ : ಕಿನ್ನಾಳ ಗ್ರಾಮದ ಮಾರುತೇಶ್ವರ ಸಮುದಾಯ ಭವನದಲ್ಲಿ ಶ್ರೀ ಸ್ವಾಮಿ ವಿವೇಕಾನಂದ ಸೇವಾ ಸಂಸ್ಧೆ ಹಾಗೂ ಅಮರಜ್ಯೋತಿ ನಗರ ಗ್ರಾಮೀಣಭಿವೃದ್ಧಿ ಮತ್ತು ಸ್ವಯಂ ಉದ್ಯೋಗ್ಯ ತರಬೇತಿ ಸಂಸ್ಥೆ ಯಲಬುರ್ಗಾ ಸಹಯೋಗದಲ್ಲಿ ಆಯೋಜಿಸಿದ್ದ 100 ದಿನಗಳ ಮಹಿಳಾ ಸ್ವಯಂ ಉದ್ಯೋಗ ತರಬೇತಿ ಕಾರ್ಯಾಗಾರ
ಸಂಸ್ಥೆಯ ಯೋಜನಾಧಿಕಾರಿ ಡಿ.ಕೆ.ಶರಣಪ್ಪ ಅವರ ಮಾತನಾಡಿ ಸಂಸ್ಥೆಯಿಂದ ಕರ್ನಾಟಕ ರಾಜ್ಯದಲ್ಲಿ ಅನೇಕ ಜಿಲ್ಲಾ ಮತ್ತು ತಾಲೂಕುಗಳಲ್ಲಿ ಜಿಲ್ಲಾಮಟ್ಟದ ಸ್ವಯಂ ಉದ್ಯೋಗ ತರಬೇತಿ ನೀಡಿ ಈ ತರಬೇತಿಯಲ್ಲಿ ಟೆಕ್ಸ್ಟೈಲ್ಸ್ ಪ್ರಿಂಟಿಂಗ್, ಸ್ಕ್ರೀನ್ ಪ್ರಿಂಟಿಂಗ್, ವೆಲ್ವೆಟ್ ಡಿಸೈನಿಂಗ್, ಕ್ಲಾಥ್ವಾಟರ್ ಪ್ರೂಫ್ ಪ್ರಿಂಟಿಂಗ್, ಮ್ಯಾಚ್ ಪ್ರಿಂಟಿಂಗ್, ಫ್ಯಾಶನ್ ಡಿಸೈನಿಂಗ್, ಕಟ್ಟಿಂಗ್ ಕ್ಲಾಸ್ (ಟೈಲರಿಂಗ್) ಮತ್ತು ಮೆಹಂದಿ ಸಾಪ್ಟ್ ಡಾಲಮೇಕಿಂಗ್, ಬ್ಯೂಟೀಷಿಯನ್, ಸೇರಿದ್ದು. 3 ತಿಂಗಳ ಕಾಲ ಸಂಪೂರ್ಣವಾಗಿ ಪಡೆದ ಶಿಬಿರಾರ್ಥಿಗಳಿಗೆ ಸ್ವಾಮಿ ವಿವೇಕಾನಂದ ಹಾಗೂ ನಮ್ಮ ಸಂಸ್ಥೆಯಿಂದ ಪ್ರಮಾಣಪತ್ರ ನೀಡಲಾಗುವುದು ಎಂದರು.
ಸಂಸ್ಥೆಯ ಕಾರ್ಯದರ್ಶಿ ಮೈಲಾರಪ್ಪ ಕುಣಿ ಮಾತನಾಡಿ, ''ಸರಕಾರಿ ಸಹಾಯ ಧನ ಆಧರಿತ ಸಾಲ ಸೌಲಭ್ಯಗಳನ್ನು ನಮ್ಮಲ್ಲಿ ತರಬೇತಿ ಪಡೆದ ಮಹಿಳೆಯರಿಗೆ ನೀಡಿದರೆ, ಅವರಿಗೆ ಅನುಕೂಲವಾಗುತ್ತದೆ. ಮರುಪಾವತಿಯೂ ಉತ್ತಮವಾಗಿರುತ್ತದೆ. ಇದರಿಂದ ಅವರ ಜೀವನ ಮಟ್ಟವೂ ಸುಧಾರಣೆಯಾಗುತ್ತದೆ,'' ಎಂದು ತಿಳಿಸಿದರು. ಹಾಗೂ ''ಸಂಸ್ಥೆಯ ತರಬೇತಿಗಳು ಗುಣಮಟ್ಟದ ಕೂಡಿದೆ. ಗ್ರಾಮೀಣ ಪ್ರದೇಶದ ಮಹಿಳೆಯರಿಗೆ ತರಬೇತಿಯ ಜತೆಗೆ ಬ್ಯಾಂಕಿನ ವಿಚಾರಗಳನ್ನು ತಿಳಿಸುತ್ತಿರುವುದು ಸಂತೋಷದ ಸಂಗತಿ ಎಂದರು.
ಹಾಗೂ ವೇದಿಕೆ ಮೇಲೆ ಸಂಸ್ಧೆ ಕಾರ್ಯದರ್ಶಿಯಾದ ಮೈಲಾರಪ್ಪ ಕುಣಿ, ಅಮರಜ್ಯೋತಿ ನಗರ ಗ್ರಾಮೀಣಭಿವೃದ್ಧಿ ಸಂಸ್ಥೆಯ ಯೋಜನಾಧಿಕಾರಿ ಡಿ.ಕೆ.ಶರಣಪ್ಪ ಹಾಗೂ ಭಾರತಿ ಶೇಲೆದ್ ಸಂಸ್ಥೆಯ ಎಲ್ಲಾ ಪದಾರ್ಧಿಕಾರಿಗಳು ಹಾಗೂ ಮಹಿಳೆಯರು ಭಾಗವಹಿಸಿದ್ದರು.
ಮತದಾನ ಜಾಗೃತಿ ಕಾರ್ಯಕ್ರಮ, ಮತ ಚಲಾಯಿಸಿ, ಪ್ರಜಾಪ್ರಭುತ್ವ ಬಲಪಡಿಸಿ...
ಕೊಪ್ಪಳ : ಕಿನ್ನಾಳ ಗ್ರಾಮದಲ್ಲಿ ಶ್ರೀ ಸ್ವಾಮಿ ವಿವೇಕಾನಂದ ಸೇವಾ ಸಂಸ್ಧೆ ಹಾಗೂ ನೆಹರು ಯುವಕೇಂದ್ರ ಕೊಪ್ಪಳ ಸಹಯೋಗದಲ್ಲಿ ನೆರೆಹೊರೆ ಯುವ ಸಂಸತ್ತು 2018-19 ಮತ್ತು ಮತದಾನ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು..
ನೇಹರು ಯುವಕೇಂದ್ರದ ಜ್ಯೋತಿ ಮೂಲಿಮನಿ ಮಾತನಾಡಿ 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬ ಮತದಾರರೂ ಸಹ ತಪ್ಪದೆ ಮತದಾನವನ್ನು ಮಾಡುವ ಮೂಲಕ ದೇಶದ ಅಭಿವೃದ್ಧಿಗೆ ಕೈ ಜೋಡಿಸಬೇಕು ಎಂದರು. ಹಾಗೂ ಇದೇ ಸಂದರ್ಭಧಲ್ಲಿ ಪ್ರತಿಜ್ಞಾ ವಿಧಿ ಭೋದಿಸಿದರು.
ಸಂತೋಷ ಕಠಾರೆ ಕಾರ್ಯಕ್ರಮ ಉದ್ದೇಶ ಮಾತನಾಡಿ ಉತ್ತಮ ಸಮಾಜ ನಿರ್ಮಾಣ ಮಾಡುವಲ್ಲಿ ಪ್ರತಿಯೊಬ್ಬ ಮತದಾರರ ಪಾತ್ರ ಅತ್ಯಮೂಲ್ಯವಾದುದು. ದೇಶದ ಅಭಿವೃದ್ಧಿಗಾಗಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲಾಗಿದೆ. ಹಾಗಾಗಿ ಈ ವ್ಯವಸ್ಥೆಯು ಉತ್ತಮವಾಗಿ ಇರಬೇಕಾದರೆ ಪ್ರತಿಯೊಬ್ಬ ಮತದಾರರು ಸ್ವಯಂ ಪ್ರೇರಿತರಾಗಿ ಮತಚಲಾಯಿಸುವ ಕೆಲಸ ಮಾಡಬೇಕು ಹಾಗೂ ಪ್ರತಿಯೊಬ್ಬ ವ್ಯಕ್ತಿಯೂ ಯಾವುದೇ ಕುಲ, ಮತ, ಜಾತಿ, ಧರ್ಮ, ಹಣ ಆಮಿಷಗಳಿಗೆ ಒಳಗಾಗದೇ ಪ್ರಾಮಾಣಿಕತೆಯಿಂದ ಮತದಾನ ಮಾಡುವ ಮೂಲಕ ತಮ್ಮ ಹಕ್ಕನ್ನು ಚಲಾಯಿಸಬೇಕೆಂದು ಎಂದರು.
ಈ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿ ನೀಲಮ್ಮ ಜಿ.ಬಿ, ಸಂತೋಷ ಕಠಾರೆ, ಶಿವಕುಮಾರ ಕಮ್ಮಾರ, ರಾಘವೇಂದ್ರ ಉಪ್ಪಾರ, ನೇಹರು ಯುವಕೇಂದ್ರ ಯುವ ಕಾರ್ಯಕರ್ತರಾದ ಜ್ಯೋತಿ ಮೂಲಿಮನಿ, ಊರಿನ ಗುರುಹಿರಿಯರು ಮಹಿಳೆಯರು ಉಪಸ್ಧಿತಿಯಲ್ಲಿ ಇದ್ದರು.
ಆನಂದ ಹಳ್ಳಿಗುಡಿ ಮಾತನಾಡಿ ವಿದ್ಯಾರ್ಥಿಗಳು ಪರೀಕ್ಷೆಯನ್ನು ಏಕಾಗ್ರತೆ ಮತ್ತು ಅತ್ಮವಿಶ್ವಾಸದಿಂದ ಬರೆಯಬೇಕು. ಗಣಿತ ಮತ್ತು ಇಂಗ್ಲೀಷ್ ವಿಷಯಗಳನ್ನು ಆಸಕ್ತಿಯಿಂದ ಗಮನಿಸಿದರೆ ಅತ್ಯಂತ ಸರಳವಾಗಿ ಅರಿಯಬಹುದು. ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಅತಿಮುಖ್ಯ ಘಟ್ಟವಾಗಿದ್ದು ಬಹಳ ಶ್ರಮಪಟ್ಟು ವಿದ್ಯಾಭ್ಯಾಸ ಮಾಡಿ ತಮ್ಮ ಬದುಕನ್ನು ರೂಪಿಸಿಕೊಳ್ಳುವಂತೆ ತಿಳಿ ಹೇಳಿದರು.
ಶೋಭಾ ವೇದಪಾಠಕ ಮಾತನಾಡಿ ವಿದ್ಯಾರ್ಥಿಗಳಲ್ಲಿ ಪರೀಕ್ಷೆಯ ಭಯ ಬೇಡ, ಪಬ್ಲಿಕ್ ಪರೀಕ್ಷೆಯನ್ನು ಧೈರ್ಯದಿಂದ ಎದುರಿಸಿದಾಗ ಉತ್ತಮ ಅಂಕ ಗಳಿಸಲು ಸಾಧ್ಯವಾಗುವುದು ಎಂದು ಹೇಳಿದರು. ಜಯಶ್ರೀ ಅಂಗಡಿ, ಅಧ್ಯಕ್ಷತೆ ವಹಿಸಿದ್ದರು. ಸರಕಾರಿ ಪ್ರೌಢ ಶಾಲೆ ಶಿಕ್ಷಕರಾದ ಮಂಜುನಾಥ ಕಟ್ಟಿ, ಸರೋಜಾ ಮೇದಪಾಠಕ ಮತ್ತಿತರರು ಹಾಜರಿದ್ದರು. ಸಂತೋಷ ಕಠಾರೆ ಸ್ವಾಗತಿಸಿ, ಮೈಲಾರಪ್ಪ ಕುಣಿ ನಿರೂಪಿಸಿ, ಹಾಗೂ ವಿದ್ಯಾರ್ಥಿಗಳು ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು.
ಕೊಪ್ಪಳ: ನಗರದ ಹಿಂದಿ ಪ್ರಚಾರ ಸಭಾ ಕಾನೂನು ಮಹಾವಿದ್ಯಾಲಯದಲ್ಲಿ ನೆಹರು ಯುವಕೇಂದ್ರ ಕೊಪ್ಪಳ ಯುವ ಸಮಾವೇಶ ಹಾಗೂ ಪ್ರಶಸ್ತಿ ಪ್ರಧಾನ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಈ ಸಂದರ್ಭದಲ್ಲಿ ನೆಹರು ಯುವ ಕೇಂದ್ರ ಕೊಪ್ಪಳ, ಯುವ ಕಾರ್ಯ ಹಾಗೂ ಕ್ರೀಡಾ ಸಚಿವಾಲಯ ನೀಡುವ ಜಿಲ್ಲಾ ಮಟ್ಟದ ಅತ್ಯುತ್ತಮ ಸ್ವಚ್ಛ ಭಾರತ ಪ್ರಶಸ್ತಿಯನ್ನು ಕಿನ್ನಾಳ ಶ್ರೀ ಸ್ವಾಮಿ ವಿವೇಕಾನಂದ ಸೇವಾ ಸಂಸ್ಥೆಯು ಜಿಲ್ಲಾ ಮಟ್ಟದಲ್ಲಿ ಸ್ವಚ್ಚ ಭಾರತ ಸಮ್ಮರ್ ಇಂಟನ್ರ್ಸಿಫ್-100 ತಾಸು ಶ್ರಮಧಾನ ಕಾರ್ಯಕ್ರಮಕ್ಕೆ ಪ್ರಥಮ ಸ್ಥಾನ ಪಡೆದಿದ್ದು ಸಂಸ್ಥೆಯ ಅಧ್ಯಕ್ಷ ಮೌನೇಶ ಕಿನ್ನಾಳ ಹಾಗೂ ಪಧಾದಿಕಾರಿಗಳಾದ ಮೈಲಾರಪ್ಪ ಕುಣಿ, ಲಿಂಗರಾಜ ಶಿರಗೇರಿ,ಸಂತೋಷ ಬೀಸನಳ್ಳಿ, ರಮೇಶ ಅಂಚೆಕಚೇರಿ ಇವರಿಗೆ ನೀಡಿ ಗೌರವಿಸಲಾಯಿತು.
ನಂತರ ಕಾರ್ಯಕ್ರಮವನ್ನು ಉದ್ದೇಶಿಸಿ ಶರಣಪ್ಪ ಸಿಂದೋಗಿ ಮಾತನಾಡಿ ಪ್ರಸ್ತುತ ಸಮಾಜದಲ್ಲಿ ಯುವಕರ ಪಾತ್ರ ಏನು, ಸಂಘ ಸಂಸ್ಥೆಗಳು ಯಾವ ರೀತಿಯ ಕಾರ್ಯಚಟುವಟಿಕೆಯಲ್ಲಿ ಭಾಗಿಯಾಗಬೇಕು ಹಾಗೂ ಸೇವೆ, ಶಿಕ್ಷಣ, ರಾಷ್ಟ್ರೀಯತೆಯ ಕುರಿತು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಸಮನ್ವಯ ಅಧಿಕಾರಿ ಡಿ.ದಯಾನಂದ, ಕಾನೂನು ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಬಸವರಾಜ ಹನಸಿ, ರಾಮರಾವ್ ಬಿರಾದಾರ್, ಸಿದ್ದಲಿಂಗಯ್ಯ,ವೆಂಕಟೇಶ ಬ್ಯಾಡಗಿ, ಬಸಯ್ಯ ಹಿರೇಮಠ, ವಿರುಪಾಕ್ಷಪ್ಪ ಮೊರೇನಾಳ, ಶಂಕರ ಸುರಳ ಸೇರಿದಂತೆ ನೆಹರು ಯುವ ಕೇಂದ್ರದ ಸಿಬ್ಬಂದಿಗಳು, ವಿವಿಧ ಗ್ರಾಮಗಳ ಸಂಘಗಳ ಪಧಾದಿಕಾರಿಗಳು, ಕಾಲೇಜಿನ ವಿದ್ಯಾರ್ಥಿಗಳು ಉಪಸ್ಥಿತರಿದ್ದರು
ಕೊಪ್ಪಳ: ತಾಲ್ಲೂಕಿನ ಕಿನ್ನಾಳ ಗ್ರಾಮದಲ್ಲಿ ಶ್ರೀ ಸ್ವಾಮಿ ವಿವೇಕಾನಂದ ಸೇವಾ ಸಂಸ್ಥೆ(ರಿ) ಕಿನ್ನಾಳ ನೇತೃತ್ವದಲ್ಲಿ ಶ್ರೀ ಸ್ವಾಮಿ ವಿವೇಕಾನಂದರ 156ನೇ ಜಯಂತೋತ್ಸವದ ಅಂಗವಾಗಿ ಬಹಿರಂಗ ಸಭೆ ಮತ್ತು ಸಮರ್ಥ ಸಾರಥಿಯೊಂದಿಗೆ ತಿರಂಗಾ ಯಾತ್ರೆ ಕಾರ್ಯಕ್ರಮವನ್ನು ಶ್ರೀ ಸ್ವಾಮಿ ವಿವೇಕಾನಂದ ವೃತ್ತ (ಕಾಮನಕಟ್ಟೆ)ಯಲ್ಲಿ ಆಯೋಜಿಸಲಾಗಿತ್ತು ಕಾರ್ಯಕ್ರಮದ ಪ್ರಸ್ತಾವಿಕ ನುಡಿಗಳನ್ನು ಸಂಸ್ಥೆಯ ಅಧ್ಯಕ್ಷ ಮೌನೇಶ ಕಿನ್ನಾಳ ಮಾತನಾಡಿ ಶಿಕ್ಷಣ ಸಂಸ್ಕೃತಿ ಸ್ವಾವಲಂಬನೆ ಎನ್ನುವ ದ್ಯೇಯ ವಾಕ್ಯದೊಂದಿಗೆ ಸ್ವಾಮಿ ವಿವೇಕಾನಂದರ ಕನಸಿನನಂತೆ ಸದೃಢ ಭಾರತಕ್ಕಾಗಿ ಸದೃಢ ಯುವಜನತೆ ತಯಾರಿಯೊಂದಿಗೆ ಅನೇಕ ಸಾಮಾಜಿಕ,ಶೈಕ್ಷಣಿಕ, ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಸಂಸ್ಥೆ ಕೆಲಸ ಮಾಡುತ್ತಿದ್ದು ಸಮಾಜ ಕಟ್ಟುವ ಕಾರ್ಯಕ್ಕೆ ಎಲ್ಲರೂ ಕೈ ಜೋಡಿಸಬೇಕು ಎಂದರು.
ನಂತರ ಮುಖ್ಯಭಾಷಣಕಾರರಾದ ವಸಂತ ಪೂಜಾರ ಮಾತನಾಡಿ ವಿವೇಕಾನಂದರ ಆದರ್ಶಗಳನ್ನು ಮೈಗೂಡಿಸಿಕೊಂಡ ಪ್ರತಿಯೊಬ್ಬರೂ ಅಸಾಮಾನ್ಯರಾಗಿದ್ದಾರೆ ಶಕ್ತಿಯೇ ಜೀವನ ದುರ್ಬಲತೆಯೇ ಮರಣ ಎನ್ನುವ ಕುರಿತು ಉದಾಹರಣೆಗಳೊಂದಿಗೆ ವಿಷಯವನ್ನು ತಿಳಿಸಿ ವ್ಯಸನಮುಕ್ತರಾದಗ ಮಾತ್ರ ಯುವಜನತೆ ಸದೃಢರಾಗಲು ಸಾಧ್ಯ, ಜಾತಿ ಜನಾಂಗ ಭಾಷೆ ಎಲ್ಲವನು ದಾಟಿ ಸ್ವಂತಕ್ಕೆ ಸ್ವಲ್ಪ ದೇಶಕ್ಕೆ ಸರ್ವಸ್ವ ಎನ್ನುವ ನಿಟ್ಟಿನಲ್ಲಿ ಜಾಗೃತರಾಗಬೇಕು, ದೇಶಸೇವೆಗೆ ಮುಂದಾಗಬೇಕು ಎಂದರು
ನಂತರ ಅಧ್ಯಕ್ಷಿಯ ಭಾಷಣವನ್ನು ಕೆ.ವೆಂಕಾರೆಡ್ಡಿ ಪ್ರಾಚಾರ್ಯರು ಸರ್ಕಾರಿ ಪದವಿ ಪೂರ್ವ ಕಾಲೇಜು ಕಿನ್ನಾಳ ಮಾತನಾಡಿದರು, ಮಂಜುನಾಥ ಏಣಿಗಿ ವೇಧಿಕೆಯಲ್ಲಿದ್ದರು ಬಹಿರಂಗ ಸಭೆ ನಂತರ ಗ್ರಾಮದ ಮುಖ್ಯರಸ್ತೆಗಳಲ್ಲಿ ತಿರಂಗಾ ಯಾತ್ರೆಯನ್ನು ಹಮ್ಮಿಕೊಳ್ಳಲಾಯಿತು..
ಈ ಸಂದರ್ಭದಲ್ಲಿ ಗ್ರಾಮದ ಹಿರಿಯರಾದ ನರಸಿಂಹರಾವ್ ಕುಲಕರ್ಣಿ, ಪರಸಪ್ಪ ಗಡಗಿ, ಮಂಜುನಾಥ ಶಿರಗೇರಿ, ಉದಯಕುಮಾರ ಚಿತ್ರಗಾರ,ವಿರುಪಾಕ್ಷಪ್ಪ ಬಾರಕೇರ,ಮಲ್ಲಪ್ಪ ಉದ್ದಾರ, ಸಂತೋಷ ಕಠಾರೆ, ಲಿಂಗರಾಜ್ ಶಿರಗೇರಿ, ಮೈಲಾರಪ್ಪ ಕುಣಿ, ಮಾರ್ಕಂಡೇಶ್ವರ, ಕನಕಪ್ಪ ಉಪ್ಪಾರ, ವಿರೇಶ ವಾಲ್ಮೀಕಿ, ಅಮರೇಶ ಉದ್ದಾರ, ಮಂಜುನಾಥ ಬಡಗಲ್, ಸಂತೋಷ ಬೀಸನಳ್ಳಿ, ರಮೇಶ ಅಂಚೆಕಚೇರಿ,ಸಣ್ಣೆಪ್ಪ ಕರಬ್ಯಾಳಿ,ಸಂತೋಷ್,ರಘುವೀರ ಪತ್ತಾರ,ಬಸವರಾಜ ವಾಲ್ಮೀಕಿ,ಪ್ರಶಾಂತ ಹಿರೇಮಠ,ಸಂಗಮೇಶ ಪಾಗಿ,ರವಿಕಿರಣ ಕೆ,ಶಿವುಕುಮಾರ ಕೆ,ಉಮೇಶ ಬಂಡಿಹಾಳ,ಅಕ್ಷಯಕುಮಾರ್ ಪರಗಿ,ಮಂಜುನಾಥ ಗ್ವಾಡೇಕೇರ,ಹನುಮಂತ ಕುಂಬಾರ,ರಾಘು ಕಮ್ಮಾರ,ಪವನ್,ಅಣ್ಣಯ್ಯ ಜೋಗಿನ್, ಸರಸ್ವತಿ ಗಡಗಿ, ಮಮತಾ ಹಳಪೇಟೆ, ಉಮಾ ಬಡಿಗೇರ್ ಸೇರಿದಂತೆ ಕಿನ್ನಾಳ ಕಾಲೇಜಿನ ಶಿಕ್ಷಕರು, ವಿದ್ಯಾರ್ಥಿಗಳು, ಗ್ರಾಮಸ್ಥರು ಸಂಸ್ಥೆಯ ಸರ್ವ ಸದಸ್ಯರು ಭಾಗಿಯಾದರು. ರಾಘವೇಂದ್ರ ಕಿನ್ನಾಳ ನಿರೂಪಿಸಿದರು, ಪ್ರಶಾಂತ ತಿಮ್ಮಕ್ಕನವರ ವಂದಿಸಿದರು...