Saturday, March 31, 2018
Saturday, March 10, 2018
ನೀರಿನ ಅರವಟಿಗೆ ಉದ್ಘಾಟನೆ
ಕೊಪ್ಪಳ : ತಾಲೂಕಿನ ಕಿನ್ನಾಳ ಗ್ರಾಮದಲ್ಲಿ ಶ್ರೀ ಸ್ವಾಮಿ ವಿವೇಕಾನಂದ ಸೇವಾ ಸಂಸ್ಥೆ (ರಿ) ವತಿಯಿಂದ ಬಸವೇಶ್ವರ ವೃತ್ತದ ಸ್ವಾಮಿ ವಿವೇಕಾನಂದ ಬಸ್‍ನಿಲ್ದಾಣದಲ್ಲಿ ಸಾರ್ವಜನಿಕ ಹಾಗೂ ಪಕ್ಷಿ ಸಂಕುಲಕ್ಕೆ ಕುಡಿಯುವ ನೀರಿನ ಅರವಟಿಗೆಗಳ ಉದ್ಘಾಟನೆಯನ್ನು ಗ್ರಾ.ಪಂ ಸದಸ್ಯ ವೀರಭದ್ರಪ್ಪ ಗಂಜಿ ಅವರು ನೆರವೇರಿಸಿ ಮಾತನಾಡುತ್ತಾ ಈ ಸಂಸ್ಥೆಯು ವರ್ಷವಿಡಿ ಚಟುವಟಿಕೆಯಲ್ಲಿ ತೊಡಗಿದ್ದು ಅನೇಕ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಳ್ಳುವುದರ ಜೊತೆಗೆ ಪ್ರತಿ ವರ್ಷ ಸಾರ್ವಜನಿಕರಿಗೆ ಕುಡಿಯುವ ನೀರಿನ ಅರವಟಿಕೆಯನ್ನು ಮಾಡುತ್ತಿರುವುದು ಪ್ರಯಾಣಿಕರಿಗೆ, ಪರಸ್ಥಳದವರಿಗೆ, ವಿದ್ಯಾರ್ಥಿಗಳಿಗೆ ತುಂಬಾ ಉಪಯೋಗವಾಗುತ್ತಿದ್ದು ಇನ್ನೂ ಹೆಚ್ಚು-ಹೆಚ್ಚು ಸಾಮಾಜಿಕ, ಧಾರ್ಮಿಕ ಶೈಕ್ಷಣಿಕ ಕಾರ್ಯಗಳು ನಿಮ್ಮಿಂದಾಗಲಿ ಹಾಗೆಯೇ ಜೀವ-ಜಲ, ಶಿಕ್ಷಣ, ಮೂಢ ನಂಭಿಕೆ, ಅನ್ಯಾಯ ಭ್ರಷ್ಟಚಾರಗಳ ಕುರಿತು ಜನರಿಗೆ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಕೈಗೊಳ್ಳುವಂತಾಗಲಿ ಸದಾ ನಾವು ಮತ್ತು ಗ್ರಾಮಸ್ಥರು ಸಹಕಾರ ನೀಡುತ್ತೇವೆ ಎಂದರು.
ಈ ಸಂದರ್ಭದಲ್ಲಿ ಗ್ರಾಮದ ಹಿರಿಯರಾದ ಮಾಹದೇವಯ್ಯ ಹಿರೇಮಠ, ಉದಯಕುಮಾರ ಚಿತ್ರಗಾರ, ಮಂಜುನಾಥ ಸಿರಿಗೇರಿ, ಶಂಕರಸಾ ಕಠಾರೆ, ಪ್ರಶಾಂತ ಕುಲಕರ್ಣಿ, ದಾವಸಾಬ್ ಕನಕಗಿರಿ ಹಾಗೂ ಸಂಸ್ಥೆಯ ಅಧ್ಯಕ್ಷ ಮೌನೇಶ ಕಿನ್ನಾಳ ಪದಾಧಿಕಾರಿಗಳಾದ ಲಿಂಗರಾಜ ಶಿರಿಗೇರಿ, ಮೈಲಾರಪ್ಪ ಕುಣಿ, ರಾವೇಂದ್ರ ಉಪ್ಪಾರ, ನವೀನ ಬಳೂಚಿಗಿ, ಸಂತೋಷ ಬಿಸನಳ್ಳಿ, ಸುರೇಶ ಕಳ್ಳಿಮನಿ, ಪವನ್ ಬಣ್ಣದ, ಉಮೇಶ ಅರಕೇರಿ, ಪ್ರದೀಪ್ ಸಿರಿಗೇರಿ, ನಾಗರಾಜ ಕಲಾಲ್, ಶರಣಪ್ಪ ಲಕ್ಕುಂಡಿ, ಸಂತೋಷ ಕಠಾರೆ, ಕಿರಣ ಸಜ್ಜನ್, ನಾರಾಯಣ ಸಿಂದ್ಲಿ, ಕುಮಾರ ಖಾಕಿ, ಹನುಮೇಶ ಬಿಸನಳ್ಳಿ ಸೇರಿದಂತೆ ಆಟೋ ಚಾಲಕರು, ಹಮಾಲರ ಸಂಘದವರು, ಗ್ರಾ.ಪಂ ಸದಸ್ಯರು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
Friday, January 12, 2018
ಸ್ವಾಮಿ ವಿವೇಕಾನಂದರ 155ನೇ ಜಯಂತಿ ಆಚರಣೆ
ಕೊಪ್ಪಳ : ತಾಲೂಕಿನ ಕಿನ್ನಾಳ ಗ್ರಾಮದ ಶ್ರೀ ಸ್ವಾಮಿ ವಿವೇಕಾನಂದ ಸೇವಾ ಸಂಸ್ಥೆ(ರಿ) ವತಿಯಿಂದ ಸ್ವಾಮಿ ವಿವೇಕಾನಂದರ 155ನೇ ಜಯಂತಿಯನ್ನು ಗ್ರಾಮದ ವಿವೇಕಾನಂದ ವೃತ್ತ (ಕಾಮನಕಟ್ಟಿ) ಯಲ್ಲಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷ ಮೌನೇಶ ಕಿನ್ನಾಳ ಮಾತನಾಡಿ ಸ್ವಾಮಿ ವಿವೇಕಾನಂದರ ಆದರ್ಶ ಮತ್ತು ಸಿದ್ದಾಂತಗಳನ್ನು ಮಾರ್ಗದರ್ಶನವನ್ನಾಗಿಸಿಕೊಂಡು ಸಂಸ್ಥೆಯು ಶಿಕ್ಷಣ, ಸಂಸ್ಕøತಿ, ಸ್ವಾವಲಂಬನೆ ಎಂಬ ದೇಯ್ಯೂದ್ಯೇಶಗಳನ್ನು ಮುಂದಿಟ್ಟುಕೊಂಡು ಗ್ರಾಮದ ಹಾಗೂ ಯುವ ಜನತೆಯ ಆಶಾಕಿರಣವಾಗಿ ಶ್ರೀ ಸ್ವಾಮಿ ವಿವೇಕಾನಂದ ಸೇವಾ ಸಂಸ್ಥೆಯು ಬೆಳೆಯುತ್ತಿದೆ. ಪ್ರತಿ ವರ್ಷದಂತೆ ಈ ವರ್ಷವೂ ಕೂಡಾ ವೀರ ಸನ್ಯಾಸಿಯ ಜಯಂತಿಯನ್ನು ಆಚರಿಸುತ್ತಿದ್ದು ಗ್ರಾಮದ ಎಲ್ಲಾ ಯುವಕರು, ಹಿರಿಯರು ಉತ್ತಮ ಮಾರ್ಗದರ್ಶನ ನೀಡುತ್ತಿದ್ದು ದಿನಾಂಕ : 18.01.2018 ರ ಗುರುವಾರರಂದು ಶೋಭಾಯಾತ್ರೆ ಮತ್ತು ಬಹಿರಂಗ ಸಭೆಯನ್ನು ಹಮ್ಮಿಕೊಳ್ಳಲಾಗಿದ್ದು ಇದೇ ರೀತಿ ಎಲ್ಲರೂ ಭಾಗವಹಿಸಿ ಯಶಸ್ವಿಗೊಳಿಸಬೇಕು ಸ್ವಾಮಿ ವಿವೇಕನಾಂದರ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕೆಂದು ಹೇಳಿದರು. ಹಾಗೂ ಗ್ರಾಮದ ಹಿರಿಯರಾದ ಕಾಳಪ್ಪ ಮಾಸ್ತರ ಪತ್ತಾರ ಮಾತನಾಡಿ ಸ್ವಾಮಿ ವಿವೇಕಾನಂದರು ಪ್ರತಿಯೊಬ್ಬ ಯುವಕರ ಸ್ಪೂರ್ತಿ ಅವರೇ ಹೆಸರೇ ಒಂದು ಶಕ್ತಿ ಆ ಶ್ಕತಿಯನ್ನು ಬೆನ್ನತ್ತಿ ಹೊರಟವರು ಉತ್ತುಂಗ ಶಿಖರಕ್ಕೆ ಹೇರುತ್ತಾರೆ ಅವರ ಆದರ್ಶಗಳನ್ನು ಪಾಲಿಸುತ್ತಾ ಸಾಗಿರುವ ಸ್ವಾಮಿ ವಿವೇಕಾನಂದ ಸೇವಾ ಸಂಸ್ಥೆಯು ಹಾಗೂ ಕಿನ್ನಾಳ ಗ್ರಾಮದ ಯುವಕರು ಬಹು ಎತ್ತರಕ್ಕೆ ಬೆಳಯಲಿ ಎಂದು ಆಶಿಸುತ್ತೇನೆ ಎಂದರು.
ಹಾಗೂ ಗ್ರಾ.ಪಂ ಸದಸ್ಯ ಬಸವರಾಜ ಚಿಲವಾಡಗಿ ಮಾತನಾಡಿ ಭಾರತದ ಕೀರ್ತಿಯನ್ನು ಜಗತ್ತಿನಾದ್ಯಂತ ಸಾರಿದ ಮಹಾಪುರುಷನ ಜಯಂತಿಯನ್ನು ಆಚರಿಸುತ್ತಿರುವುದು ನಮ್ಮೆಲ್ಲರ ಭಾಗ್ಯವಾಗಿದೆ. 155 ವರ್ಷ ಕಳೆದರೂ ನರೇಂದ್ರನ ಆದರ್ಶ ಮತ್ತು ಒಂದೊಂದು ನುಡಿ ಮುತ್ತುಗಳು ಹಿಂದಿನ ಯುವ ಜನತೆಯ ಸ್ಪೂರ್ತಿಯಾಗಿದೆ. ಸ್ವಾಮಿ ವಿವೇಕಾನಂದರ ಸದೃಡ ಭಾರತಕ್ಕಾಗಿ ಸದೃಢ ಯುವಜನತೆ ಎನ್ನುವ ಮಾತು ಅಕ್ಷರಶಃ ಸತ್ಯವಾಗಿದ್ದು ಯುವ ಜನತೆ ಸದೃಢರಾದಗ ಮಾತ್ರ ಎನ್ನನ್ನಾದರೂ ಸಾಧಿಸಬಹುದು ಎಂದರು.
ಈ ಸಂದರ್ಭದಲ್ಲಿ ಹಿರಿಯರಾದ ಮಾಹದೇವಯ್ಯ ಹಿರೇಮಠ, ತೋಟಪ್ಪ ಗಾಳಿ, ನಾಗರಾಜ ಬಿದರೂರು, ಹುಚ್ಚಪ್ಪ ಬಂಡಾ, ಅಶೋಕ ಚಿತ್ರಗಾರ, ಉದಯ ಚಿತ್ರಗಾರ, ರಮೇಶ ಘೋರ್ಪಡೆ, ರವಿ ವಾಲ್ಮೀಕಿ, ಚಂದ್ರು ಕುದರಿಮೋತಿ, ಸತೀಶ ಕುಲಕರ್ಣಿ, ಮಂಜುನಾಥ ಬಳಿಗಾರ, ಈರಪ್ಪ ಹರಿಜನ, ಆನಂದ ಮಾಸ್ತರ, ಮಹೇಶ ಪತ್ತಾರ, ಕರ್ಣ ಕಟ್ಟಿಮನಿ, ನಾಗರಾಜ ಗಂಗಾವತಿ, ಶರಣಪ್ಪ ವಾಲ್ಮೀಕಿ, ಬಸವರಾಜ ಪರಗಿ, ಈರಣ್ಣ ಕಮ್ಮಾರ, ವಿರೇಶ ಇಟಗಿ, ಧರ್ಮಣ್ಣ ಮೇಟಿ, ಬೈಲಪ್ಪ ವಾಲ್ಮೀಕಿ ಹಾಗೂ ಕೃಷಿ ಪತ್ತಿನ ಸಹಕಾರ ಸಂಘದ ಸಿಬ್ಬಂದಿ ವರ್ಗ, ಗ್ರಾ.ಪಂ ಸಿಬ್ಬಂದಿ ವರ್ಗ, ಸಂಸ್ಥೆಯ ಲಿಂಗರಾಜ ಶಿರಗೇರಿ, ಮೈಲಾರಪ್ಪ ಕುಣಿ, ರಾಘವೇಂದ್ರ ಉಪ್ಪಾರ, ರಂಜಿತ ಕಳ್ಳಿಮನಿ, ಪ್ರದೀಪ ಶಿರಗೇರಿ,, ಸಂತೋಷ ಕಟಾರೆ, ಪ್ರವೀಣ ಇಂಡಿ, ಉಮೇಶ ಬಂಡಿಹಾಳ, ಪ್ರಸನ್ನ ವಾಲ್ಮೀಕಿ, ರವಿ ಬುಡಶೆಟ್ನಾಳ, ಶರಣಪ್ಪ ಬುಡಶೆಟ್ನಾಳ, ಹನುಮೇಶ ಚಿಕ್ಕಬೀಡನಾಳ, ಶಿವು ಹಳೇಪೇಟೆ, ನಾರಾಯಣ ಕಡ್ಲಿಬಾಳ, ಹನುಮಂತ ಕಡಗತ್ತಿ, ಮುತ್ತುರಾಜ, ಮಂಜುನಾಥ, ನಾರಾಯಣ ಸಿಂದ್ಲಿ, ರಾಕೇಶ ಆರೆರ್, ರವಿಕಿರಣ ಕೆ.ಎಲ್, ವಿನಾಯಕ ಪೂಜಾರ, ಹನುಮಂತ ಕುಂಬಾರ, ಮಂಜುನಾಥ ಚಿತ್ರಗಾರ, ಸಣ್ಣೆಪ್ಪ ಕಾರಬ್ಯಾಳಿ, ಕೃಷ್ಣ ಮಾಲವಿ, ಪ್ರತಿಬಾ ಕಾತರಕಿ, ಪೂಜಾ, ವಿದ್ಯಾ, ಸುಮಂಗಲಾ ಸೇರಿದಂತೆ ಇತರರು ಉಪಸ್ಥಿತರಿದ್ದರು.
Thursday, December 28, 2017
Saturday, September 16, 2017
ಪರಿಸರ ಸ್ನೇಹಿ ಗಣೇಶ ಹಬ್ಬ ಆಚರಣೆ
ಕೊಪ್ಪಳ: ತಾಲೂಕಿನ ಕಿನ್ನಾಳ ಗ್ರಾಮದ ಕೌಲಪೇಟೆ ಓಣಿಯಲ್ಲಿ ಶ್ರೀ ಸ್ವಾಮಿ ವಿವೇಕಾನಂದ ಸೇವಾ ಸಂಸ್ಥೆ ವತಿಯಿಂದ ಗಣೇಶ ಹಬ್ಬವನ್ನು ಪರಿಸರ ಸ್ನೇಹಿಯಾಗಿ ಆಚರಣೆ ಮಾಡುವಂತೆ ಜನಜಾಗೃತಿ ಕಾರ್ಯಕ್ರಮವನ್ನು ಮಾಡಿದ್ದರು.
ಗಣೇಶ ಹಬ್ಬದಲ್ಲಿ ಪಿಓಪಿ ಗಣೇಶ, ವಿಗ್ರಹ, ಮದ್ದು, ಪಟಾಕಿ ಸೇರಿದಂತೆ ಪರಿಸರಕ್ಕೆ ಹಾನಿಯಾಗುವಂತಹ ಯಾವುದೇ ಚಟುವಟಿಕೆ ಮಾಡದಂತೆ ಜನರಿಗೆ ತಿಳಿಹೇಳಿದ್ದರು. ಜೆಡಿ ಮಣ್ಣಿನಿಂದ ಮಾಡಿದ ಗಣಪತಿಯನ್ನು ಮನೆಯಲ್ಲಿ ಇಡುವಂತೆ ಮತ್ತು ಪಟಾಕಿ ಬಿಟ್ಟು ದೀಪ ಹಚ್ಚುವಮತೆ ಜಾಗೃತಿ ಮೂಡಿಸಿದ್ದರು.ಜಾಗೃತಿಯಲ್ಲಿ ಸರ್ವ ಸದಸ್ಯರು ಗ್ರಾಮದ ಮುಖಂಡರು ಹಾಗೂ ಮತ್ತಿತರರು ಉಪಸ್ಥಿತರಿದ್ದರು.
Monday, August 21, 2017
ಪಂಚಾಯತ್ ಅಭಿವ್ರದ್ದಿ ಅಧಿಕಾರಿಗಳಿಗೆ ರಸ್ತೆಗಳ ದುರಸ್ತಿ ಕುರಿತು ಮನವಿ ಸಲ್ಲಿಕೆ
ಕಿನ್ನಾಳ: ( ಜುಲೈ
19 ರಂದು) ಶ್ರೀ ಸ್ವಾಮಿ ವಿವೇಕಾನಂದ ಸೇವಾ ಸಂಸ್ಥೆ ವತಿಯಿಂದ
ಕಿನ್ನಾಳ ಗ್ರಾಮದ ಮೂಲಭೂತ ಸಮಸ್ಯೆಗಳಲ್ಲಿ ಒಂದಾದ ರಸ್ತೆಗಳ ದುರಸ್ತಿ ವಿನಾಯಕ ನಗರ 116 ಮತ್ತು ಸರ್ಕಾರಿ ಆಸ್ಪತ್ರೆ ಹಾಗೂ ಸರ್ಕಾರಿ ಶಾಲಾ ಕಾಲೇಜಿಗೆ ಸಂಪರ್ಕ ಕಲ್ಪಿಸುತ್ತಿರುವ ರಸ್ತೆ ಕುರಿತು ಪಂಚಾಯತ್ ಅಭಿವ್ರದ್ದಿ ಅಧಿಕಾರಿಗಳೊಂದಿಗೆ ಚರ್ಚಿಸಿ, ಶ್ರೀ ಸ್ವಾಮಿ ವಿವೇಕಾನಂದ ಸೇವಾ ಸಂಸ್ಥೆ ಸದಸ್ಯರಿಂದ ಮನವಿ ನೀಡಲಾಯಿತು
Saturday, August 19, 2017
Friday, July 21, 2017
ಸ್ವಯಂಪ್ರೇರಿತ ವನಮಹೋತ್ಸವ
ಕಿನ್ನಾಳ :( ಜುಲೈ 07 ರಂದು) ತಾಲೂಕಿನ ಕಿನ್ನಾಳ ಗ್ರಾಮದಲ್ಲಿ ಶ್ರೀ ಸ್ವಾಮಿ ವಿವೇಕಾನಂದ ಸೇವಾ ಸಂಸ್ಥೆ ವತಿಯಿಂದ 2ನೇ ಹಂತದ ಸಸಿ ನೆಡುವ ಕಾರ್ಯವನ್ನು ಬಸ್ ನಿಲ್ದಾಣದಲ್ಲಿನೆರವೇರಿಸಲಾಯಿತು.ಈ ಕಾರ್ಯಕ್ರಮದಲ್ಲಿ ಸರಕಾರಿ ಪದವಿ ಪೂರ್ವ ಕಾಲೇಜಿನ ಎಲ್ಲಾ ವಿದ್ಯಾರ್ಥಿಗಳು ಸ್ವಯಂಪ್ರೇರಿತರಾಗಿ ಪಾಲ್ಗೊಂಡು ಬಬೊಬ್ಬ ವಿದ್ಯಾರ್ಥಿಗಳು ಒಂದೊಂದು ಸಸಿಗಳನ್ನು ನೆಟ್ಟು ಕಾರ್ಯವನ್ನು ಯಶಸ್ವಿಗೊಳಿಸಿದರು. ಸಂಸ್ಥೆಯ ಜಂಟಿ ಕಾರ್ಯದರ್ಶಿ ರಾಘವೇಂದ್ರ ಉಪ್ಪಾರ ಮಾತನಾಡಿ ಸಸಿ ನೆಡುವ ಕಾರ್ಯಕ್ರಮವು ಕೇವಲ ಕಾರ್ಯಕ್ರಮವಾಗದೇ ಪ್ರತಿಯೊಬ್ಬರು ಇದೇ ಆಸಕ್ತಿಯನ್ನು ಮುಂದುವರಿಸಿಕೊಂಡು ತಾವು ನೆಟ್ಟಿರುವ ಸಸಿಗಳ ಪಾಲನೆ. ಪೋಷಣೆ ಮಾಡಿದಾಗ ಮಾತ್ರ ಈ ಕಾರ್ಯಕ್ರಮಕ್ಕೆ ಅರ್ಥ ಬರುತ್ತದೆ. ಯುವಜನತೆ ಪರಿಸರ ಸಂರಕ್ಷಣೆಗೆ ಮುಂದಾಗಬೇಕು ಎಂದರು. ಸಂಸ್ಥೆ ಅಧ್ಯಕ್ಷರು ಮೌನೇಶ ಕಮ್ಮಾರ ಉಪಾಧ್ಯಕ್ಷ ಲಿಂಗರಾಜ ಶಿರಗೇರಿ. ಕಾರ್ಯದರ್ಶಿ ಮೈಲಾರಪ್ಪ ಕುಣಿ , ಅಶ್ವತ್ ನಾರಾಯಣ ಸಾಗರ, ರವಿಕಿರಣ್ ಶ್ಯಾವಿ,ನಾರಾಯಣ ಕಡ್ಲಿಬಾಳ, ಮಂಜುನಾಥ ಮ್ಯಾಗೇರಿ, ಸರಸ್ವತಿ ಗಡಗಿ,ಮಮತಾ ಹಳಪೇಟೆ , ಉಮಾ ಬಡಗೇರಿ,ಶಿಲ್ಪಾ ಗಡಗಿ, ಸುಮಾ ಹಂಚಿನಾಳ, ಸೇರಿದಂತೆ ಊರಿನ ಗ್ರಾಮಸ್ಥರು ಹಾಗೂ ಸಂಸ್ಥೆಯ ಎಲ್ಲಾ ಸದಸ್ಯರು ಉಪಸ್ಥಿತಿಯಲ್ಲಿ ಇದ್ದರು.
Subscribe to:
Posts (Atom)


























